ವಿಧ: ಪುಸ್ತಕ ವಿಮರ್ಶೆ
March 17, 2022
ಕುಸುಮಾ ಶಾನಭಾಗ “ಉದಯವಾಣಿ" ದಿನಪತ್ರಿಕೆಯಲ್ಲಿ ೨೦೦೮-೨೦೦೯ರಲ್ಲಿ ಎಂಟು ತಿಂಗಳ ಅವಧಿಯಲ್ಲಿ ಬರೆದ ಲೇಖನಗಳ ಸಂಗ್ರಹ ಇದು. “ಪ್ರಜಾವಾಣಿ" ವಾರ್ತಾಪತ್ರಿಕೆಯಲ್ಲಿ ಪತ್ರಕರ್ತೆಯಾಗಿ ಸ್ವಯಂನಿವೃತ್ತಿಯ ನಂತರ ಬರೆದ ಬದುಕಿನ ಅನುಭವಗಳು ಮತ್ತು ನಿತ್ಯ ಜೀವನದಲ್ಲಿ ಅವರು ಕಂಡ, ಅನುಭವಿಸಿದ ಕೆಲವು ಘಟನೆಗಳು ಇಲ್ಲಿವೆ.
ಇದರ ಒಂದೊಂದು ಲೇಖನವೂ ಮನಸ್ಸನ್ನು ತಟ್ಟುತ್ತದೆ. ಯಾಕೆಂದರೆ, ಇವೆಲ್ಲವೂ ನೈಜಕತೆಗಳೇ ಆಗಿವೆ. ಬೆಂಗಳೂರಿನ ನಂದಿನಿ ಲೇಔಟಿನಿಂದ ಕಾಣೆಯಾದ ಯುವತಿಯರ ಬಗ್ಗೆ ಬರೆದ “ಎಲ್ಲಿ ಹೋದರು ಈ…
ವಿಧ: ರುಚಿ
March 16, 2022
ಕಲ್ಲಂಗಡಿ (ಬಚ್ಚಂಗಾಯಿ) ಹಣ್ಣಿನ ಸಿಪ್ಪೆಯನ್ನು ಸಣ್ಣಗೆ ಕತ್ತರಿಸಬೇಕು. ಒಗ್ಗರಣೆಗೆ ಒಣಮೆಣಸು, ಸಾಸಿವೆ, ಅರಶಿನ ಹುಡಿ, ಕರಿಬೇವು, ತೊಗರಿ, ಉದ್ದು, ಕಡ್ಲೆ ಬೇಳೆ ಸ್ವಲ್ಪ, ಎಣ್ಣೆ ಸೇರಿಸಿಯಾದಾಗ, ಹಸಿ ಮೆಣಸಿನಕಾಯಿ ಖಾರಕ್ಕೆ ತಕ್ಕಷ್ಟು ಹಾಕಿ, ಹೆಚ್ಚಿಟ್ಟ ಹೋಳುಗಳನ್ನು ಸೇರಿಸಿ. ಸ್ವಲ್ಪ ನೀರು ಹಾಕಿ ಉಪ್ಪು, ಬೆಲ್ಲ ಹಾಕಿ ಬೇಯಿಸಬೇಕು. ಕೊತ್ತಂಬರಿ, ಜೀರಿಗೆ, ನಾಲ್ಕು ಒಣಮೆಣಸು, ತೆಂಗಿನಕಾಯಿ ಎಸಳು ಹಾಕಿ ರುಬ್ಬಿ ಸೇರಿಸಿ ಕುದಿಸಬೇಕು. ಮಸಾಲೆಪಲ್ಯ ಕುಚುಲಕ್ಕಿ ಗಂಜಿ ಜೊತೆ ರುಚಿಕರ. ಚಪಾತಿ,…
ವಿಧ: ಪುಸ್ತಕ ವಿಮರ್ಶೆ
March 15, 2022
ಪತ್ರಕರ್ತರಾದ ಪಿ.ಶ್ರೀಧರ್ ನಾಯಕ್ ಅವರ ಪ್ರಬಂಧ ಮತ್ತು ಲೇಖನಗಳ ಸಂಕಲನವೇ ‘ಭಾವಲೋಕ'. ಈ ಪುಸ್ತಕಕ್ಕೆ ಸೊಗಸಾದ ಮುನ್ನುಡಿ ಬರೆದಿದ್ದಾರೆ ಲೇಖಕ, ಶಿಕ್ಷಣ ತಜ್ಞರಾದ ಡಾ. ಮಹಾಬಲೇಶ್ವರ ರಾವ್. ಅವರು ಹೀಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಾರೆ. “ನವುರಾದ ಹಾಸ್ಯ, ಸರಸ ನಿರೂಪಣೆ, ಸುಂದರ ವರ್ಣನೆ ಸಹಿತವಾದ ‘ತುಂಟಿ ರೂಬಿಯ ದಶಾವತಾರ' ಪ್ರಬಂಧ ಉತ್ತಮ ಲಲಿತ ಪ್ರಬಂಧಗಳ ಸಾಲಿನಲ್ಲಿ ನಿಲ್ಲುವಂತದ್ದು. ಈ ಪ್ರಬಂಧವನ್ನು ಓದುವಾಗ ನನಗೆ ಕೆ.ಎಸ್. ನ. ಅವರ ‘ತುಂಗಭದ್ರೆ', ಡಾ. ಹಾ. ಮ. ನಾಯಕರ ‘…
ವಿಧ: ಪುಸ್ತಕ ವಿಮರ್ಶೆ
March 14, 2022
ಸಂತೋಷಕುಮಾರ ಮೆಹೆಂದಳೆ ಅವರು ಈ ಬಾರಿ ವಿಭಿನ್ನ ಕಥಾ ವಸ್ತುವಿನ ಜೊತೆಗೆ ಹಾಜರಾಗಿದ್ದಾರೆ. ಎಲ್ಲರೂ ಪ್ರತೀ ದಿನ ಗಮನಿಸಿ ಮುಖ ತಿರುಗಿಸಿಕೊಳ್ಳುವ ಮಂಗಳಮುಖಿಯರ ಒಳ ಜಗತ್ತಿನ ಅನಾವರಣ ಮಾಡಿದ್ದಾರೆ. ಪುಸ್ತಕದ ಮುಖ ಪುಟದಲ್ಲೇ ‘ಹಿಜಡಾ ಜಗತ್ತಿನ ಅನುಭವ ಕಥನ...' ಎಂದು ಇದನ್ನು ಕರೆಯಿಸಿಕೊಂಡಿದ್ದಾರೆ.
ಪುಸ್ತಕದ ಬೆನ್ನುಡಿಯಲ್ಲಿ “ನೀವು ಗಂಡು ಅಥವಾ ಹೆಣ್ಣಾಗಿ ಹುಟ್ಟಿದ್ದರೆ, ನಿಖರ ದೇಹ ಹಾಗೂ ಮನಸ್ಥಿತಿ ಕೊಟ್ಟಿದ್ದರೆ ಈ ಜೀವನ ಪೂರ್ತಿ ನೀವು ದೇವರಿಗೆ ಕೃತಜ್ಞರಾಗಿರಲೇ ಬೇಕು. ಇದು ದೇವರು…
ವಿಧ: ಪುಸ್ತಕ ವಿಮರ್ಶೆ
March 10, 2022
ಇದು ಮೂಲಿಕಾ ಸಂರಕ್ಷಣೆ ಮತ್ತು ಪ್ರಾಥಮಿಕ ಆರೋಗ್ಯ ರಕ್ಷಣೆಯ ಕೈಪಿಡಿ. ೬೯ ಪಾರಂಪರಿಕ ವೈದ್ಯರು ಮತ್ತು ೩೭ ಆಯುರ್ವೇದ ತಜ್ನರ ಅನುಭವಗಳನ್ನು ಆಧರಿಸಿದ ಕೈಪಿಡಿ ಎಂಬುದೇ ಇದರ ವಿಶೇಷತೆ.. ಇದನ್ನು ರಚಿಸಿದ ಸಂಪಾದಕೀಯ ಮಂಡಳಿಯಲ್ಲಿ ಗಾ.ನಂ. ಶ್ರೀಕಂಠಯ್ಯ, ಐ.ಎ.ಎಸ್. ಮತ್ತು ೧೯ ಸದಸ್ಯರಿದ್ದರು.
ಭಾರತೀಯ ಪರಂಪರೆಯಲ್ಲಿ ಆರೋಗ್ಯಪೂರ್ಣ ಜೀವನ ನಡೆಸಲು ಬೇಕಾದ ಪಾರಂಪರಿಕ ಆರೋಗ್ಯ ಪದ್ಧತಿಯೊಂದು ಜನರ ನಡುವೆ ಜೀವಂತವಾಗಿತ್ತು. ಸ್ಥಳೀಯವಾಗಿಯೇ ಬೆಳೆಯುತ್ತಿದ್ದ ಮರ, ಗಿಡ, ಬಳ್ಳಿ, ನಾರು, ಬೇರುಗಳನ್ನು…
ವಿಧ: ಪುಸ್ತಕ ವಿಮರ್ಶೆ
March 09, 2022
ಮೊದಲೇ ಹೇಳಿಬಿಡುತ್ತೇನೆ. ನಾನು ಆಸ್ತಿಕ. ನಾನು ಬರೆಯ ಹೊರಟಿರುವುದು ಆಸ್ತಿಕರೊಬ್ಬರು ಬರೆದ ಕಾದಂಬರಿ ರೂಪದ ಜಿಜ್ಞಾಸೆಯ ಬಗ್ಗೆ. ಹಾಗಾಗಿ ಇದೆಲ್ಲ ಕಸ ಅನ್ನುವವರು ಮುಂದೆ ಓದುವುದು ಬೇಡ.
ತುಳುನಾಡಿನ ದೈವಾರಾಧನೆ ನಮಗೆ ನಂಬಿಕೆಯ ಪ್ರಶ್ನೆ. ಹೊರಗಿನವರಿಗೆ ಕೌತುಕ, ತಮಾಷೆಯ ವಸ್ತು. ಈ ಪುಸ್ತಕದ ಕತೆ ಸರಳ. ಕಂಪೆನಿಯೊಂದು ಸ್ವಾಧೀನಪಡಿಸಿಕೊಂಡ ಜಾಗದ ವಿರುದ್ಧ ಅವರಿಗೆ ಪರಿಹಾರ ಕೊಡಿಸಲು ಹೋರಾಟ ಮಾಡುವ ಹೋರಾಟಗಾರನೊಬ್ಬ ಅಪಘಾತಕ್ಕೀಡಾಗಿ ಸಾವಿಗೀಡಾಗುತ್ತಾನೆ. ಸಾವಿನ ರಾತ್ರಿಯವರೆಗೆ ಅವನ ಜೊತೆ…
ವಿಧ: ರುಚಿ
March 09, 2022
ಹಾಗಲಕಾಯಿಯನ್ನು ಕತ್ತರಿಸುವ ಮೊದಲೇ ತೊಳೆದು ಕೊಳ್ಳಬೇಕು. ಸಣ್ಣಕೆ ಹೋಳುಗಳಾಗಿ ಮಾಡಿಟ್ಟುಕೊಳ್ಳಬೇಕು. ಒಗ್ಗರಣೆಗೆ ಉದ್ದಿನಬೇಳೆ, ಸಾಸಿವೆ, ಸ್ವಲ್ಪ ಕಡಲೆ ಅಥವಾ ತೊಗರಿಬೇಳೆ, ಒಣಮೆಣಸು ಹಾಕಿ ಅದಕ್ಕೆ ಅರಶಿನ ಹುಡಿ ಮತ್ತು ಎಣ್ಣೆ ಸ್ವಲ್ಪ ಹೆಚ್ಚು ಹಾಕಬೇಕು. ಕಾಯಿ ಮೆಣಸು ಸೇರಿಸಿ. ಕತ್ತರಿಸಿಟ್ಟ ಹೋಳುಗಳನ್ನು ಸೇರಿಸಿ. ಚೆನ್ನಾಗಿ ಹುರಿಯಬೇಕು. ಎಣ್ಣೆಯಲ್ಲಿಯೇ ಹುರಿಯಬೇಕು. ನೀರು ಹಾಕಬಾರದು. ರುಚಿಗೆ ತಕ್ಕಷ್ಟು ಉಪ್ಪು, ಖಾರಪುಡಿ (ನಾನು ಸಾಂಬಾರು ಹುಡಿ ಬಳಸಿರುವೆ) ಬೆಲ್ಲ ಮತ್ತು ಹುಣಿಸೇ…
ವಿಧ: ಪುಸ್ತಕ ವಿಮರ್ಶೆ
March 08, 2022
ಅಲ್ಲಮಪ್ರಭು ಪೀಠ, ಕಾಂತಾವರ ಇವರು ಪ್ರಕಾಶಿಸಿರುವ ಕರಣ ಕಾರಣ ಸರಣಿಯ ೯ನೇ ಪುಸ್ತಕ ಇದು. ಅನುಭವದ ನಡೆ- ಅನುಭಾವದ ನುಡಿ ಸರಣಿಯ ೨೦೨೦ರ ಉಪನ್ಯಾಸಗಳು. ಈ ಪುಸ್ತಕವನ್ನು ಉಪನ್ಯಾಸಕರಾದ ಡಾ. ರಾಜಶೇಖರ ಜಮದಂಡಿಯವರು ಸಂಪಾದಿಸಿದ್ದಾರೆ. ಮೌಲ್ಯಯುತವಾದ ೧೩ ಲೇಖನಗಳು ಈ ಪುಸ್ತಕದಲ್ಲಿವೆ. ಅವರ ಪ್ರಕಾರ ‘ಅಲ್ಲಮ ಪ್ರಭು ವಿಶ್ವದ ಶ್ರೇಷ್ಟ ದಾರ್ಶನಿಕ ಮಹಾಜ್ಞಾನಿ. ಮಾನವನಾದಿಯಾಗಿ ಸಕಲ ಜೀವಿಗಳ ಕುಲೋದ್ಧಾರದ ಮಹಾಚಿಂತಕ. ಭಾವುಕವಲ್ಲದ ವೈಚಾರಿಕ ದೃಷ್ಟಿಯಲ್ಲಿ ಆಧ್ಯಾತ್ಮಿಕ ಸಾಧನೆಯಿಂದ ಲೋಕವನ್ನೇ…
ವಿಧ: ಬ್ಲಾಗ್ ಬರಹ
March 07, 2022
ಅಂಬಿಗ ! ದಡ ಹಾಯಿಸು ...
(ಭೌತವಿಜ್ಞಾನದ ಪ್ರಾಧ್ಯಾಪಕ, ಎಚ್. ಆರ್. ರಾಮಕೃಷ್ಣರಾವ್ ಅವರ ಆತ್ಮಕತೆ)
ನಿರೂಪಣೆ : ಕಲ್ಗುಂಡಿ ನವೀನ್
ಸಂಪಾದಕರು : ಡಾ. ವೈ. ಸಿ. ಕಮಲ, ಸುಮಂಗಲಾ ಎಸ್. ಮುಮ್ಮಿಗಟ್ಟಿ
ಉದಯಭಾನು ಕಲಾಸಂಘ
ಉದಯಭಾನು ಉನ್ನತ ಅಧ್ಯಯನ ಕೇಂದ್ರ
ವಿಜ್ಞಾನ-ತಂತ್ರಜ್ಞಾನ ಅಧ್ಯಯನಾಂಗ
ಬೆಂಗಳೂರು -೫೬೦ ೦೧೯
ಪ್ರೊ. ಎಚ್. ಆರ್. ರಾಮಕೃಷ್ಣರಾಯರ ಆತ್ಮಕತೆಯಿಂದ ಆಯ್ದ ಕೆಲವು ಭಾಗವನ್ನು, ಓದುಗರ ಮುಂದೆ ಇಡಲು ಇಚ್ಛಿಸುತ್ತೇನೆ.
-ಎಚ್ಚಾರೆಲ್
ಎಚ್. ಆರ್. ರಾಮಕೃಷ್ಣರಾಯರು…
ವಿಧ: ಪುಸ್ತಕ ವಿಮರ್ಶೆ
March 05, 2022
‘ಕರಮಜೋವ್ ಸಹೋದರರು' ಎಂಬ ಪುಸ್ತಕ ರಚಿಸಿದ ಕೆ.ಶ್ರೀನಾಥ್ ಮತ್ತೆ ‘ಸತ್ಯಕ್ಕೊಂದು ಸಂತಾಪ' ಎಂಬ ಪುಸ್ತಕದೊಂದಿಗೆ ಮರಳಿ ಬಂದಿದ್ದಾರೆ. ಪುಸ್ತಕಕ್ಕೆ ಬೆನ್ನುಡಿ ಬರೆದಿದ್ದಾರೆ ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ. ಅವರು ತಮ್ಮ ನುಡಿಯಲ್ಲಿ “ ಹರಿವ ಹೊಳೆ, ಅಯಾಚಿತ ಹುಟ್ಟು, ಅಕಲ್ಪಿತ ಸಾವಿನ ನಡುವಿನ ನೋವು ನಲಿವು, ವಿಕಲ್ಪ, ದೈನ್ಯ, ಸ್ವಪ್ನ, ವಿಭಾವ ಅಭಾವಗಳ ವಿಲಕ್ಷಣ ಜೀವನ ಪ್ರವಾಹದ ಅಲೆಗಳ ಸಂಗ್ರಹದಂತಿರುವ ಈ ವಿಶಿಷ್ಟ ಕಾದಂಬರಿ ಕೇವಲ ೧೭೨ ಪುಟಗಳಲ್ಲಿ ನಾಲ್ಕು ತಲೆಮಾರಿನ ಕಥನವನ್ನು…