ಸೂಪರ್ ಸ್ಟಾರ್  ರಾಜೇಶ್ ಖನ್ನರ ರ  ಚಿತ್ರವೊಂದಕ್ಕೆ   ದಿಲೀಪ್ ಕುಮಾರ್ ಒಮ್ಮೆ ಕ್ಲಾಪರ್ ಬಾಯ್ ಆಗಿ ಕೆಲಸ ಮಾಡಲು ರಾಜಿಯಾಗಿದ್ದು   !

ಸೂಪರ್ ಸ್ಟಾರ್  ರಾಜೇಶ್ ಖನ್ನರ ರ  ಚಿತ್ರವೊಂದಕ್ಕೆ   ದಿಲೀಪ್ ಕುಮಾರ್ ಒಮ್ಮೆ ಕ್ಲಾಪರ್ ಬಾಯ್ ಆಗಿ ಕೆಲಸ ಮಾಡಲು ರಾಜಿಯಾಗಿದ್ದು   !

ಚಿತ್ರ

ಮುಹೂರತ್ ಶಾಟ್ ಕ್ಲಾಪರ್ ಬಾಯ್, ಕೆಲಸವನ್ನು  ಒಮ್ಮೆ ಅಪ್ರತಿಮ ಬಾಲಿವುಡ್  ಚಲನಚಿತ್ರ ಅಭಿನೇತಾ  ದಿಲೀಪ್ ಕುಮಾರ್  ಒಪ್ಪಿಕೊಂಡು ಮಾಡಿದ್ದರು. ಕ್ಲಾಪರ್ ಶಾಟ್ ಮಾಡುವುದು ಒಂದು ತರಹದ ಶುಭಾರಂಭ ಅಂದರೆ ; ಯಾವುದೇ ಹೊಸಚಿತ್ರವನ್ನು ಚಿತ್ರೀಕರಿಸಲು  ಶ್ರೀಗಣೇಶ್ ಮಾಡುವ ಸಲುವಾಗಿ 'ಸೀನ್ ಒನ್, ಟೇಕ್ ಒನ್ ಎಂದು  ಸಾಮಾನ್ಯವಾಗಿ ಗಣನೆಗೆ ತೆಗೆದುಕೊಳ್ಳುವ ಈ ವಿಧಿ ಎಷ್ಟು ಬಾರಿ ಕ್ಯಾಮರಾದಿಂದ ಹೊಸದಾಗಿ ತೆಗೆದುಕೊಂಡಾಗಲೂ ಆ ಚಿಕ್ಕ ಮರದ ಪಟ್ಟಿಯಲ್ಲಿ ಬರೆದು ದಾಖಲು ಮಾಡುವುದು ಒಂದು ಪ್ರಮುಖ ಕ್ರಿಯೆಯಾಗಿತ್ತು.  ಇದರಿಂದ ಮುಂದೆ ಫಿಲಂ  ರೀಲ್ ಎಡಿಟ್ ಮಾಡುವಾಗ ಯಾವುದನ್ನೂ ಆರಿಸಿಕೊಳ್ಳುವುದು ; ಯಾವುದನ್ನೂ ಬಿಡುವುದು, ಅಂದರೆ ಕತ್ತರಿ ಹಾಕಿ ಬೇರ್ಪಡಿಸುವುದಕ್ಕೆ ಅನುಕೂಲವಾಗುತ್ತದೆ. ಸಾಮಾನ್ಯವಾಗಿ ಹೊಸಚಿತ್ರ ಪ್ರಾರಂಭಿಸುವಾಗ ಒಬ್ಬ ಸೆಲೆಬ್ರಿಟಿ ನಟನನ್ನು ಕ್ಲಾಪರ್ ಬಾಯ್ ಕೆಲಸಕ್ಕೆ ಆಯ್ಕೆಮಾಡಿಕೊಳ್ಳುವುದು ಸರ್ವೇ ಸಾಮಾನ್ಯವಾದ ಸಂಗತಿಯಾಗಿತ್ತು. ಹಿಂದಿ ಚಿತ್ರರಂಗದ ಶೋಮನ್ ಎಂದು ಹೆಸರುಗಳಿಸಿದ  ರಾಜ್ ಕಪೂರ್  ಸಹಿತ, ಒಬ್ಬ ಕ್ಲಾಪರ್ ಬಾಯ್ ಆಗಿ ಕೀದಾರ್ ಶರ್ಮಾರವರ ಚಿತ್ರಕ್ಕೆ  ಕೆಲಸಮಾಡಿದ್ದರು. 

ಗಲ್ಲ ಪೆಟ್ಟಿಗೆಯಲ್ಲಿ ಅತಿ ಯಶಸ್ಸು ಗಳಿಸಿದ ದಾಗ್ ಚಿತ್ರದ ಚಿತ್ರೀಕರಣದ ಸಮಯದಲ್ಲಿ :

೧೯೭೩ ರಲ್ಲಿ ಬಿಡುಗಡೆಯಾದ 'ದಾಗ್' ಚಿತ್ರ ಶೂಟಿಂಗ್ ಮಾಡುವ ಸಮಯದ ಮಾತು. ಯಶ್ ಚೋಪ್ರರವರ ಕೆರಿಯರ್ ನ  ಮೊಟ್ಟಮೊದಲ ಚಿತ್ರವಾಗಿತ್ತು. ಅವರು ತಮ್ಮ ಅಣ್ಣ ಬಿ. ಆರ್. ಛೋಪ್ರಾರಿಂದ ಬೇರೆಯಾಗಿ, ತಮ್ಮದೇ ಆದ  ಯಶ್ ರಾಜ್ ಲಾಂಛನ'ದಲ್ಲಿ ಚಿತ್ರಗಳನ್ನು ನಿರ್ಮಿಸಲು ಹೊರಟಿದ್ದರು. 'ದಾಗ್  ಅವರ ಚೊಚ್ಚಲ ಚಿತ್ರ'. ಮೊದಲ ಮುಹೂರ್ತದ ಕ್ಯಾಮರಾ ಶಾಟ್ ತೆಗೆಯಲು ಬಾಲಿವುಡ್  ಚಿತ್ರೋದ್ಯಮದ  ಮಹಾನ್ ಲೆಜೆಂಡ್ ಎಂದು ಹೆಸರಾಗಿದ್ದ ದಿಲೀಪ್ ಕುಮಾರ್ ರನ್ನು ಆಹ್ವಾನಿಸಿದರು.  ಈ ಕೆಲಸಕ್ಕೆ  ರಾಜಿಯಾಗಿ ಒಪ್ಪಿಕೊಳ್ಳಲು ದಿಲೀಪ್ ಕುಮಾರ್ ಯಶ್ ಛೋಪ್ರಾರಿಗೆ ಹೊಸಮುಖದ ವ್ಯಕ್ತಿಯೇನಾಗಿರಲಿಲ್ಲ. 

'ನಯಾ ದೌರ್' ಚಲನ ಚಿತ್ರದ ನಾಯಕಿಯಾಗಿ  ಮೊದಲು 'ಮಧುಬಾಲ' ಆಯ್ಕೆಯಾಗಿದ್ದರು. ಬೊಂಬಾಯಿನಲ್ಲಿ ೧೦ ದಿನಗಳ ಫಿಲಂ ಶೂಟಿಂಗ್ ಸಹಿತ ಆಗಿತ್ತು. ಆದರೆ ಬಿ. ಆರ್ ಚೋಪ್ರಾ ತಮ್ಮ ಅಭಿಪ್ರಾಯದಂತೆ ಮಧ್ಯಪ್ರದೇಶದ ಭೂಪಾಲ್ ನ ಕಾಡಿನಲ್ಲೇ ಚಿತ್ರೀಕರಣ  ನಡೆಯಬೇಕೆಂದು ಜಿದ್ದು ಹಿಡಿದಾಗ, ಮಧುಬಾಲಾರ ತಂದೆ ಮಗಳನ್ನು ಭೂಪಾಲ್ ಗೆ ಕಳಿಸಲು ನಿರಾಕರಿಸಿದರು. ಆಗ ಚೋಪ್ರಾ ಬೇರೆ ವಿಧಿಯಿಲ್ಲದೇ  ಅಭಿನೇತ್ರಿ ಕುಮಾರಿ. 'ವೈಜಯಂತಿಮಾಲ'ರನ್ನು ಒಪ್ಪಿಸಿ, ಅಭಿನಯಿಸಲು ಆಹ್ವಾನಿಸಿದಾಗ ಚಿತ್ರೀಕರಣ  ಅದ್ಭುತವಾಗಿ ನಡೆಯಿತು. 

ಹಿಂದೆ, ಬಿ. ಆರ್. ಚೋಪ್ರಾ ನಿರ್ಮಿಸಿದ  'ನಯಾ  ದೌರ್' ಚಿತ್ರ ನಿರ್ಮಾಣದ ಸಮಯದಲ್ಲಿ ದಿಲೀಪ್ ಕುಮಾರ್ ಅಭಿನಯದ ಮೇಲೆ ಕಣ್ಣಿಟ್ಟು ನೋಡುತ್ತಿರಲು ಅಣ್ಣ ಬಿ. ಆರ್. ಚೋಪ್ರಾ  ಯಶ್ ರವರನ್ನು  ನೇಮಿಸಿದ್ದರು. ಹೀಗಾಗಿ ದಿಲೀಪ್ ಕುಮಾರ್ ಮತ್ತು ಚೋಪ್ರಾ ಪರಿವಾರ ಬಹಳ ವರ್ಷಗಳಿಂದ ಬಹಳ ಒಟ್ಟಿಗೆ ಅನ್ಯೋನ್ಯವಾಗಿ ಫಿಲಂ ನಿರ್ಮಾಣದಲ್ಲಿ ತಮ್ಮನ್ನು ತೊಡಡಿಸಿಕೊಂಡಿದ್ದರು. ಯಶ್ ಚೋಪ್ರಾ, ದಿಲೀಪ್ ಜತೆ ಕೆಲಸಮಾಡುವಾಗ  ಸ್ವಲ್ಪ ಬಿಡುವಿನ ಸಮಯ ಸಿಕ್ಕಾಗಲೆಲ್ಲಾ ಇಬ್ಬರೂ ಜೊತೆಗೂಡಿ  ಕೋಳಿಮೊಟ್ಟೆ ಬೇಯಿಸಿ, ಆಮ್ಲೆಟ್ ಮೊದಲಾದ  ಖಾದ್ಯಗಳನ್ನು ಮಾಡಿ 'ಅಂಡ ನಾಸ್ತಾ' ಜೊತೆಯಾಗಿ ಸವಿಯುತ್ತಿದ್ದರು. ಕೆಲವು ವೇಳೆ ಒಟ್ಟಿಗೆ  ೧೦ ಮೊಟ್ಟೆಗಳನ್ನು ತಿನ್ನುತ್ತಿದ್ದಾಗಿ ದಿಲೀಪ್  ಕುಮಾರ್  ತಮ್ಮ  ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ.  ನಯಾ ದೌರ್ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಬಿಡುವು ದೊರೆತಾಗ 'ಪಿಕ್ನಿಕ್' ತರಹದ ವಾತಾವರಣ ಏರ್ಪಡುತ್ತಿತ್ತು. ಆಗಿನ ಕಾಲದಲ್ಲಿ ಒಂದು ಸಮಸ್ಯೆ ಎಂದರೆ, 'ರಾ ಸ್ಟಾಕ್' ಮುಗಿದುಹೋಗುತ್ತಿದ್ದದ್ದು ಒಂದು  ಸಾಮಾನ್ಯ ವಿಚಾರವಾಗಿದ್ದು.  ಅಂದರೆ, ಕ್ಯಾಮರಾದಲ್ಲಿ ಫಿಲಂ ರೀಲ್ ಮುಗಿದುಹೋಗುತ್ತಿತ್ತು. 'ಭೂಪಾಲ್' ರಾಜ್ಯದ 'ಹೋಶಿಂಗಾಬಾದ್' ಹತ್ತಿರದ ಕಾಡಿನಲ್ಲಿ ಚಿತ್ರೀಕರಣದ ಜಾಗವನ್ನು ಆರಿಸಲಾಗಿತ್ತು. ರಾ ಸ್ಟಾಕ್ ಮುಗಿದಾಗ  ಬಾಂಬೆಯಿಂದ ಭೂಪಾಲ್ ಗೆ  ರಾ ಸ್ಟಾಕ್ ಕಳುಹಿಸಿಕೊಡುತ್ತಿದ್ದರು. ಅಲ್ಲಿಯವರೆಗೆ ಯಾರಿಗೂ ಕೆಲಸವಿಲ್ಲ. ಆ ಸಮಯದಲ್ಲಿ 'ಫುಟಬಾಲ್' ಆಟವಾಡಿ,  ಟೈಮ್ ಪಾಸ್ ಮಾಡುವ  ಪ್ರಥವಿತ್ತು. ದಾಗ್  ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಧಮಾಲ್ ಆಗಿ ಮೆರೆಯಿತು. ಯಶ್ ಛೋಪ್ರಾರಿಗೆ 'ಫಿಲಂ ಫೇರ್ ಅವಾರ್ಡ್' ಸಹಿತ  ಸಿಕ್ಕಿತು. ಚಿತ್ರೀಕರಣದ ಸಮಯದಲ್ಲಿ  ಭೇಟಿಯಾದ ದಿಲೀಪ್ ಕುಮಾರ್ ಮುಂದೆ 'ಮಶಾಲ್' ಚಿತ್ರನಿರ್ಮಾಣವಾಗುವ ತನಕ ಯಾಕೋ ಭೆಟ್ಟಿಯಾಗಲೇ ಇಲ್ಲ.  
 
ಚಿತ್ರ ಸೌಜನ್ಯತೆ : ದಿಲೀಪ್ ಕುಮಾರ್ ಮತ್ತು ಯಶ್ ಚೋಪ್ರಾ- ಡೈಲಿ ಹಂಟ್ ಇ-ಪತ್ರಿಕೆ. 

Rating
Average: 4 (1 vote)