ಬಾಂಬೆ ಟು ಗೋವಾ ಚಿತ್ರದಿಂದ ಶ್ರೀಗಣೇಶ್ ಮಾಡಿದ ಅಮಿತಾಭ್ ಬಚ್ಚನ್ ಎಂಬ ಧ್ರುವತಾರೆ ' !

ಬಾಂಬೆ ಟು ಗೋವಾ ಚಿತ್ರದಿಂದ ಶ್ರೀಗಣೇಶ್ ಮಾಡಿದ ಅಮಿತಾಭ್ ಬಚ್ಚನ್ ಎಂಬ ಧ್ರುವತಾರೆ ' !

ಚಿತ್ರ
ಹಿಂದಿ ಸಾಹಿತ್ಯ ವಲಯದ ದಿಗ್ಗಜರಲ್ಲೊಬ್ಬರೆಂದು  ಹೆಸರುಗಳಿಸಿದ  ಹರಿವಂಶರಾಯ್ ಬಚ್ಚನ್ ಪುತ್ರನೆಂದು ಖ್ವಾಜ ಅಹ್ಮದ್ ಅಬ್ಬಾಸ್ ರಿಗೆ (ಕೆ. ಎ.ಅಬ್ಬಾಸ್  ಒಳ್ಳೆಯ ಕವಿ, ಚಿತ್ರನಿರ್ಮಾಪಕ, ನಿರ್ದೇಶಕ) ಗೊತ್ತಾದಮೇಲೆ  ಮೊದಲು ನಿರ್ಧರಿಸಿದಂತೆ, ಹಿರಿಯ ನಟ, 'ತಿನ್ನು ಆನಂದ್' ರವರಿಗೆ ಮೀಸಲಾಗಿದ್ದ ಪಾತ್ರವನ್ನು ಅಮಿತಾಬ್ ಗೆ ನಾಯಕನ ಪಾತ್ರವನ್ನು ವಹಿಸಿಕೊಟ್ಟರು. ಹೀಗೆ, ಅಮಿತಾಭ್ ಬಚ್ಚನ್ ಗೆ ಬಾಲಿವುಡ್ ನ ಮೊದಲ ಬ್ರೇಕ್ ಸಿಕ್ಕಿದ್ದು ಬಾಂಬೆ ಟು ಗೋವಾ ಚಿತ್ರದಲ್ಲಿ.  ಅರುಣಾ ಇರಾನಿ, ಶತ್ರುಜ್ಞ ಸಿನ್ಹ , ಮೆಹಮೂದ್ ಬಸ್ ಕಂಡಕ್ಟರ್ ಆಗಿ, ಅಮಿತಾಭ್ ನಾಯಕ ನಟನೆಂದು ಆರಿಸಲ್ಪಟ್ಟರೂ, ಇನ್ನೂ ಜನಪ್ರಿಯವಾಗಿರದ ಹೊಸ ನಟನ ವಿರುದ್ಧ ನಾಯಕಿಯಾಗಿ ಅಭಿನಯಿಸಲು ಸುಪ್ರಸಿದ್ಧ ತಾರೆಯಾರ್ಯಾರೂ  ಮುಂದೆಬರದಿದ್ದಾಗ,  'ಅರುಣಾ ಇರಾನಿ'ಯವರು ನಾಯಕಿಯಾಗಿ ನಟಿಸಲು  ಒಪ್ಪಿದರು. ಜನಪ್ರಿಯ ಮ್ಯೂಸಿಕ್ ನಿಂದಾಗಿ ಇದು ಸಾಮಾನ್ಯ ಜನರ ಮನರಂಜನೆಯ ಚಿತ್ರವಾಗಿ ಮೂಡಿ ಬಂತು. 
 
'ಬಾಂಬೆ ಟು ಗೋವಾ', ಹಿಂದಿ ಭಾಷೆಯ ಚಿತ್ರ,  'ಮದ್ರಾಸ್ ಟು ಪಾಂಡಿಚೆರ್ರಿ' ಎಂಬ ತಮಿಳು ಚಿತ್ರದ ನಕಲು. ಮೆಹಮೂದ್ ನಟಿಸಿದ  'ಪಡೋಸನ್ 'ಬಿಟ್ಟರೆ ಈ ಚಿತ್ರ ಒಳ್ಳೆಯ ಕಾಮಿಡಿಗೆ ಪ್ರಸಿದ್ಧಿಯಾಗಿದೆ.  ಈ ಚಿತ್ರದಲ್ಲಿ ನಟಿಸಿದನಂತರ ,ಅಮಿತಾಭ್ ಫೇಮಸ್  ಆದರೂ,  ಸಲೀಮ್ ಜಾವಿದ್ ಅವರ 'ಜಂಜೀರ್ ಚಿತ್ರ' ನಿರ್ಮಾಣವಾದ ಬಳಿಕ,  ಸೂಪರ್ ಸ್ಟಾರ್ ಆಗಿ ಮನೆ-ಮನೆಯ  ಮಾತಾದರು. ಶತ್ರುಜ್ಞ ಸಿನ್ಹರನ್ನು ವಿಲನ್ ಆಗಿ ನಟಿಸಲು  ಅಮಿತಾಭ್ ಅವರು  ಬೇಡಿದರು. ಬಹಳ ಆಪ್ತ ಸ್ನೇಹಿತರಾಗಿದ್ದರಿಂದ  ಶತ್ರು, ಇಷ್ಟವಿಲ್ಲದಿದ್ದರೂ  ಒಪ್ಪಿದರು. ಬಾಂಬೆ ಟು ಗೋವಾ,  ಅರುಣಾ ಇರಾನಿ ಹೀರೋಯಿನ್ ಆಗಿ ನಟಿಸಿದ ಮೊದಲ ಚಿತ್ರ.  ಮರಾಠಿ ಆವೃತ್ತಿಯಲ್ಲಿ 'ನವ್ರಾ ಮಾಝ ನವ್ ಸಾಚಾ'  ಬಹಳ ಯಶಸ್ಸನ್ನು ಗಳಿಸಿತು.  ಸಚಿನ್ ಪಿಲ್ ಗಾವ್ಕರ್, ಮತ್ತು ಸುಪ್ರಿಯಾ ಪಿಲ್ ಗಾವ್ಕರ್  ಮುಖ್ಯ ಭೂಮಿಕೆಯಲ್ಲಿದ್ದಾರೆ.  ಲಲಿತ ಪವಾರ್  ಅಭಿನಯಿಸಿದ  ಕಾಶಿಬಾಯಿ ಪಾತ್ರ, ಮಹತ್ವದ ವಿಷಯವಾಗಿತ್ತು.  ಅಮಿತಾಬ್ ರೋಲನ್ನು ಇನ್ನೊಬ್ಬ ಹೆಸರಾಂತ ನಟ, ಜಿತೇಂದ್ರನಿಗೆ ಕೊಡಲು ಇಚ್ಛಿಸಿದಾಗ, ಅವರು ಅರುಣಾ ಇರಾನಿ ವಿರುದ್ಧ  ಅಭಿನಯಿಸಲು ಒಪ್ಪಲಿಲ್ಲ.  
 
ಆತ್ಮಾರಾಮ್ ಮತ್ತು ಪತ್ನಿ ತಮ್ಮ ಮಗಳು  ಮಾಲಾ (ಸಭಿನೇತ್ರಿ, ಅರುಣಾ ಇರಾನಿ)  'ಫೋಟೋ ಮ್ಯಾಗಸೈನ್' ನ ಮುಖ  ಪುಟದಲ್ಲಿ ಅಚ್ಚಾಗಿದ್ದನ್ನು  ಕಂಡು ಬೆಚ್ಚಿಬೀಳುತ್ತಾರೆ. ಅವರು  ತಮ್ಮ ಮಿತ್ರ  ರಾಮಲಾಲ್ ಮಗನ ಜತೆ ಮಾಲಾಳ ವಿವಾಹ ಮಾಡುವ ಸಿದ್ಧತೆಯಲ್ಲಿ ಇದ್ದರು ಆದರೆ ಮಗಳು ಮಾಲಾಗೆ ಈ ಸಂಬಂಧ  ಇಷ್ಟವಿಲ್ಲ. ಮದುವೆಯಾಗುವ ಹುಡುಗನನ್ನು ನೋಡಿರಲಿಲ್ಲ ; ಹಾಗಾಗಿ ಪರಿಚಯವಿಲ್ಲದ ಹುಡುಗನನ್ನು ಮದುವೆಯಾಗಲು ಮನಸ್ಸು ಬರಲಿಲ್ಲ. ಮಹತ್ವಾಕಾಂಕ್ಷಿಯಾದ  ಮಾಲಾಗೆ, ಹೇಗೋ  ವರ್ಮಾ ಮತ್ತು  ಶರ್ಮ ಎಂಬ ಯುವಕರ ಪರಿಚಯವಾಗುತ್ತದೆ. ಬೊಬಾಯಿನ ಬಾಲಿವುಡ್ ಚಲನಚಿತ್ರಗಳ ಬಗ್ಗೆ ಅವರಿಗೆ ಚೆನ್ನಾಗಿ ಗೊತ್ತಿರುವುದಾಗಿ ಆಕೆಗೆ ಮಾಹಿತಿ ಸಿಗುತ್ತದೆ.  ಅವರಿಬ್ಬರೂ ತಮ್ಮ ಫೋಟೋಗಳನ್ನು ಫಿಲಂ ಮ್ಯಾಗಜೈನ್ ಗೆ ಕಳುಹಿಸಿ ಕೊಟ್ಟಿದ್ದರು. ಮಾಲಾಳನ್ನು ತನ್ನ ಫೋಟೋ ಕಳಿಸಿಕೊಡಲು ಪ್ರತ್ಸಾಹಿಸುತ್ತಾರೆ.  ಬಾಲಿವುಡ್ ಚಲನ ಚಿತ್ರದಲ್ಲಿ ಅವಕಾಶ ಸಿಗುವುದೆಂದು ಮಾಲಾಗೆ ನಂಬಿಕೆ.  ಏಕೆ, ಅಪ್ಪ-ಅಮ್ಮ ವಿರೋಧಿಸುತ್ತಾರೆ ? ಎನ್ನುವುದು ಮಾಲಗೆ ಅರ್ಥವಾಗುತ್ತಿಲ್ಲ. ವರ್ಮಾ-ಶರ್ಮ ಪುಸಲಾಯಿಸಿ ಒಪ್ಪಿಸಿದಂತೆ, ಅವಳು,  ತನ್ನ  ಮನೆಯಿಂದ ಹಣ, ವಡವೆಗಳನ್ನು ಕದ್ದು ತೆಗೆದುಕೊಂಡು ಮನೆಯಿಂದ ಪರಾರಿಯಾಗುತ್ತಾಳೆ ; ಮತ್ತು  ಶರ್ಮ, ವರ್ಮಾರಿಗೆ ತಾನು ಮನೆಯಿಂದ ಕದ್ದು ತಂಡ ವಡವೆಗಳು ಮತ್ತು  ಹಣವನ್ನು ಕೊಡುತ್ತಾಳೆ. ಆದರೆ ಅವಳು ಕೊಟ್ಟ ಹಣಕ್ಕೋಸ್ಕರ  ಸ್ನೇಹಿತರಿಬ್ಬರ ನಡುವೆ ಜಗಳ ಶುರುವಾಗುತ್ತದೆ. ಶರ್ಮ ಹಣದಾಶೆಗೆ ತನ್ನ ಸ್ನೇಹಿತ ವರ್ಮನನ್ನು ಕೊಲ್ಲುತ್ತಾನೆ.  ವರ್ಮಾ ತನ್ನ ಸ್ನೇಹಿತನಿಂದಲೇ ಮರಣ ಹೊಂದಿದ್ದನ್ನು ಕಂಡು,  ಮಾಲಾ ಭಯಭೀತಳಾಗುತ್ತಾಳೆ. ಅವರಿಂದ ತಪ್ಪಿಸಿಕೊಂಡು  ಓಡಿ ಬಂದು ಒಂದು ಚಲಿಸುತ್ತಿರುವ  ಬಸ್ಸಿನೊಳಗೆ ಗಡಿಬಿಡಿಯಿಂದ ಹತ್ತುತ್ತಾಳೆ.  ಅದು ಬಾಂಬೆಯಿಂದ  ಗೋವಾಕ್ಕೆ ಹೋಗುವ ಬಸ್  ಆಗಿರುತ್ತದೆ. ಆಕೆಗೆ ಯಾವುದರ ಪರಿವೆಯೂ ಇಲ್ಲ.  ಶರ್ಮ ಅವಳನ್ನು ಹಿಂಬಾಲಿಸುತ್ತಾನೆ . ಬಸ್ಸಿನಲ್ಲಿ ಇದ್ದ ಒಬ್ಬನಿಗೆ ಸುಪಾರಿ ಹಣ ಕೊಟ್ಟು ಸಮಯ ನೋಡಿ ಮಾಲಾಳನ್ನು  ಕೊಲ್ಲಲು ಹೇಳುತ್ತಾನೆ. ಮಾಲಾ ಮುಂದೆ ಬಸ್ಸಿನಲ್ಲಿ ಹತ್ತಿ ಒಳಗೆ ಬಂದ ರವಿಕುಮಾರ್ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಮಾಲಾಳ ಬಾಡಿಗಾರ್ಡ್  ಆಗಿ ನಿಂತು  ಅವಳನ್ನು ಉಳಿಸುತ್ತಾನೆ. ಪ್ರಯಾಣದಪೂರ್ತಿ,  ಜೊತೆಯಾಗಿ  ಅವಳನ್ನು  ನೆಮ್ಮದಿಯಿಂದ ಪ್ರಯಾಣಮಾಡಲು ಸಹಾಯ ಮಾಡುತ್ತಾನೆ.  ಕೊನೆಯಲ್ಲಿ ಆಕೆ ಅವನನ್ನು ನಂಬಿ ಪ್ರೀತಿಸುತ್ತಾಳೆ. ಬಸ್ಸಿನ ಪ್ರಯಾಣಿಕರು ರಾಷ್ಟ್ರದ ಎಲ್ಲಾ ಪ್ರಾಂತ್ಯದಿಂದ ಬಂದ ಪ್ರಯಾಣಿಕರು.  ಬಸ್ಸಿನಲ್ಲಿ  ರಾಜೇಶ್ ಡ್ರೈವರ್, ಖನ್ನಾ ಕಂಡಕ್ಟರ್. ಆ ಸಮಯದಲ್ಲಿ ದೇಶದ ಸಿನಿಮಾ ರಂಗದಲ್ಲಿ  ಸೂಪರ್ ಸ್ಟಾರ್ ರಾಜೇಶ್ ಖನ್ನಾರ ಅಭಿನಯ  ಪ್ರಿಯರು.  ರಾಜೇಶ್ ಖನ್ನರಿಗೆ ಗೌರವ ಸೂಚಿಸುವ ಸಲುವಾಗಿ ಆ ಹೆಸರನ್ನು ಇಟ್ಟುಕೊಂಡಿದ್ದಾರೆ.  
 
'ಬಾಂಬೆ ಟು ಗೋವಾ ' :
 
೧೯೭೨ ರ ಹಿಂದಿ ಭಾಷೆಯ, ವಿನೋದ ಭರಿತ ಚಲನ ಚಿತ್ರ, (ಕಾಮೆಡಿ)  ಎಸ್. ರಾಮನಾಥನ್ ನಿರ್ದೇಶನ, ಮೆಹಮೂದ್, ಅಮಿತಾಭ್ ಬಚ್ಚನ್,  ಅರುಣಾ ಇರಾನಿ, ಶತ್ರುಜ್ಞಸಿನ್ಹಾ, ಸಹಾಯಕ ನಟನಾಗಿ,  ಚಿತ್ರದ ಹಾಡುಗಳು ಸಿನಿಮಾ ಪ್ರಿಯರಿಗೆ ಬಹಳ ಮೆಚ್ಚುಗೆಯಾದವುಗಳು.  ಆಕರ್ಷಣೆ ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಹಿಟ್ ೧೯೬೬ ರ ತಮಿಳು ಚಿತ್ರದ ರಿಮೇಕ್, ಮದ್ರಾಸ್ ಟು ಪಾಂಡಿಚೆರ್ರಿ ತಮಿಳಿನ ತಾಯ್  ನಾಗೇಶ್, ಪಾತ್ರವನ್ನು ಹಿಂದಿಯಲ್ಲಿ  ಮೆಹಮೂದ್ ಮಾಡಿದ್ದಾರೆ. ೨೦೦೭ ರಲ್ಲಿ ರಿಮೇಕ್ ೨೦೦೪ ರಲ್ಲಿ ಮರಾಠಿ ಚಲನ ಚಿತ್ರ,  ನವ್ರ ಮಜಾ ನವ್ ಸಾಚಾ ಸಚಿನ್ ಮತ್ತು ಹೆಂಡತಿ ಜೊತೆಯಾಗಿ, ಪುಣೆಯಿಂದ ಗಣಪತಿ ಫುಳೆಮಾಡುವ  ತೀರ್ಥಯಾತ್ರೆಯ ಧಾರ್ಮಿಕ ಚಿತ್ರ.   ಗಲ್ಲಾ ಪೆಟ್ಟಿಗೆಯಲ್ಲಿ ಬಹಳ ಹೆಸರು ಮತ್ತು ಹಣ ಮಾಡಿತ್ತು  ೨೦೦೭ ರಲ್ಲಿ ಕನ್ನಡದಲ್ಲೂ  ಏಕದಂತ ಎನ್ನುವ ಹೆಸರಿನಲ್ಲಿ ಚಿತ್ರ ನಿರ್ಮಾಣ ಮಾಡಿದ್ದರು. ದಕ್ಷಿಣ ಭಾರತದ ಪ್ರತಿಷ್ಠೆಯ ದಿನ ಪತ್ರಿಕೆ,  ಹಿಂದು ಪತ್ರಿಕೆ ವರದಿಯಂತೆ, ರಾಜೀವ್ ಗಾಂಧಿಯವರಿಗೆ  ಮೆಹಮೂದ್ ಅಭಿನಯಿಸಿದ ಕಂಡಕ್ಟರ್  ರೋಲ್ ಕೊಟ್ಟಾಗ, ಅವರು ಅದನ್ನು ನಿರಾಕರಿಸಿದರು.
 
ಶ್ರೀಮತಿ, ಇಂದಿರಾ ಗಾಂಧಿಯವರ ಆಪ್ತ ಗೆಳತಿ ಶ್ರೀಮತಿ. ತೇಜಿ ಬಚ್ಚನ್ :
 
ಅಮಿತಾಬ್ ರವರ ತಂದೆ, ಹರಿವಂಶರಾಯ್ ಬಚ್ಚನ್ ಮತ್ತು ತಾಯಿ ತೇಜಿ ಬಚ್ಚನ್ ಹಾಗೂ  ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ರವರ ಪಾರಿವಾರಿಕ ಗೆಳೆಯರು. ಇಂದಿರಾಗಾಂಧಿಯವರು ತೇಜಿ ಬಚ್ಚನ್ ರನ್ನು ಸೋದರಿಯಂತೆ ಪ್ರೀತಿಸುತ್ತಿದ್ದರು. ಒಬ್ಬರ ಮನೆಗೆ ಒಬ್ಬರು ಹೋಗುವುದು ಅಲ್ಲಿಯೇ  ಇರುವುದು ಸರ್ವೇಸಾಮಾನ್ಯವಾಗಿತ್ತು. ಹಾಗೆಯೇ ಮನೆಯಲ್ಲಿ ಮಕ್ಕಳೂ ಒಟ್ಟಿಗೆ ಆಟ  ಆಡುತ್ತಿದ್ದರು. ರಾಜೀವ್ ಗಾಂಧಿಯವರನ್ನು ಮದುವೆಯಾಗಲು ಒಪ್ಪಿದ್ದ 'ಕನ್ಯೆ,ಸೋನಿಯಾ' ದೆಹಲಿಗೆ ಬಂದಾಗ, ಶ್ರೀಮತಿ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ಆಣತಿಯಂತೆ  ಆಮಿತಾಭ್ ಬಚ್ಚನ್ ಆಕೆಯನ್ನು ಬೆಳಗಿನಜಾವ ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ  ಹೋಗಿ ಆಕೆಯನ್ನು ಬರಮಾಡಿಕೊಂಡು  ತಮ್ಮ ಮನೆಗೆ  ಕರೆತಂದರು. ಸುಮಾರು ೪೩ ದಿನ ಸೋನಿಯಾ ತೇಜಿಬಚ್ಚನ್ ರವರ ಮನೆಯಲ್ಲೇ ರಾಜೀವ್  ಗಾಂಧಿಯವರನ್ನು  ಮದುವೆಯಾಗುವವರೆಗೂ  ಇದ್ದರು. ಭಾರತೀಯ ಸಂಸ್ಕೃತಿಯ ರೀತಿ ರಿವಾಜುಗಳು, ವಿಚಾರಗಳು,ರಸಂಗಳು, ಉಡುಪು, ಖಾದ್ಯಗಳು, ತಿಂಡಿತಿನಸುಗಳ ತಯಾರಿಕೆ, ಹಬ್ಬ-ಹರಿದಿನಗಳ ಬಗ್ಗೆ ಆಚರಣೆಗಳು  ಎಲ್ಲದರ ಬಗ್ಗೆಯೂ ತೇಜಿ ಬಚ್ಚನ್, ವಿಸ್ತೃತ ಮಾಹಿತಿಯನ್ನು ಕೊಟ್ಟು, ಭಾರತೀಯ ಸೀರೆ ಉಡುವ ಪದ್ಧತಿಯನ್ನು ವ್ಯವಸ್ಥಿತವಾಗಿ ಕಲಿಸಿಕೊಟ್ಟರು. 
 
ರಾಜೀವ್ ಗಾಂಧಿಯವರ  ಆಪ್ತ ಗೆಳೆಯ ಅಮಿತಾಭ್ :
 
ಲಂಡನ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ * ರಾಜೀವ್ ಗಾಂಧಿಯವರು ಲಂಡನ್ ನಿಂದ ಭಾರತಕ್ಕೆ ಬರುವಾಗಲೆಲ್ಲ ಏನಾದರೊಂದು ಆಕರ್ಷಕ ವಸ್ತುವನ್ನು ತನ್ನ ಪ್ರೀತಿಯ ಸ್ನೇಹಿತ ಅಮಿತಾಭ್ ಬಚ್ಚನ್ ಗೆ ತಂದುಕೊಡುತ್ತಿದ್ದರು. ಒಮ್ಮೆ ಅವರು 'ಒಂದು ಜತೆ ಆಕರ್ಷಕ ಮಾಡ್ರನ್ ಡೆನಿಮ್ ಶರಾಯಿ'ಯನ್ನು ತಂದುಕೊಟ್ಟಾಗ ಅಮಿತಾಭ್ ಬಹಳ ಖುಷಿಪಟ್ಟರಂತೆ. ಅದು ಎಷ್ಟು ಅವರಿಗೆ ಪ್ರಿಯವಾಗಿತ್ತೆಂದರೆ, ಅನೇಕ ವರ್ಷ ಅದನ್ನು ವಿಶೇಷ ಸಮಯಗಳಲ್ಲಿ ತೊಡುತ್ತಿದ್ದರಂತೆ. ಇದೂ ಅಲ್ಲದೆ ತಮ್ಮ ಅನೇಕ ಚಿತ್ರಗಳಲ್ಲಿ ಅದನ್ನು ತೊಟ್ಟು ಅಭಿನಯಿಸುವುದು ಅವರಿಗೆ ಬಹಳ ಪ್ರಿಯವಾಗಿತ್ತೆಂದು ಕೆಲವು ಕಡೆ ಹೇಳಿಕೊಂಡಿದ್ದಾರೆ. ತನ್ನ ಎಲ್ಲಾ ವಿಷಯಗಳನ್ನೂ ರಾಜೀವ್ ತನ್ನ ಪ್ರಿಯ ಮಿತ್ರ ಅಮಿತಾಭ್  ಗೆ  ಪತ್ರದಲ್ಲಿ ಬರೆದು ಹಂಚಿಕೊಳ್ಳುತ್ತಿದ್ದರು. ಎಷ್ಟೋ ವಿಷಯಗಳನ್ನು ತಮ್ಮ ಪ್ರೀತಿಯ ತಾಯಿ ಇಂದಿರಾಗಾಂಧಿಯವರಿಗೂ ಬರೆಯುತ್ತಿರಲಿಲ್ಲವಂತೆ.  ಅನೇಕ ಸಲ ಇಂದಿರಾ ಗಾಂಧಿಯವರು, ತಮ್ಮ ಗೆಳತಿ  ತೇಜಿ ಬಚ್ಚನ್ ರವರನ್ನು ವಿಚಾರಿಸಿ, ರಾಜೀವ್ ಅಮಿತಾಭ್ ಗೆ ಬರೆದ ಪತ್ರಗಳಲ್ಲಿ  ತಮ್ಮ ಮಗ ರಾಜೀವ್  ಬಗ್ಗೆ ಯೋಗಕ್ಷೇಮ, ಹಾಗೂ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದರಂತೆ. 
 
ರಾಜೀವ್ ಗಾಂಧಿ, ಸಂಜಯ್ ಗಾಂಧೀ ವಿದ್ಯಾಭ್ಯಾಸಕ್ಕೆ ಹಿಮಾಲಯದ ತಪ್ಪಲಿನ ಡೂನ್ ಸ್ಕೂಲಿಗೆ ಹೋದರೆ ಅಮಿತಾಬ್  ಆಲ್ಮೊರದ  ಶೇರ್ ವುಡ್  ಸ್ಕೂಲಿಗೆ ಸೇರಿದರು. ರಾಜೀವ್ ಗಾಂಧಿಗೆ ಪೈಲಟ್ ಆಗುವ ಮಹದಾಶೆ. ಅಮಿತಾಭ್ ಗೆ ಒಬ್ಬ ಅಭಿನಯಕರ್ತನಾಗುವ ಆಶೆ. ಸ್ಕೂಲಿನ ದಿನಗಳಲ್ಲಿ ಅನೇಕ ನಾಟಕಗಳಲ್ಲಿ ಅಭಿನಯಿಸಿ ಪ್ರಶಸ್ತಿಗಳಿಸಿದ್ದರು. ತಂದೆಯವರು ಭಾಷಾಂತರಿಸಿದ ಶೇಕ್ಸ್ ಪಿಯರ್ ನ ಹಾಮ್ಲೆಟ್ ನಾಟಕದಲ್ಲಿ ಅಭಿನಯಿಸಿದಾಗ, ತಾಯಿ ತೇಜಿ ಬಚ್ಚನ್ ಸಹಿತ ನಟಿಸಿದ್ದರಂತೆ.  ಶ್ರೀ ಶಶಿಕಪೂರ್ ರವರ ಪತ್ನಿ,  ಶ್ರೀಮತಿ ಜೆನಿಫರ್ ಕೆಂಡಾಲ್ ನಾಟಕದ ನಿರ್ದೇಶಕರು. 
 
* ರಾಜೀವ್ ಗಾಂಧಿಯವರ ಹೆಸರು : 'ರಾಜೀವ್ ರತ್ನ' ಎಂದು. 
 
ಚಿತ್ರ ಸೌಜನ್ಯತೆ : Republic world.com
Rating
Average: 4 (1 vote)