ಹಾಗಲಕಾಯಿ ಫ್ರೈ

ಹಾಗಲಕಾಯಿ ಫ್ರೈ

ಬೇಕಿರುವ ಸಾಮಗ್ರಿ

ಸಣ್ಣಗೆ ತುಂಡರಿಸಿದ ಹಾಗಲಕಾಯಿ, ಒಗ್ಗರಣೆಗೆ ಉದ್ದಿನ ಬೇಳೆ, ಸಾಸಿವೆ, ತೊಗರಿಬೇಳೆ, ಒಣ ಮೆಣಸು, ಅರಶಿನ ೧ ಚಮಚ, ಎಣ್ಣೆ, ಕಾಯಿ ಮೆಣಸು ೪, ರುಚಿಗೆ ತಕ್ಕಷ್ಟು ಉಪ್ಪು, ಮೆಣಸಿನ ಹುಡಿ ಅಥವಾ ಸಾಂಬಾರು ಹುಡಿ ೪ ಚಮಚ, ಬೆಲ್ಲ, ಹುಣಸೆ ಹುಳಿ ರಸ, ಬೇಕಿದ್ದರೆ ತೆಂಗಿನ ಕಾಯಿ ತುರಿ. 

ತಯಾರಿಸುವ ವಿಧಾನ

ಹಾಗಲಕಾಯಿಯನ್ನು ಕತ್ತರಿಸುವ ಮೊದಲೇ ತೊಳೆದು ಕೊಳ್ಳಬೇಕು. ಸಣ್ಣಕೆ ಹೋಳುಗಳಾಗಿ ಮಾಡಿಟ್ಟುಕೊಳ್ಳಬೇಕು. ಒಗ್ಗರಣೆಗೆ ಉದ್ದಿನಬೇಳೆ, ಸಾಸಿವೆ, ಸ್ವಲ್ಪ ಕಡಲೆ ಅಥವಾ ತೊಗರಿಬೇಳೆ, ಒಣಮೆಣಸು ಹಾಕಿ ಅದಕ್ಕೆ ಅರಶಿನ ಹುಡಿ ಮತ್ತು ಎಣ್ಣೆ ಸ್ವಲ್ಪ ಹೆಚ್ಚು ಹಾಕಬೇಕು. ಕಾಯಿ ಮೆಣಸು ಸೇರಿಸಿ. ಕತ್ತರಿಸಿಟ್ಟ ಹೋಳುಗಳನ್ನು ಸೇರಿಸಿ. ಚೆನ್ನಾಗಿ ಹುರಿಯಬೇಕು. ಎಣ್ಣೆಯಲ್ಲಿಯೇ ಹುರಿಯಬೇಕು. ನೀರು ಹಾಕಬಾರದು. ರುಚಿಗೆ ತಕ್ಕಷ್ಟು ಉಪ್ಪು, ಖಾರಪುಡಿ (ನಾನು ಸಾಂಬಾರು ಹುಡಿ ಬಳಸಿರುವೆ) ಬೆಲ್ಲ ಮತ್ತು ಹುಣಿಸೇ ಹುಳಿ ಕಿವುಚಿ ದಪ್ಪ ರಸ ತೆಗೆದು ಎಲ್ಲವನ್ನೂ ಸೇರಿಸಿ ಪುನ:ಫ್ರ್ಯೆ ಮಾಡಬೇಕು. ೧೫ ದಿನವಿಟ್ಟು ಬಳಸಬಹುದು. ತುಂಬಾ ರುಚಿ. ತೆಂಗಿನಕಾಯಿ ತುರಿ ಬೇಕಿದ್ದರೆ ಹಾಕಬಹುದು.

-ರತ್ನಾ ಕೆ ಭಟ್ ತಲಂಜೇರಿ