ಭಾರತೀಯ ಫಿಲಂ ರಂಗದಲ್ಲಿ ದಿಢೀರನೆ ಮಿಂಚಿ, ಮರೆಯದ ಧ್ರುವ ತಾರೆ-ಗುರುದತ್ !
* ವಿಂಟೇಜ್ ಮೂವಿ ಪೋಸ್ಟರ್. ಸಂಗ್ರಹದಿಂದ
* ಮೈಸೂರು ಅಸೋಸಿಯೇಷನ್, ಮುಂಬಯಿ ಫೋಟೋ ಸಂಗ್ರಹದಿಂದ
ಹಿಂದಿ ಭಾಷೆಯ ಫಿಲಂ ಪಟ್ಟಿಯಲ್ಲಿ ಒಬ್ಬ ಅತ್ಯಂತ ಸೃಜನಶೀಲ ಚಿತ್ರ ನಿರ್ಮಾಪಕ, ನಿರ್ದೇಶಕ, ಅಭಿನಯಕರ್ತರೆಂದು ಗುರುತಿಸಲ್ಪಟ್ಟ 'ಗುರುದತ್' ತಮ್ಮ ಹಲವಾರು ಚಿತ್ರಗಳಲ್ಲಿ ನೃತ್ಯ ಕಲಾವಿದೆ, ಸಮರ್ಥ ಅಭಿನೇತ್ರಿ, 'ವಹೀದಾ ರೆಹ್ಮಾನ್' ರವರನ್ನು ಬಳಸಿಕೊಂಡಿದ್ದಾರೆ. ಆಕೆಯನ್ನು ಮುಂಬಯಿ ಫಿಲಂ ಲೈನ್ ಗೆ ಪರಿಚಯಿಸಿದವರೂ ಅವರೇ. ಚಲನ ಚಿತ್ರ ರಂಗದಲ್ಲಿನ ಅನೇಕ ಹೆಸರಾಂತ ನಿರ್ಮಾಪಕ, ನಿರ್ದೇಶಕರುಗಳ ತರಹ (ರಾಜಕಪೂರ್, ಮೊದಲಾದವರು) ಗುರುದತ್ ಸಹಿತ ಸುಂದರ ಸ್ತ್ರೀಯರ ಬಗ್ಗೆ ಬಹಳ ಬೇಗ ಆಕರ್ಷಿತರಾಗುತ್ತಿದ್ದರು. ಅದೊಂದು ಮನೋ ದೌರ್ಬಲ್ಯವಾಗಿದ್ದು ಅವರ ಕೆರಿಯರ್ ನಲ್ಲಿ ಬಹಳ ಕಷ್ಟಗಳನ್ನು ತಂದೊಡ್ಡಿತು. ಆಲ್ಮೊರದಲ್ಲಿ ಉದಯಶಂಕರ್ ರವರ ನೃತ್ಯ ಶಾಲೆಗೆ ಪಾದಾರ್ಪಣೆ ಮಾಡಿದಾಗಲೂ, ಅಲ್ಲಿನ ಒಬ್ಬ ಪ್ರಮುಖ ನೃತ್ಯ ಶಿಕ್ಷಕಿಯ ಜೊತೆ ಪ್ರೇಮ ಹೊಂದಿ ಓಡಿಹೋಗುವ ಸಮಯದಲ್ಲಿ ಸಿಕ್ಕಿಬಿದ್ದರು. ಮೊದಲು 'ವಿಜಯ' ಎಂಬ ಪುಣೆಯ ಹುಡುಗಿಯೊಡನೆ ಪಲಾಯನವಾಗಿದ್ದ ಗುರುದತ್ ಗೆ, ಇವರ ಮನೆಯವರು ದೂರ ಸಂಬಂಧದಲ್ಲಿ ಸೊಸೆಯಾಗುವ 'ಸುವರ್ಣ' ಎಂಬ ಹೈದರಾಬಾದಿನ ಹುಡುಗಿಯೊಂದಿಗೆ ಮದುವೆ ಮಾಡುವವರಿದ್ದರು. ಮುಂದೆ ಹೀಗೆಯೇ 'ಗೀತಾ' ರವರನ್ನೂ ಮದುವೆಯಾದರು. ಹೊಸ ತಾರೆ, ವಹೀದಾ ರೆಹ್ಮಾನ್ ಪರಿಚಯವಾದಮೇಲೆ ಗುರುದತ್ ರ ಪಾರಿವಾರಿಕ ಜೀವನವು ಅಸ್ತವ್ಯಸ್ತವಾಯಿತು. ಅವರ ೩೯ ವರ್ಷಗಳ ಸಿನಿಮಾ ಜೀವನದಲ್ಲಿ ಬಹುಶಃ ನರ್ತಕಿ, ಮತ್ತು ಅನುಪಮ ಸುಂದರಿಯಾಗಿದ್ದ 'ವಹೀದಾ ರೆಹ್ಮಾನ್' ಕೊನೆಯ ವ್ಯಕ್ತಿ ಎನ್ನಿಸುತ್ತದೆ.
ಅಭಿನೇತ್ರಿ ವಹೀದಾ ಹೈದರಾಬಾದಿನಿಂದ ಬೊಂಬಾಯಿಗೆ ಬಂದ ಪ್ರಸಂಗ :
ಹೈದರಾಬಾದ್ ಗೆ ಫಿಲಂ ಕೆಲಸಕ್ಕೋಸ್ಕರ ಹೋಗಿದ್ದಾಗ ಅವರ ಕಾರ್ ಅಪಘಾತದಿಂದಾಗಿ ಅವರು ೩-೪ ದಿನ ಹೈದರಾಬಾದ್ ನಲ್ಲಿ ಉಳಿದುಕೊಳ್ಳುವ ಪ್ರಸಂಗ ಬಂತು. ಅದು ಜರುಗಿದ್ದು ಹೀಗೆ :
ಬೊಂಬಯಿನಿಂದ ಹೈದರಾಬಾದ್ ಗೆ ಅವರ ಕಾರ್ ನಲ್ಲಿ ರಾತ್ರಿಯೆಲ್ಲಾ ಪ್ರಯಾಣ ಮಾಡಿ ಇನ್ನೇನು ಹೈದರಾಬಾದ್ ಸಮೀಪಿಸುತ್ತಿದ್ದಂತೆಯೇ ಕಾರ್ ಡ್ರೈವರ್ ರಸ್ತೆಯಲ್ಲಿ ಮಲಗಿದ್ದ ಎಮ್ಮೆಯೊಂದನ್ನು ಉಳಿಸಲು ಪ್ರಯತ್ನಿಸಿದಾಗ, ಅವರ ಕಾರ್ ಒಂದು ಕಲ್ಲುಗೋಡೆಗೆ ಅಪ್ಪಳಿಸಿ ಅದರ ಮುಂದಿನ ಭಾಗವೆಲ್ಲ ಕಿತ್ತುಹೋಗಿತ್ತು. ಆ ಕಾರನ್ನು ಅಲ್ಲೆಯೇ ಹತ್ತಿರದಲ್ಲಿದ್ದ ಆಟೋ ವರ್ಕ್ಸ್ ಶಾಪ್ ಮಾಲಿಕನಿಗೆ ಒಪ್ಪಿಸಿ, ತಾವು ಹೈದರಾಬಾದಿಗೆ ಟ್ಯಾಕ್ಸಿಯಲ್ಲಿ ಹೋಗಿ ತಲುಪಿದರು. ರಿಪೇರಿಗೆ ಕನಿಷ್ಟಪಕ್ಷ ೩-೪ ದಿನಗಳಾದರೂ ಬೇಕೆಂದು ಗೊತ್ತಾದಾಗ, ಅವರಿಗೆ ಭ್ರಮನಿರಸನವಾಯಿತು.
ಗುರುದತ್ ರವರ ಚಿತ್ರಗಳನ್ನು ದಕ್ಷಿಣಭಾರತದಲ್ಲಿ ವಿತರಿಸುವ ಒಬ್ಬ ವ್ಯಕ್ತಿ (ಗುರುದತ್ ಅವರ ಹೆಸರನ್ನು ಹೇಳಲು ಇಷ್ಟಪಡುತ್ತಿಲ್ಲ) ಗುರುದತ್ತರಿಗೆ ಒಂದು ಸುಪ್ರಸಿದ್ಧ ತೆಲುಗು ಚಿತ್ರ "ಮಿಸ್ಸಿಯಮ್ಮ" ಬಗ್ಗೆ ಪ್ರತ್ಯಕ್ಷ ಮಾಹಿತಿಕೊಡಲು ಹೈದರಾಬಾದಿಗೆ ಆಹ್ವಾನಿಸಿದ್ದರು. ಆತನಿಗೆ ಮಿಸ್ಸಿಯಮ್ಮ ತೆಲುಗುಚಿತ್ರವನ್ನು ಹಿಂದಿಯಲ್ಲಿ ನಿರ್ಮಿಸಲು ಗುರುದತ್ ರವರ ಮನಒಪ್ಪಿಸಲು ಪ್ರಯತ್ನಿಸುತ್ತಿದ್ದರು. ಆಗ ಆನ್ ಲೈನ್ ಸೇವೆ ಇಲ್ಲವೇ ಡಿವಿಡಿ ವ್ಯವಸ್ಥೆಗಳು ಇರಲಿಲ್ಲ. ಗುರುದತ್, ಅಬ್ರಾರ್ ಆಲಿ, ಗುರುಸ್ವಾಮಿ ಮತ್ತು ತಾವು ಡಿಸ್ಟ್ರಿಬ್ಯುಟರ್ ಜತೆಯಲ್ಲಿ ಮಿಸ್ಸಿಯಮ್ಮ ಚಿತ್ರ ವೀಕ್ಷಿಸಲು ಹೊರಟರು. ಆಗಲೇ ಟಾಕೀಸ್ ಹೌಸ್ ಫುಲ್ ಫಲಕ ಸಿನಿಮಾ ಮಂದಿರದ ಮುಂದೆ ಕಾಣಿಸುತ್ತಿತ್ತು. ಹೇಗೋ ಡಿಸ್ಟ್ರಿಬ್ಯುಟರ್ ತಮ್ಮ ಪರಿಚಯದ ಮೇಲೆ ಎಲ್ಲರನ್ನೂ ಕರೆದುಕೊಂಡು ಒಳಗೆ ಹೋಗಿ ಕುಳಿತು ಚಿತ್ರವನ್ನು ವೀಕ್ಷಿಸಿದರು. ಆದರೆ ಡಿಸ್ಟ್ರಿಬ್ಯುಟರ್ ಗೆಳೆಯರ ಅಭಿಪ್ರಾಯಕ್ಕೆ ವಿರುದ್ಧವಾಗಿ ಗುರುದತ್ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಅವರಿಗೆ ಆ ಚಿತ್ರದಲ್ಲಿ ಹೆಚ್ಚುಗಾರಿಕೆಯೇನೂ ಕಾಣಿಸಲಿಲ್ಲ. ಡಿಸ್ಟ್ರಿಬ್ಯುಟರ್ ಗೆ ಮನಬಂದಂತೆ. ಬೈದರು. ಗುರುದತ್ ಈ ಪ್ರಕರಣಕ್ಕೆ ಬಂದವರು ವಿಪರೀತ ಅನಾನುಕೂಲತೆಗಳನ್ನು ಎದುರಿಸಬೇಕಾಯಿತು.
೧. ಬೊಂಬಯಿನಿಂದ ರಾತ್ರಿಯೆಲ್ಲಾ ಕೆಟ್ಟರಸ್ತೆಯಮೇಲೆ ಕಾರಿನಲ್ಲಿ ಮಾಡಿದ ಪ್ರಯಾಣದಿಂದ ಬಹಳ ಸೋತಿದ್ದರು. ೨. ೩-೪ ದಿನ ಹೈದರಾಬಾದಿನಲ್ಲಿ ವಿನಾ ಕಾರಣ ಕಾಲ ಕಳೆಯುವುದು ಅವರಿಗೆ ಬಹಳ ಬೇಸರತಂದಿತ್ತು. ಬೆಳಿಗ್ಯೆ ಹೀಗೆ ಯೋಚಿಸುತ್ತ ಡಿಸ್ಟ್ರಿಬ್ಯುಟರ್ ನ ಆಫೀಸಿನಲ್ಲಿ ಕುಳಿತಿರುವಾಗ, ಒಂದು ಚಮತ್ಕಾರವನ್ನು ನೋಡುವ ಅವಕಾಶ ಒದಗಿ ಬಂತು. ಆಫೀಸಿನ ಹೊರಗೆ ಒಂದು ಕಾರಿನಿಂದ ಒಬ್ಬ ಸುಂದರ ಯುವತಿ ನಿಧಾನವಾಗಿ ಕೆಳಗೆ ಇಳಿಯುತ್ತಿದ್ದಂತೆ, ಯುವಕರು ಮತ್ತು ಅಲ್ಲಿ ನೆರೆದಿದ್ದ ಎಲ್ಲರೂ ಆಕೆಯನ್ನು ಹತ್ತಿರದಿಂದ ನೋಡಲು ಗುಂಪು ಕಟ್ಟಿ ಕಾಯುತ್ತಿದ್ದರು. ದೊಡ್ಡ ಗಲಾಟೆ ವಾತಾವರಣವನ್ನು ಆಕ್ರಮಿಸಿತ್ತು. ಇದನ್ನು ನೋಡಿದ ಕೇಳಿದ ಜನರು, ಹೊಸದಾಗಿ ಬಂದು ಸೇರುತ್ತಿದ್ದರು. ಏನು ವಿಷವೆಂದು ಯಾರಿಗೂ ಅರ್ಥವಾಗುತ್ತಿಲ್ಲ. ಡಿಸ್ಟ್ರಿಬ್ಯುಟರ್ ಹೊರಗೆ ಹೋಗಿ ಮಾಹಿತಿ ಸಂಗ್ರಹಿಸಿ ಬಂದು ಹೇಳಿದ್ದು ಹೀಗೆ : 'ರೋಸುಲು ಮಾರಾಯಿ' ತೆಲುಗು ಚಿತ್ರದಲ್ಲಿ (ದಿನಗಳು ಬದಲಾಗುತ್ತಿವೆ ಎನ್ನುವ ಮಾತನ್ನು ಸ್ಪಷ್ಟಿಕರಿಸಲು ಈ ಚಿತ್ರವನ್ನು ನಿರ್ಮಿಸಿದ್ದರು) ಅಭಿನಯಿಸಿದ ಹೆಸರುವಾಸಿಯಾದ ಸಿನಿಮಾ ನಾಯಕಿ (ತಾರೆ) ಮದ್ರಾಸಿನಿಂದ ತನ್ನ ಕಾರಿನಲ್ಲಿ ಹೈದರಾಬಾದಿಗೆ ಅಂದಿದ್ದಾಳೆ. ಅವಳನ್ನು ನೋಡಲು ಜನ ಸೇರಿದ್ದಾರೆ. . ಆ ಚಿತ್ರದಲ್ಲಿ ಒಂದು ಚಿಕ್ಕ ಪಾತ್ರದಳ್ಳಿ ಡಾನ್ಸ್ ನಿರ್ವಹಿಸಿದ ಆ ತಾರೆಯ ಜನಪ್ರಿಯತೆ ಎಲ್ಲರನ್ನೂ ಚಕಿತಗೊಳಿಸಿದೆ. ಆಕೆಯ ಹೆಸರು 'ವಹೀದಾ ರೆಹಮಾನ್' ಅಂತೆ. ಆಕೆಯನ್ನು ನೋಡಿದ ಗುರುದತ್ ಬಹಳ ಪ್ರಭಾವಿತರಾದರು. ಡಿಸ್ಟ್ರಿಬ್ಯುಟರ್ ಗೆ ಮದ್ರಾಸಿನ ನಿರ್ಮಾಪಕರನ್ನು ಭೇಟಿಮಾಡಿ ಆ ಹೊಸತಾರೆಯ ಜತೆ ಒಂದು ಸಂವಾದ ಏರ್ಪಡಿಸಲು ಕರೆಕೊಟ್ಟರು.
ಮಾರನೆಯ ದಿನವೇ, ವಹೀದಾ ರೆಹಮಾನ್ ತನ್ನ ತಾಯಿಯವರ ಜತೆ ಗುರುದತ್ ಇಳಿದುಕೊಂಡಿದ್ದ ಹೋಟೆಲ್ಲಿಗೆ ಬಂದು ಅವರನ್ನು ಭೇಟಿಮಾಡಲು ಕುಳಿತರು. ಆಗ ಗುರುದತ್, ವಹೀದಾ ಅವರ ಹೆಸರು, ಉರ್ದುವಿನಲ್ಲಿ ಮಾತಾಡಲು ಬರುತ್ತದೆಯೇ ಹೇಗೆ ? ನೃತ್ಯದ ವಿಷಯ ಯಾವ ತರಹದ ನೃತ್ಯ ? ಆದರೆ ನೃತ್ಯ ಎಲ್ಲಿ ಕಲಿತದ್ದು, ಮೊದಲಾದ ಪ್ರಶ್ನೆಗಳನ್ನು ಕೇಳಿ ತಿಳಿದುಕೊಂಡರು. ಇದಕ್ಕೆಲ್ಲಾ ವಹೀದಾ ರೆಹಮಾನ್, 'ಹೌದು' ಅಥವಾ 'ಇಲ್ಲ' ಎಂದು ತಲೆಹಾಕುವುದನ್ನು ಬಿಟ್ಟರೆ ಬಾಯಿನಿಂದ ಮಾತಾಡುತ್ತಿರಲಿಲ್ಲ. ಒಟ್ಟಿನಲ್ಲಿ ಗುರುದತ್ ತಿಳಿದಷ್ಟೇ ಪ್ರತಿಕ್ರಿಯೆಯಿಂದ ಸಂತುಷ್ಟರಾದ ತರಹ ಕಾಣಿಸಿದರು. ವಹೀದಾ ರೆಹಮಾನ್ ಮತ್ತು ಆಕೆಯ ತಾಯಿಯವರ ಜತೆ ಮಾತಾಡುತ್ತಾ, ತಮ್ಮ ಹೊಸ ಹಿಂದಿ ಚಿತ್ರ.ಸಿ. ಐ. ಡಿ. (೧೯೫೬) ಯಲ್ಲಿ ಒಂದು ಚಿಕ್ಕ ಹಾಡುವ ದೃಶ್ಯವಿದೆ, 'ಕಹಿಪೇ ನಿಗಾಹೇ ಕಹೀ ಪೆ ನಿಶಾನೆ' ಅದನ್ನು ನಿರ್ವಹಿಸಬೇಕಾಗುತ್ತೆ, ಎಂದು ಹೇಳಿ ಬೊಂಬಾಯಿಗೆ ಬರಲು ಆಹ್ವಾನಿಸಿದರು. ಸಿ ಐ ಡಿ ಚಿತ್ರದ ನಾಯಕಿ ಶಕೀಲಾ, ನಾಯಕ ನಟಿ ದೇವ್ ಆನಂದ್. ಇವರ ಮದ್ಯೆ ವ್ಯಾಂಪ್ (ಖಳನಾಯಕಿ) ಅಭಿನಯಿಸಿದ ಚಿಕ್ಕ ಪಾತ್ರದಲ್ಲಿ ವಹೀದಾ ಅದ್ಭುತವಾಗಿ ನಟಿಸಿ ಮಿಂಚಿದರು. ವಹಿದಾರವರು, ಮುಂದೆ ಗುರುದತ್ ಅಲ್ಲದೆ ಇತರ ಬಾಲಿವುಡ್ ಪ್ರತಿಭಾನ್ವಿತ ನಟರೊಂದಿಗೆ ನಟಿಸಿ, ತಮ್ಮ ವರ್ಚಸ್ಸನ್ನು ಬೆಳೆಸಿಕೊಳ್ಳಲು ದಾರಿ ಹಸನಾಯಿತು.
ಪರಿಚಯ :
ವಸಂತ್ ಕುಮಾರ್ ಶಿವಶಂಕರ್ ಪಡುಕೋಣೆಯವರು (೯, ಜುಲೈ, ೧೯೨೫-೧೦, ಅಕ್ಟೊಬರ್ ೧೯೬೪)
೫೦ ರ ದಶಕದಲ್ಲಿ (ಬಾಲ್ಯದ ಹೆಸರು, ವಸಂತ್ ಕುಮಾರ್ ಶಿವಶಂಕರ್ ಪಡುಕೋಣೆ) 'ಗುರುದತ್' ಒಬ್ಬ ಮೇರುನಟರಾಗಿ ಬೆಳೆದರು. ತಂದೆ ಶಿವಶಂಕರ್ ರಾವ್, ತಾಯಿ, ವಾಸಂತಿ ಪಡುಕೋನೆ. ಚಿತ್ರಾಪುರದ ಸಾರಸ್ವತ ಬ್ರಾಹ್ಮಣ ಕುಲದಲ್ಲಿ ಜನ್ಮಿಸಿದರು. ತಂದೆ, ಶಿವಶಂಕರ್ ಆ ಸಮಯದಲ್ಲಿ ಕಲ್ಕತ್ತಾದ ಹತ್ತಿರದ ಭವಾನಿಪುರದಲ್ಲಿ ಕೆಲಸದಲ್ಲಿದ್ದರು. ಪ್ರಭಾತ್ ಫಿಲಂ ಕಂಪೆನಿಯಲ್ಲಿ ಕೆಲಸಮಾಡುವಾಗ ದೇವಾನಂದ್, ಮತ್ತು ರೆಹಮಾನ್ ರವರ ಜತೆ ಪರಿಚಯವಾಗಿ ಗೆಳೆಯರಾದರು. ೧೯೪೪ ರಲ್ಲಿ ಗುರುದತ್ ಪರಿವಾರ ಬೊಂಬಾಯಿಗೆ ಬಂದು ನೆಲೆಸಿದರು. ಅಭಿನಯ, ನಿರ್ದೇಶನ, ಮತ್ತು ಚಿತ್ರ ನಿರ್ಮಾಣದಲ್ಲಿ ಪ್ರಬುದ್ಧತೆ ಗಳಿಸಿದ್ದರು. ನೃತ್ಯ ನಿರ್ದೇಶನ ಅವರಿಗೆ ಬಹಳ ಪ್ರಿಯವಾದ ವಿಷಯ. ೫ ಅಡಿ, ೮ ಅಂಗುಲ ಎತ್ತರ. ಬದುಕಿದ್ದ ೩೯ ವರ್ಷಗಳಲ್ಲಿ ಸಾಧಿಸಿದ ಪ್ರಗತಿಗಳು ಮರೆಯಲಾರದಂತಹವುಗಳು.
ಶಿವಶಂಕರ ರಾವ್ ಪಡುಕೋನ್, ಹಾಗೂ ವಸಂತಿ ಪಡುಕೋನ್ ದಂಪತಿಗಳ ಮಗನಾಗಿ ಗುರುದತ್ ಜುಲೈ ೯, ೧೯೨೫ ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆ ಮೊದಲು ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರಿನಲ್ಲಿ ನೆಲೆಸಿದ್ದರು. ಅವರು ಮೊದಲು ಮುಖ್ಯೋಪಾಧ್ಯಾಯ, ನಂತರ ಬ್ಯಾಂಕ್ ಉದ್ಯೋಗಿಯಾಗಿದ್ದರು. ತಾಯಿ ವಾಸಂತಿ ಗೃಹಿಣಿಯಾಗಿದ್ದರು, ನಂತರ ಶಾಲೆಯೊಂದರಲ್ಲಿ ಉಪಾಧ್ಯಾಯಿನಿಯಾಗಿ, ಖಾಸಗಿ ಶಿಕ್ಷಕಿಯಾಗಿ ಕೆಲಸ ಮಾಡಿದರು. ಸಣ್ಣ ಕಥೆಗಳನ್ನು ಬರೆಯುತ್ತಿದ್ದರು. ಹಾಗೂ ಹಲವಾರು ಬಂಗಾಳಿ ಲೇಖನಗಳನ್ನು ಕನ್ನಡ ಭಾಷೆಗೆ ಅನುವಾದಿಸಿದ್ದರು. ಗುರು ದತ್ ಜನಿಸಿದಾಗ ವಸಂತಿಯವರಿಗೆ ಕೇವರ ೧೬ ವರ್ಷ ಪ್ರಾಯ. ಒಂದು ಗಮ್ಮತ್ತಿನ ವಿಷಯವೆಂದರೆ, ತಾಯಿ-ಮಗ ಮೆಟ್ರಿಕ್ ಪರೀಕ್ಷೆಗೆ ಕಟ್ಟಿ ಒಂದೇವರ್ಷದಲ್ಲಿ ತೇರ್ಗಡೆಯಾದರು.
ವಸಂತಿಯವರು ತಮ್ಮ ೩೦ ವಯಸ್ಸಿನಲ್ಲಿ ಮೆಟ್ರಿಕ್ ಪರೀಕ್ಷೆಗೆ ಕಟ್ಟಿ ತೇರ್ಗಡೆಯಾದರು. ಅದೇ ವರ್ಷ ಗುರುದತ್ ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಅಂದಿನ ದಿನಗಳಲ್ಲಿ ಒಬ್ಬ ಮಹಿಳೆ ಮೆಟ್ರಿಕ್ ನಲ್ಲಿ ಪಾಸಾಗುವುದು ಒಂದು ಮಹತ್ವದ ಸಂಗತಿಯಾಗಿತ್ತು. ಹಾಗಾಗಿ ಅವರ ಸಮಾಜದ ಜನ ಹಣ ಕಲೆಹಾಕಿ ಒಂದು ಪಾರ್ಕರ್ ಪೆನ್ ನ್ನು ಉಪಹಾರವಾಗಿ ಕೊಟ್ಟರು. ಶಾಲೆಯಿಂದ ಮಕ್ಕಳ ಜತೆ ಮನೆಗೆ ಬಂದ ವಾಸಂತಿಯವರನ್ನು ಪತಿ, ಶಿವ ಶಂಕರ್ ವಿಚಾರಿಸಿದರು. ತಮ್ಮನ್ನು ಸ್ಕೂಲಿನಲ್ಲಿ ಈ ಸಮಾರಂಭಕ್ಕೆ ಆಹ್ವಾನಿಸಲಿಲ್ಲವೆಂದು ಕೋಪಗೊಂಡು ಪತ್ನಿಯ ಕೈನಿಂದ ಪೆನ್ನನ್ನು ಕಿತ್ತುಕೊಂಡು ಕಿಟಕಿಯಿಂದ ಹೊರಗೆ ಬಿಸಾಡಿದರು. ಈ ತರಹ ಚಿಕ್ಕಪುಟ್ಟ ವಿಷಯಗಳಿಗೆ ಮನಸ್ತಾಪ, ಜಗಳ ನಡೆಯುತ್ತಿದ್ದವು. ಈ ವಿಷಯವನ್ನು ತಿಳಿಸಿದರು.
ಗುರುದತ್ ಮನೆಯ ಆರ್ಥಿಕ ಮುಗ್ಗಟ್ಟಿನಿಂದ ಗುರು ದತ್ ಬಾಲ್ಯವು ಬಹಳ ಕಷ್ಟಕರವಾಗಿತ್ತು. ತಂದೆತಾಯಿಗಳು ಸದಾ ಜಗಳವಾಡುತ್ತಿದ್ದರು. ಅಸ್ವಸ್ಥರಾಗಿದ್ದ ಚಿಕ್ಕಪ್ಪನೊಂದಿನ ಭಯಾನಕ ಘಟನೆ, ಹಾಗೂ ೭ ತಿಂಗಳ ತಮ್ಮನ ಅಕಾಲ ಮೃತ್ಯು, ಗುರುದತ್ ಮನಸ್ಸಿನಮೇಲೆ ಬರೆ ಎಳೆದಂತಾಯಿತು. ಸೋದರ ಮಾವನ ಸಲಹೆಯಂತೆ ಹೆಸರನ್ನು ಬದಲಾಯಿಸಿ ಗುರುದತ್ ಎಂದು ನಾಮಕರಣ ಮಾಡಲಾಯಿತು. ಇವರ ನಂತರ ಆತ್ಮಾರಮ್, ದೇವೀದಾಸ್ ಎಂಬ ತಮ್ಮಂದಿರೂ, ಲಲಿತಾ ಎಂಬ ತಂಗಿಯ ಜನನವಾಯಿತು. ಚಲನಚಿತ್ರ ನಿರ್ದೇಶಕಿಯಾದ ಕಲ್ಪನಾ ಲಾಜ್ಮಿ ಇವರ ತಂಗಿ ಲಲಿತಾರವರ ಮಗಳು. ಗುರುದತ್ ಚಲನಚಿತ್ರಗಳ ಪೋಶ್ಟರ್ ಗಳನ್ನು ಬರೆಯುತ್ತಿದ್ದ, ತಾಯಿಯ ತಮ್ಮನಾದ (ದೂರ ಸಂಬಂಧಿ) ಬಾಲಕೃಷ್ಣ.ಬಿ.ಬೆನೆಗಲ್ ರವರೊಂದಿಗೆ ಕಳೆದರು. ಖ್ಯಾತ ಚಲನಚಿತ್ರ ನಿರ್ದೇಶಕರಾದ ಶ್ಯಾಮ್ ಬೆನೆಗಲ್, ಬಾಲಕೃಷ್ಣರವರ ತಮ್ಮನಾದ ಶ್ರೀಧರ.ಬಿ.ಬೆನೆಗಲ್ ರವರ ಮಗ.
ಗುರುದತ್ ರವರ ತಂದೆಯವರು ಮೊದಲು ಪಣಂಬೂರಿನ ಶಾಲೆಯೊಂದರಲ್ಲಿ ಮುಖ್ಯೋಪಾಧ್ಯಾಯರಾಗಿದ್ದರು. ನಂತರ ಬೆಂಗಳೂರಿನಲ್ಲಿ ಬ್ಯಾಂಕ್ ಒಂದರ ಉದ್ಯೋಗಿಯಾಗಿದ್ದರು. ಆಮೇಲೆ ಕಲ್ಕತ್ತಾದ ಭವಾನಿಪೋರ್ ಎಂಬಲ್ಲಿಗೆ ಇವರ ವರ್ಗವಾಯಿತು. ಇಲ್ಲಿಯೇ ಗುರುದತ್ ತಮ್ಮ ವಿಧ್ಯಾಭ್ಯಾಸವನ್ನು ಮುಗಿಸಿದರು. ಆದುದರಿಂದ ಗುರುದತ್ ನಿರರ್ಗಳವಾಗಿ ಬಂಗಾಳಿಯಲ್ಲಿಮಾತನಾಡುತ್ತಿದ್ದರು ಹಾಗೂ ಅವರ ಎಲ್ಲಾ ಕೆಲಸಗಳಲ್ಲಿ ಬಂಗಾಳದ ಸಂಸ್ಕೃತಿಯ ಛಾಪು ಎದ್ದು ಕಾಣಿತ್ತಿತ್ತು. ೧೯೪೦ ನೇ ಇಸವಿಯಲ್ಲಿ ಬೊಂಬಾಯಿಗೆ ಬಂದರು.
ತಂಗಿ ಲಲಿತಾರವರ ಪ್ರಕಾರ, ೧೪ ವರ್ಷದ ಗುರುದತ್ ತಮ್ಮ ಅಜ್ಜಿಯು ಸಾಯಂಕಾಲ ಉರಿಸುತ್ತಿದ್ದ ದೀಪದ ಮುಂದೆ ಕೈಯ್ಯೊಡ್ಡಿ ಅದರ ನೆರಳಿನಿಂದ ಗೋಡೆಗಳ ಮೇಲೆ ಚಿತ್ರವನ್ನು ಬಿಡಿಸುತ್ತಿದ್ದರು. ಯಾವುದೇ ತರಬೇತಿಯಿಲ್ಲದ್ದರೂ, ಇವರು ಚೆನ್ನಾಗಿ ನರ್ತನವನ್ನೂ ಕೂಡಾ ಮಾಡುತ್ತಿದ್ದರು. ಇವರ ಮಾವನು ಬಿಡಿಸಿದ ಚಿತ್ರವೊಂದರಲ್ಲಿದ್ದ ಭಂಗಿಯಲ್ಲಿ ನಿಂತು, ತನ್ನ ಚಿತ್ರವನ್ನು ಬಿಡಿಸಿ ಎಂದು ಮಾವನನ್ನು ಒತ್ತಾಯ ಮಾಡುತ್ತಿದ್ದರು. ಸಾರಸ್ವತ ಬ್ರಾಹ್ಮಣರ ಒಂದು ಸಭೆಯಲ್ಲಿ ಇವರು ಮಾಡಿದ ನೃತ್ಯವೊಂದಕ್ಕೆ ೫ ರೂಪಾಯಿಯ ಬಹುಮಾನವನ್ನೂ ಪಡೆದರು.
ರಾಷ್ಟ್ರದ ಖ್ಯಾತ ಸಿತಾರ್ ವಾದ್ಯ ವಾದಕ ಪಂಡಿತ್ ರವಿಶಂಕರ್ ಅವರ ಅಣ್ಣನಾದ ಉದಯ ಶಂಕರ್ ಅಲ್ಮೋರಾದಲ್ಲಿ 'ಉದಯ ಶಂಕರ್ ಇಂಡಿಯಾ ಕಲ್ಚರ್ ಸೆಂಟರ್ ನಾಟ್ಯ, ನಾಟಕ ಹಾಗೂ ಸಂಗೀತವನ್ನು ಕಲಿಸುವ ಕೇಂದ್ರ'ವನ್ನು ಸ್ಥಾಪಿಸಿದ್ದರು. ಗುರುಕುಲ ಪದ್ಧತಿ ಹಾಗೂ ಆಧುನಿಕ ಕಲಾ ವಿಶ್ವವಿದ್ಯಾನಿಲಯ ಇವೆರಡರ ಉತ್ತಮ ಅಂಶಗಳನ್ನು ಅಳವಡಿಸಿ ಕಲೆಯನ್ನು ಹೇಳಿಕೊಡುವುದು ಈ ಕೇಂದ್ರದ ಧ್ಯೇಯೋದ್ದೇಶವಾಗಿತ್ತು. ಬೇರೆ ಬೇರೆ ಕ್ಷೇತ್ರಗಳಲ್ಲಿ ಉತ್ತಮ ರೀತಿಯಲ್ಲಿ ಪಳಗಿದ ಕಲಾವಿದರನ್ನು ರೂಪಿಸುವ ಪ್ರಯತ್ನವನ್ನು ಮಾಡಿದ ಸಂಸ್ಥೆಯಿದು. ೧೬ ವರ್ಷದ ಗುರುದತ್ ೧೯೪೧ ನೇ ಇಸವಿಯಲ್ಲಿ ಈ ಕೇಂದ್ರವನ್ನು ಸೇರಿದರು. ಆ ಸಮಯದಲ್ಲಿ ಇವರು ೭೫ ರೂಪಾಯಿಗಳ (ಆಗಿನ ಕಾಲದಲ್ಲಿ ದೊಡ್ಡ ಮೊತ್ತವದು) ೫ ವರ್ಷದ ವಿದ್ಯಾರ್ಥಿ ವೇತನವನ್ನು ಸಂಪಾದಿಸಿದರು. ಇಲ್ಲಿ ೧೯೪೪ ನೇ ಇಸವಿಯವರೆಗೆ ಕಲಾಭ್ಯಾಸವನ್ನು ಮಾಡಿದರು. ನಂತರ ಎರಡನೇ ಮಹಾಯದ್ಧದ ಬಿಸಿಯೇರಿದುದರಿಂದ ಈ ಕೇಂದ್ರವನ್ನು ಒತ್ತಾಯಪೂರ್ವಕವಾಗಿ ಮುಚ್ಚಲಾಯಿತು.
ಮೊದಲ ನೌಕರಿ :
ಕಲ್ಕತ್ತಾದಲ್ಲಿದ್ದ 'ಲಿವರ್ ಬ್ರದರ್ಸ್' ಕಾರ್ಖಾನೆಯಲ್ಲಿ ಟೆಲಿಫೋನ್ ಆಪರೇಟರ್ ಆಗಿ ಕೆಲಸ ಸಿಕ್ಕಿತು. ಆದರೆ ಅಲ್ಲಿ ಸರಿಹೋಗದೆ ಕೆಲಸವನ್ನು ಬಿಟ್ಟು ಮುಂಬೈಯಲ್ಲಿ ವಾಸವಾಗಿದ್ದ ತಂದೆ ತಾಯಿಯ ಬಳಿ ಹಿಂದಿರುಗಿದನು.ಸೋದರಮಾವನು ಪುಣೆಯಲ್ಲಿನ 'ಪ್ರಭಾತ್ ಫಿಲ್ಮ್ ಕಂಪೆನಿ'ಯಲ್ಲಿ ಮೂರು ವರ್ಷದ ಗುತ್ತಿಗೆಯ ಕೆಲಸವನ್ನು ಕೊಡಿಸಿದರು. ಪ್ರಭಾತ್ ಆ ಕಾಲದಲ್ಲಿ ಶ್ರೇಷ್ಟ ಚಲನಚಿತ್ರ ನಿರ್ಮಾಣ ಸಂಸ್ಥೆಯಾಗಿದ್ದ ಸಂಸ್ಥೆ, ವಿ.ಶಾಂತಾರಾಂ ರವರು ಕೆಲಸಮಾಡುತ್ತಿದ್ದರು ಶಾಂತಾರಾಂ ನಂತರ ತಮ್ಮದೇ ಆದ ರಾಜಮಲ್ ಕಲಾ ಮಂದಿರವನ್ನು ಆರಂಭಿಸಿದರು. ಉತ್ತಮ ಸ್ನೇಹಿತರಾಗಿದ್ದ ರೆಹಮಾನ್ ಹಾಗೂ ದೇವಾನಂದ್ ರವರನ್ನು ಗುರುದತ್ ಇಲ್ಲಿಯೇ ಮೊದಲ ಬಾರಿಗೆ ಭೇಟಿಯಾಗಿ ಕೊನೆಯವರೆಗೂ ತಮ್ಮ ಸ್ನೇಹವನ್ನು ಕಾಪಾಡಿಕೊಂಡು ಬಂದರು. ಗುರುದತ್ ೧೯೪೪ ರಲ್ಲಿ ತೆರೆಕಂಡ ಚಾಂದ್ ಚಲನಚಿತ್ರದಲ್ಲಿ ಶ್ರೀಕೃಷ್ಣನ ಒಂದು ಸಣ್ಣ ಪಾತ್ರದಲ್ಲಿ ಅಭಿನಯಿಸಿದರು. ೧೯೪೫ನೇ ಇಸವಿಯಲ್ಲಿ ವಿಶ್ರಾಮ್ ಬೇಡೇಕರ್ ನಿರ್ದೇಶನದ 'ಲಖ್ರಾನಿ' ಚಿತ್ರದಲ್ಲಿ ನಟನಾಗಿಯೂ, ಸಹ ನಿರ್ದೇಶಕನಾಗಿಯೂ ಕಾರ್ಯ ನಿರ್ವಹಿಸಿದರು. ೧೯೪೬ರಲ್ಲಿ ಪಿ.ಎಲ್.ಸಂತೋಷಿಯವರ ನಿರ್ದೇಶನದ ಹಮ್ ಏಕ್ ಹೈ ಸಹಾಯಕ ನಿರ್ದೇಶಕನಾಗಿ ಹಾಗೂ ನೃತ್ಯ ಸಂಯೋಜಕರಾಗಿ ಕೆಲಸ ಮಾಡಿದರು. ಈ ಗುತ್ತಿಗೆಯ ಕೆಲಸ ೧೯೪೭ರಲ್ಲಿ ಮುಗಿಯಿತು. ಆದರೆ ಇವರ ತಾಯಿಯು 'ಬಾಬು ರಾವ್ ಪೈ' ಎನ್ನುವವರ ಹತ್ತಿರ ಸಹಾಯಕನಾಗಿ ಕೆಲಸ ದೊರೆಕಿಸಿ ಕೊಟ್ಟರು. ಇದಾದ ಬಹಳ ಸಮಯ ನಿರುದ್ಯೋಗಿಯಾಗಿದ್ದ ಗುರುದತ್ ಮುಂಬೈಯಲ್ಲಿನ ಮಾತುಂಗದಲ್ಲಿ ತಮ್ಮ ಮನೆಯವರ ಜೊತೆ ವಾಸವಾಗಿದ್ದರು. ಈ ಸಮಯದಲ್ಲಿ ಗುರುದತ್ ಆಂಗ್ಲ ಭಾಷೆಯಲ್ಲಿ ಕತೆಗಳನ್ನು ಬರೆಯುವ ಹವ್ಯಾಸವನ್ನು ಬೆಳೆಸಿಕೊಂಡರು. ಬೊಂಬಾಯಿನ ಸುಪ್ರಸಿದ್ದ ವಾರಪತ್ರಿಕೆಯಾಗಿದ್ದ ದಿ ಇಲ್ಲಸ್ಟ್ರೇಟೆಡ್ ವೀಕ್ಲಿಯಲ್ಲಿ ಸಣ್ಣ ಕಥೆಗಳನ್ನು ಬರೆಯತೊಡಗಿರು. ಇದೇ ಕಾಲದಲ್ಲಿ ಗುರುದತ್ ತಮ್ಮ ಆತ್ಮಚರಿತ್ರೆಯಂತೆ ಕಾಣುವ 'ಪ್ಯಾಸಾ' ಹಿಂದಿ ಚಲನಚಿತ್ರದ ಕಥೆಯನ್ನು ಬರೆದರೆಂದು ತಿಳಿದು ಬರುತ್ತದೆ. ಈ ಕಥೆಯ ಹೆಸರು ಮೊದಲು 'ಕಶ್ಮಕಶ್' ಎಂದಾಗಿದ್ದು, ನಂತರ ಪ್ಯಾಸಾ ಎಂದು ಬದಲಾಯಿಸಲಾಯಿತು. ಮೊದಲು 'ವಿಜಯ' ಎಂಬ ಪುಣೆಯ ಹುಡುಗಿಯೊಡನೆ ಪಲಾಯನವಾಗಿದ್ದ ಗುರುದತ್ ಗೆ, ಇವರ ಮನೆಯವರು ದೂರ ಸಂಬಂಧದಲ್ಲಿ ಸೊಸೆಯಾಗುವ 'ಸುವರ್ಣ' ಎಂಬ ಹೈದರಾಬಾದಿನ ಹುಡುಗಿಯೊಂದಿಗೆ ಮದುವೆ ಮಾಡುವವರಿದ್ದರು.
ನಟ, ಸಹಾಯಕ ನಿರ್ದೇಶಕನಾಗಿ
ಪ್ರಭಾತ್ ಕಂಪೆನಿಯಲ್ಲಿ ಗುರುದತ್ ನೃತ್ಯ ನಿರ್ದೇಶಕನಾಗಿ ಸೇರಿದ್ದರೂ, ಕೂಡಲೇ ನಟನಾಗಿ, ಸಹಾಯಕ ನಿರ್ದೇಶಕನಾಗಿಯೂ ಕೂಡಾ ಕೆಲವ ಮಾಡುವ ಅವಕಾಶಗಳು ಲಭ್ಯವಾದವು. ಇಲ್ಲಿ ದೇವಾನಂದ್, ಹಾಗೂ ರೆಹಮಾನ್ ರವರ ಸ್ನೇಹವಾಯಿತು. ಇವರ ಸ್ನೇಹದಿಂದಲೇ ಗುರುದತ್ ಚಲನಚಿತ್ರರಂಗದಲ್ಲಿ ಭದ್ರ ಬುನಾದಿ ಹಾಕುವಂತಾಯಿತು. ಪ್ರಭಾತ್ ಕಂಪೆನಿಯು ೧೯೪೭ರಲ್ಲಿ ಕಾರಣಾಂತರಗಳಿಂದ ಮುಚ್ಚಲ್ಪಟ್ಟಾಗ, ಗುರುದತ್ ಮುಂಬೈಗೆ ವಲಸೆ ಬಂದರು. ಇಲ್ಲಿ ಆಗಿನ ಕಾಲದ ಯಶಸ್ವೀ ನಿರ್ದೇಶಕರುಗಳಾದ ಅಮಿಯ ಚಕ್ರವರ್ತಿಯವರೊಂದಿಗೆ 'ಗರ್ಲ್ಸ್ ಸ್ಕೂಲ್' ಚಿತ್ರದಲ್ಲಿ ಹಾಗೂ ಗ್ಯಾನ್ ಮುಖರ್ಜಿಯವರ ಬಾಂಬೆ ಟಾಕೀಸ್ ರವರ 'ಸಂಗ್ರಾಮ್' ಚಿತ್ರದಲ್ಲಿ ಗುರುದತ್ ಕೆಲಸ ಮಾಡಿದರು. ತಮ್ಮ ನವಕೇತನ್ ಕಂಪೆನಿಯ ಮೊದಲ ಚಿತ್ರ ವಿಫಲವಾದಾಗ, ದೇವಾನಂದ್ ಗುರುದತ್ ಗೆ ತಮ್ಮ ಕಂಪೆನಿಯಲ್ಲಿ ನಿರ್ದೇಶಕನಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟರು. ಅಷ್ಟುಹೊತ್ತಿಗೆ ದೇವಾನಂದ್ ಸ್ಥಾಪಿಸಿದ 'ನವಕೇತನ್ ಕಂಪೆನಿ'ಯ ಅಡಿಯಲ್ಲಿ ಗುರುದತ್ ನಿರ್ದೇಶನದ 'ಬಾಝಿ' ಚಲನಚಿತ್ರವು ೧೯೫೧ನೇ ಇಸವಿಯಲ್ಲಿ ತೆರೆ ಕಂಡಿತು.
ಸ್ನೇಹಿತರಾಗಿದ್ದ ದೇವ್ ಮತ್ತು ಗುರುದತ್
ಪುಣೆಯ ಪ್ರಭಾತ್ ಕಂಪೆನಿಯಲ್ಲಿರುವಾಗ ಗುರುದತ್ ಹಾಗೂ ದೇವಾನಂದ್ ಇಬ್ಬರ ಬಟ್ಟೆಯನ್ನೂ ಕೂಡ ಒಬ್ಬನೇ ಅಗಸನು ಒಗೆಯುತ್ತಿದ್ದನು. ಇಸ್ತ್ರಿಮಾಡಿದ ಅಂಗಿಯನ್ನು ತಂದುಕೊಟ್ಟಾಗ ಅದನ್ನು ಗುರುದತ್ ಧರಿಸಿ ಹಮ್ ಏಕ್ ಹೈ ಚಿತ್ರದ ನಾಯಕ ನಟನಾಗಿ ಚಿತ್ರೀಕರಣಕ್ಕೆ ಸ್ಟುಡಿಯೋಗೆ ಶೂಟಿಂಗ್ ಗೆಬಂದಾಗ, ಅಲ್ಲಿಗೆ ಬಂದಿದ್ದ ದೇವಾನಂದ್ ಗುರುದತ್ ಧರಿಸಿರುವುದು ತಮ್ಮ ಅಂಗಿ ಎಂದು ಹೇಳಿ ಬೇಸರಪಟ್ಟುಕೊಳ್ಳುವುದು ಬೇಡ. ತಮ್ಮ ಅಂಗಿಯನ್ನು ಉಪಹಾರವಾಗಿ ಕೊಟ್ಟರು. ಪ್ರಶ್ನಿಸಿದಾಗ, ಗುರು ದತ್ ಅದು ತನ್ನ ಅಂಗಿಯಲ್ಲವೆಂದೂ, ಧರಿಸಲು ಬೇರೆ ಅಂಗಿ ತನ್ನಲ್ಲಿ ಇಲ್ಲವಾದುದರಿಂದ ಇದನ್ನು ಧರಿಸಿದೆನೆಂದೂ ಒಪ್ಪಿಕೊಂಡರು. ಅವರಿಬ್ಬರೂ ಸಮ ವಯಸ್ಕಾರಾಗಿದ್ದುದರಿಂದ, ಈ ಘಟನೆಯು ಒಂದು ಅಮೋಘ ಸ್ನೇಹದಲ್ಲಿ ಪರ್ಯಾವಸಾನಗೊಂಡಿತು 'ಒಂದು ವೇಳೆ ಗುರು ದತ್ ಚಿತ್ರ ನಿರ್ಮಾಪಕನಾದರೆ, ದೇವಾನಂದ್ ಆ ಚಿತ್ರದ ನಾಯಕ ನಟನಾಗುವನೆಂದೂ ಹಾಗೂ ದೇವಾನಂದ್ ಚಿತ್ರವೊಂದನ್ನು ನಿರ್ಮಿಸುವುದಾದರೆ ಅದರ ನಿರ್ದೇಶಕ ಗುರು ದತ್ ಆಗಿರುತ್ತಾರೆಂದು ಅವರು ಪರಸ್ಪರ ವಾಗ್ದಾನ ಮಾಡಿ ರಾಜಿ' ಮಾಡಿಕೊಂಡರು.
ದೇವಾನಂದ್ ತಮ್ಮ ಮಾತನ್ನು 'ಬಾಝಿ' ಚಲನಚಿತ್ರದ ಮೂಲಕ ಉಳಿಸಿಕೊಂಡರು. ಆದರೆ ಗುರುದತ್ ತನ್ನ ಮಾತನ್ನು ಉಳಿಸಿಕೊಳ್ಳಲಿಲ್ಲವೆಂದು ದೇವಾನಂದ್ ಬಹಳ ವಿಷಾದಿಸುತ್ತಿದ್ದರು. ತನ್ನದೇ ಆದ 'ಗುರುದತ್ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ'ಯ ನಿರ್ಮಾಣವಾದ 'ಸಿ.ಐ.ಡಿ'.ಚಲನಚಿತ್ರದ ನಾಯಕ ನಟ ದೇವಾನಂದ್. ಈ ಚಿತ್ರದ ನಿರ್ದೇಶಕ ಗುರುದತ್ ರವರ ಸಹಾಯಕ ನಿರ್ದೇಶಕನಾಗಿದ್ದ ರಾಜ್ ಖೋಸ್ಲಾ ಎಂಬವರು. ಹಾಗಾಗಿ ನೇರವಾಗಿ ದೇವಾನಂದ್ ಅಭಿನಯದ ಯಾವುದೇ ಚಲನಚಿತ್ರವನ್ನು ಗುರುದತ್ ನಿರ್ದೇಶಿಸಿರಲಿಲ್ಲ.
ಗುರುದತ್ ಹಾಗೂ ದೇವಾನಂದ್ ಜೊತೆಯಾಗಿ ಎರಡು ಅತೀ ಯಶಸ್ವೀ ಚಲನ ಚಿತ್ರಗಳಾದ 'ಬಾಝೀ' ಹಾಗೂ 'ಜಾಲ್' ಚಿ
ಚಿತ್ರ, ಬಾಝಿಯ ಹಾಗೂ ಇತರ ಕಾಣಿಕೆಗಳು
ಬಾಝಿ ಚಿತ್ರದಲ್ಲಿ ಭಾರತೀಯ ಚಲನಚಿತ್ರ ರಂಗಲ್ಲಿನ ಎರಡು ಪ್ರಮುಖ ತಾಂತ್ರಿಕ ಬೆಳವಣಿಗೆಗಳಿಗೆ ನಾಂದಿ ಹಾಡಿತು. ಚಿತ್ರದಲ್ಲಿನ ೧೪ ೧೦೦ ಎಮ್.ಎಮ್. ಮಸೂರಗಳ ಸಹಾಯದಿಂದ ಬಹಳ ಸಮೀಪದಿಂದ ತೆಗೆದ ದೃಶ್ಯಗಳ ತಂತ್ರಜ್ಞಾನ ಮುಂದೆ "ಗುರುದತ್ ಶಾಟ್" ಎಂದೇ ಹೆಸರಾಯಿತು ಹಾಗೂ ಈ ಚಿತ್ರದಲ್ಲಿ ಹಾಡುಗಳ ಮುಖಾಂತರ ಕಥೆಯನ್ನು ಮುಂದುವರಿಸುವ ರೀತಿಯೂ ಕೂಡಾ ಆಗ ಹೊಸದು. ಗುರು ದತ್ ಈ ಚಿತ್ರದಲ್ಲಿ ಝೋರಾ ಸೆಹಗಲ್ (ಅಲ್ಮೋರಾದಲ್ಲಿ ಭೇಟಿಯಾದಾಕೆ) ಎಂಬುವವರನ್ನು ನೃತ್ಯ ನಿರ್ದೇಶಕಿಯಾಗಿ ಪರಿಚಯಿಸಿದರು. ಹಾಗೂ ಮುಂದೆ ತನ್ನ ಮಡದಿಯಾಗುವ ಗೀತಾ ದತ್ ರವರನ್ನು ಈ ಚಿತ್ರದ ಚಿತ್ರೀಕರಣದ ವೇಳೆಯಲ್ಲಿ ಭೇಟಿಯಾದರು.
ನಿರ್ದೇಶಕನಾಗಿ ಗುರುದತ್
ಬಾಝೀ ಚಲವಚಿತ್ರವು ತೆರೆ ಕಂಡ ಕೂಡಲೇ ಯಶಸ್ವಿಯಾಯಿತು. ಇದರ ನಂತರ ಗುರುದತ್ 'ಜಾಲ್' ಹಾಗೂ 'ಬಾಝಿ' ಚಲನಚಿತ್ರಗಳನ್ನು ನಿರ್ಮಿಸಿದರು. ಈ ಎರಡೂ ಚಲನ ಚಿತ್ರಗಳು ಯಶಸ್ಸನ್ನು ಕಾಣಲಿಲ್ಲವಾದರೂ, ಈ ಮುಂದಿನ ದಿನಗಳಲ್ಲಿ ಬಂದ ಚಿತ್ರಗಳಲ್ಲಿ ಅತ್ಯದ್ಭುತವಾಗಿ ಶ್ರಮಿಸಿದ ತಂಡವೊಂದನ್ನು ರಚಿಸುವದಕ್ಕೆ ಸಾಧ್ಯವಾಯಿತು. ಜಾನಿ ವಾಕರ್ (ಹಾಸ್ಯನಟ), ವಿ.ಕೆ.ಮೂರ್ತಿ, ಅಬ್ರಾರ್ ಅಲ್ವಿ (ಲೇಖಕ ಹಾಗೂ ನಿರ್ದೇಶಕ) ಇವರೇ ಮೊದಲಾದಂತಹ ಅನೇಕ ಕಲಾವಿದರನ್ನು ಅನ್ವೇಷಿಸಿ, ಗುರುದತ್ ಪ್ರೋತ್ಸಾಹಿಸಿದರು. ಸರಿಯಾದ ನಾಯಕ ನಟ ಸಿಗದೇ ಗುರುದತ್ 'ಬಾಝಿ' ಚಿತ್ರದಲ್ಲಿ ನಾಯಕ ಪಾತ್ರವನ್ನು ನಿರ್ವಹಿಸಿದ್ದಲ್ಲದೇ, ಸ್ವತಃ ನಿರ್ದೇಶಿಸಿದರು.
ಅದೃಷ್ಟ ಲಕ್ಷ್ಮಿಯು ಗುರುದತ್ ಮುಂದಿನ ಚಿತ್ರವಾದ 'ಆರ್ ಪಾರ್' ನಲ್ಲಿ ಒಲಿದಳು. ಇದಾದ ನಂತರ ೧೯೫೫ ರಲ್ಲಿ ತೆರೆಕಂಡ 'ಮಿಸ್ಟರ್ ಆಂಡ್ ಮಿಸ್ಸೆಸ್ ೫೫', 'ಸಿ.ಐ.ಡಿ'., ಹಾಗೂ ೧೯೫೭ ರಲ್ಲಿ ತೆರೆಕಂಡ ನಿರಾಸಕ್ತ ಪ್ರಪಂಚದಿಂದ ತಿರಸ್ಕೃತನಾಗಿ ತನ್ನ ಮರಣಾನಂತರವೇ ಯಶಸ್ಸನ್ನು ಕಾಣುವ ಕವಿಯೊಬ್ಬನ ಕಥೆಯ 'ಪ್ಯಾಸಾ' ಇವೇ ಮೊದಲಾದ ಚಲನಚಿತ್ರಗಳು ಭಾರೀ ಯಶಸ್ಸನ್ನು ಕಂಡವು. ಈ ಮೇಲಿನ ೫ ಚಿತ್ರಗಳ ಪೈಕಿ ೩ ಚಿತ್ರಗಳಲ್ಲಿ ಗುರುದತ್ ಪ್ರಧಾನ ಭೂಮಿಕೆಯನ್ನು ವಹಿಸಿದ್ದರು.
೧೯೫೯ನೇ ಇಸವಿಯಲ್ಲಿ ಬಿಡುಗಡೆಯಾದ 'ಕಾಗಝ್ ಕೇ ಪೂಲ್' ಚಿತ್ರವು ಗುರುದತ್ ಪಾಲಿಗೆ ತೀವ್ರ ನಿರಾಶಾದಾಯಕವಾಗಿತ್ತು. ಪ್ರಸಿದ್ಧ ನಿರ್ದೇಶಕನೊಬ್ಬ (ಗುರುದತ್ ಅಭಿನಯ) ಕಲಾವಿದೆಯೊಬ್ಬಳನ್ನು (ವಹೀದಾ ರೆಹಮಾನ್ ಅಭಿನಯ - ನಿಜ ಜೀವನದಲ್ಲೂ ಗುರುದತ್ ಈಕೆಯನ್ನು ಪ್ರೀತಿಸುತ್ತಿದ್ದರು)ಪ್ರೀತಿಸುವ ಕಥಾವಸ್ತುವುಳ್ಳ ಈ ಚಿತ್ರವನ್ನು ತಮ್ಮ ತನು ಮನ ಧನದಿಂದ ನಿರ್ಮಿಸಿದ್ದರು. ಈ ಚಿತ್ರವು ಗಲ್ಲಾ ಪೆಟ್ಟಿಗೆಯಲ್ಲಿ ಅಪಾರ ಸೋಲನ್ನು ಕಂಡಿತು ಹಾಗೂ ಇದರಿಂದ ಗುರುದತ್ ಅಪಾರ ನಷ್ಟವನ್ನು ಅನುಭವಿಸಿದರು. ತನ್ನ ಹೆಸರು ಶಾಪಗ್ರಸ್ತವೆಂದು ಭಾವಿಸಿದ ಗುರುದತ್ ತಮ್ಮ ಕಂಪೆನಿಯಿಂದ ಹೊರ ಬಂದ ಎಲ್ಲಾ ಚಿತ್ರಗಳ ನಿರ್ದೇಶನವನ್ನು ಇತರ ನಿರ್ದೇಶಕರಿಂದ ಮಾಡಿಸಿದರು.
ಕೊನೆಯ ಚಿತ್ರಗಳು
'ಚೌದ್ವೀಕಾ ಚಾಂದ್' ಚಿತ್ರದಲ್ಲಿ ಗುರುದತ್ ಒತ್ತಾಯಪೂರ್ವಕವಾಗಿ ನಟಿಸಿದರು. ಈ ಚಿತ್ರವು ಬಹಳ ಯಶಸ್ಸನ್ನು ಕಂಡಿತು. ಹಾಗೂ ಇವರ ಸ್ಟುಡಿಯೋವು ಪತನವಾಗುವಿದನ್ನು ತಡೆಗಟ್ಟಿತು. ಗುರುದತ್ ಸಹಾಯಕನಾದ ಅಬ್ರಾರ್ ಅಲ್ವಿಯವರ ನಿರ್ದೇಶನದ ೧೯೬೨ನೇ ಇಸವಿಯಲ್ಲಿ ತೆರೆ ಕಂಡ 'ಸಾಹೇಬ್ ಬೀವಿ ಔರ್ ಗುಲಾಂ' ಚಲನಚಿತ್ರದಲ್ಲಿಯೂ ಕೂಡಾ ಇವರು ನಟಿಸಿದರು. ಈ ಚಿತ್ರವು ಗುರುದತ್ ಅಭಿನಯದ ಅತ್ಯಂತ ಕಲಾತ್ಮಕ ಹಾಗೂ ದುರಂತ ಕಥೆಯುಳ್ಳ ಚಿತ್ರವೆಂದು ಇಂದಿಗೂ ಪರಿಗಣಿಸಲ್ಪಡುತ್ತದೆ. ಆ ಚಿತ್ರದ ನಂತರ ಅಷ್ಟೇನೂ ಪ್ರಚಾರ ಪಡೆಯದ ಅನೇಕ ಚಿತ್ರಗಳಲ್ಲಿ ಗುರುದತ್ ಅಭಿನಯಿಸಿದರು.
ನಿಧನ
ಅಕ್ಟೊಬರ್ ೧೦, ೧೯೬೪ ರಂದು ಗುರುದತ್ ಮನೆಯ ಹಾಸಿಗೆಯ ಮೇಲೆ ಅವರ ಮೃತದೇಹವು ಪತ್ತೆಯಾಯಿತು. ಅವರು ಮದ್ಯದಲ್ಲಿ ನಿದ್ರೆ ಗುಳಿಗೆಗಳನ್ನು ಬೆರೆಸಿ ಸೇವಿಸುತ್ತಿದ್ದರೆಂದು ಹೇಳುತ್ತಾರೆ. ಇವರ ಮರಣವು ಆತ್ಮಹತ್ಯೆಯೂ ಆಗಿರಬಹುದು, ಅಥವಾ ಅತಿಯಾದ ಮದ್ಯಸೇವನೆಯ ಪರಿಣಾಮವೂ ಆಗಿರಬಹುದು.
ಅಕ್ಟೋಬರ್ ೨೦೦೪ರಲ್ಲಿ ನಡೆದ ಗುರುದತ್ ರವರ ಮರಣದ ೪೦ನೇ ವಾರ್ಷಿಕೋತ್ಸವದಂದು 'ಇಂಡಿಯ ಅಬ್ರೋಡ್' ಆಯೋಜಿಸಿದ ಸಂದರ್ಶನದಲ್ಲಿ ಗುರುದತ್ ರವರ ಪುತ್ರ ಅರುಣ್ ದತ್ ರವರು ತಮ್ಮ ತಂದೆಯದು ಒಂದು ಆಕಸ್ಮಿಕವೆಂದು ಅಭಿಪ್ರಾಯ ಸೂಚಿಸಿದರು. ಮರುದಿನ ನಟಿ ಮಾಲಾ ಸಿನ್ಹಾರವರನ್ನು 'ಬಹಾರೇ ಫಿರ್ ಆಯೇಂಗೀ' ಚಿತ್ರದ ಸಲುವಾಗಿಯೂ ಹಾಗೂ ರಾಜ್ ಕಪೂರ್ ರವರನ್ನು ವರ್ಣ ಚಲನಚಿತ್ರಗಳನ್ನು ರಚಿಸುವ ಬಗ್ಗೆ ಭೇಟಯಾಗುವವರಿದ್ದರು. ಅರುಣ್ ರವರು ಹೇಳುವಂತೆ " ನನ್ನ ತಂದೆಯು ನಿದ್ರಾಹೀನತೆಯಿಂದ ಬಳಲುತ್ತಿದ್ದರು ಹಾಗೂ ಇತರರಂತೆ ನಿದ್ರೆ ಗುಳಿಗೆಗಳನ್ನು ಸೇವಿಸುತ್ತಿದ್ದರು. ಆ ದಿನ ಪಾನಮತ್ತರಾಗಿದ್ದ ಅವರು ಅತಿಯಾಗಿ ನಿದ್ರೆ ಗುಳಿಗೆಗಳನ್ನು ಸೇವಿಸಿದರು. ಇದೇ ಅವರ ಪ್ರಾಣಕ್ಕೆ ಕುತ್ತಾಯಿತು. ಅದೊಂದು ಮದ್ಯದ ಹಾಗೂ ನಿದ್ರೆಗುಳಿಗೆಗಳ ಮಾರಕ ಮಿಶ್ರಣವಾಗಿತ್ತು."
ಪಾರಿವಾರಿಕ ಬದುಕು :
೧೯೫೩ ರಲ್ಲಿ ಗುರುದತ್ ಪ್ರಸಿದ್ಧ ಹಿನ್ನೆಲೆ ಗಾಯಕಿಯಾಗಿದ್ದ 'ಗೀತಾ ರಾಯ್' (ಮುಂದೆ ಗೀತಾ ದತ್ ಆದರು) ಅವರನ್ನು ಲಗ್ನವಾದರು. ಇವರ ನಿಶ್ಚಿತಾರ್ಥವು ೩ ವರ್ಷಗಳ ಹಿಂದೆಯೇ ನಡೆದಿತ್ತು, ಹಾಗೂ ವಿವಾಹವಾಗಲು ಮನೆಯವರ ಬಹಳವಾದ ವಿರೋಧವನ್ನು ಎದುರಿಸಬೇಕಾಯಿತು. ಗುರುದತ್ ಮತ್ತು ಗೀತಾದತ್ ರಿಗೆ 'ತರುಣ್,' 'ಅರುಣ್ ಹಾಗೂ 'ನೀನಾ' ಎಂಬ ಮಕ್ಕಳಿದ್ದರು.
ದುರಾದೃಶ್ಟವಶಾತ್ ಇವರ ವೈವಾಹಿಕ ಜೀವನವು ದುರಂತವಾಗಿತ್ತು. ಇವರ ತಮ್ಮ ಆತ್ಮಾರಾಮ್ ಅವರು ಹೇಳುವಂತೆ "ಗುರುದತ್ ಕೆಲಸದ ವಿಷಯದಲ್ಲಿ ಎಷ್ಟು ಶಿಸ್ತಿನ ವ್ಯಕ್ತಿಯಾಗಿದ್ದರೋ, ವೈಯಕ್ತಿಕ ಜೀವನದಲ್ಲಿ ಅಷ್ಟೇ ಅಶಿಸ್ತಿನವರಾಗಿದ್ದರು." ಅತಿಯಾದ ಮದ್ಯಸೇವನೆ, ಧೂಮಪಾನ ಮನೆಗೆ ಯಾವಾಗಂಡರೆ ಅವಾಗ ಬರುವ ಅನಿಮೀಯತೆಗಳಿಂದ ಅವರ ಮರಣ ಕಾಲದಲ್ಲಿ ಗೀತಾರವರಿಂದ ಬೇರ್ಪಟ್ಟು ಏಕಾಂಗಿಯಾಗಿ ಬದುಕುತ್ತಿದ್ದರು.
ಗುರುದತ್ ಕಾಣಿಕೆಗಳು
ಗುರುದತ್ ರವರನ್ನು ಮೊದ ಮೊದಲು ಮೇರು ನಟನೆಂದು ನೆನೆದರೂ ಕಾಲಾನಂತರ ಅವರು ಓರ್ವ ಅತ್ಯುತ್ತಮ ನಿರ್ದೇಶಕರೆಂದೇ ಕರೆಯಲ್ಪಡುತ್ತಾರೆಂದು ಸ್ಪಷ್ಟವಾಯಿತು. ೧೯೭೩ರಲ್ಲಿ ಆರಂಭಿಸಿ, ಇವರ ಚಲನಚಿತ್ರಗಳನ್ನು ಭಾರತ ಹಾಗೂ ಪ್ರಪಂಚದಾದ್ಯಂತ ನಡೆದ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿಸಲಾಯಿತು. ಇವರ ಚಿತ್ರಗಳು ಸತ್ಯಜಿತ್ ರೇ ಅವರ ಚಿತ್ರಗಳನ್ನು ಮೆಚ್ಚಿದಂತಹ ಪ್ರೇಕ್ಷಕರ ಮೆಚ್ಚಿಗೆಗೆ ಪಾತ್ರವಾದವು. ಇವರ ಚಿತ್ರಗಳಲ್ಲಿನ ಹಾಡುಗಳ ಚಿತ್ರೀಕರಣ ಹಾಗೂ ಇವರ ಚಿತ್ರಗಳಲ್ಲಿ ಇವರು ಹೆಣೆದಿರುವ ವಿಭಿನ್ನ ಪಾತ್ರಗಳ ಮೂಲಕ ಇವರು ಭಾರತದ ಅನೇಕ ಸಾಮಾನ್ಯ ಪ್ರಜೆಯ ಹೃದಯದಲ್ಲಿ ನೆಲಿಸಿದ್ದಾರೆ.
೧. ವರ್ಷ ೨೦೧೨ ರಲ್ಲಿ ಅಮೇರಿಕಾದ 'ಸಿ. ಏನ್. ಏನ್. ಸುದ್ದಿ ಸಂಸ್ಥೆ', ಏಷಿಯಾ ಖಂಡದ ಅತ್ಯಂತ ಪ್ರತಿಭಾನ್ವಿತ ೨೫ ನಟರಲ್ಲಿ ಒಬ್ಬರೆಂದು ದಾಖಲಿಸಿತ್ತು.
೨. ನಿರ್ಮಿಸಿದ ೮ ಚಲನ ಚಿತ್ರಗಳು ವೈವಿಧ್ಯಪೂರ್ಣವಾದ ಗಳನ್ನೂ ಹೊಂದಿದ್ದು ೧೯೫೭ ರಲ್ಲಿ ನಿರ್ಮಿತವಾದ ಪ್ಯಾಸಾ ಚಲನ ಚಿತ್ರ ಮಹೋನ್ನತ ೧೦೦ ಚಿತ್ರಗಳಲ್ಲೊಂದೆಂದು ದಾಖಲಿಸಿದೆ.
೩. ಪ್ರಪ್ರಥಮ ೭೦ ಮೀ. ಮೀಟರ್ ಚಲನ ಚಿತ್ರ 'ಕಾಗಜ್ ಕೆ ಫೂಲ್' ಎಂದು ಪ್ರಸಿದ್ಧಿ ಪಡೆದಿದೆ.
೪. ತಮ್ಮಗೆಳೆಯ 'ವಿ. ಕೆ. ಮೂರ್ತಿ'ಯವರನ್ನು ಇಂಗ್ಲೆಂಡ್ ಗೆ ಸಿನಿಮಾಟೋಗ್ರಫಿಯಲ್ಲಿ ಹೆಚ್ಚಿನ ತರಬೇತಿ ಪಡೆಯಲು ಕಳಿಸಿಕೊಟ್ಟರು. ಅವರು ಹೋದ ಸಮಯದಲ್ಲಿ 'ಗನ್ಸ್ ಆಫ್ ನವರೋನ್' ಎಂಬ ಹಾಲಿವುಡ್ ಚಲನಚಿತ್ರದ ಚಿತ್ರೀಕರಣ ಯುರೋಪ್ ನಲ್ಲಿ ನಡೆಯುತ್ತಿತ್ತು. ಮೂರ್ತಿಯವರು ಅಮೇರಿಕನ್ ಫೋಟೋಗ್ರಾಫರ್ಸ್ ಗಳ ಹತ್ತಿರ ಸಂಪರ್ಕ ಬೆಳೆಸಿ, ಅನೇಕ ಹೊಸ ವಿಷಯಗಳನ್ನು ಕಲಿತುಕೊಂಡು ಬಂದು ಗುರುದತ್ ರವರ ಚಿತ್ರಗಳಲ್ಲಿ ನಂತರ ಬಾಲಿವುಡ್ ವಲಯದಲ್ಲಿ ಅವುಗಳ ಸೂಕ್ತ ಪ್ರಯೋಗ ಮಾಡಿದರು.
ಆಯ್ದ ಚಲನಚಿತ್ರಗಳು
ನಟನಾಗಿ
ಪಿಕ್ನಿಕ್ (೧೯೬೪)
ಸಾಂಝ್ ಔರ್ ಸವೇರಾ (೧೯೬೪)
ಸುಹಾಗನ್ (೧೯೬೪)
ಬಹುರಾಣಿ (೧೯೬೩)
ಭರೋಸಾ (೧೯೬೩)
ಸಾಹಿಬ್ ಬೀವಿ ಔರ್ ಗುಲಾಮ್ (೧೯೬೨)
ಸೌತೇಲಾ ಭಾಯೀ (೧೯೬೨)
ಚೌದ್ವೀ ಕಾ ಚಾಂದ್ (೧೯೬೦)
ಕಾಗಝ್ ಕೇ ಫೂಲ್ (೧೯೫೯)
೧೨ ಓ'ಕ್ಲಾಕ್ (೧೯೫೮)
ಪ್ಯಾಸಾ (೧೯೫೭)
ಮಿಸ್ಟರ್ ಆಂಡ್ ಮಿಸ್ಸೆಸ್ '೫೫ (೧೯೫೫)
ಆರ್ ಪಾರ್ (೧೯೫೪)
ಸುಹಾಗನ್ (೧೯೫೪)
ಬಾಝ್ (೧೯೫೩)
ಹಮ್ ಏಕ್ ಹೈ (೧೯೪೬)
ನಿರ್ದೇಶಕನಾಗಿ :
ಕಾಗಝ್ ಕೇ ಫೂಲ್ (೧೯೫೯)
ಪ್ಯಾಸಾ (೧೯೫೭)
ಸೈಲಾಬ್ (೧೯೫೬)
ಮಿಸ್ಟರ್ ಆಂಡ್ ಮಿಸ್ಸೆಸ್ '೫೫ (೧೯೫೫)
ಬಾಝ್ (೧೯೫೩)
ಜಾಲ್ (೧೯೫೨)
ಬಾಝಿ (೧೯೫೧)
ಗುರುದತ್ ಒಬ್ಬ ಅತ್ಯಂತ ಸೃಜನಾತ್ಮಮ ಚಿತ್ರ ನಿರ್ಮಾಪಕರಲ್ಲೊಬ್ಬರು :
ಗುರು ದತ್ ರವರ ಚಲನ ಚಿತ್ರ ನಿರ್ಮಾಣ ಕಲಾತ್ಮಕತೆಗಾಗಿ ದೇಶ-ವಿದೇಶಗಳಲ್ಲಿ ಶ್ಲಾಘಿಸಲ್ಪಟ್ಟಿದೆ, ಗಮನಾರ್ಹವಾಗಿ ಅವರ ಕ್ಲೋಸ್-ಅಪ್ ಕ್ಯಾಮರಾ ಶಾಟ್ಗಳು, ಲೈಟಿಂಗ್ ಮತ್ತು ವಿಷಣ್ಣತೆಯ ಚಿತ್ರಣಗಳ ಬಳಕೆ. ಅವರು ನಿರ್ದೇಶಿಸಿದ ಒಟ್ಟು 8 ಹಿಂದಿ ಚಲನಚಿತ್ರಗಳಲ್ಲಿ ಹಲವಾರು ಅಂತರರಾಷ್ಟ್ರೀಯ ಮಟ್ಟದಲ್ಲಿ ತಜ್ಞರ ಗಮನ ಸೆಳೆದಿವೆ.
1. ಪ್ಯಾಸಾ (1957), ಇದು ಟೈಮ್ ಮ್ಯಾಗಜೀನ್ನ 100 ಶ್ರೇಷ್ಠ ಚಲನಚಿತ್ರಗಳ ಪಟ್ಟಿಗೆ ಪ್ರವೇಶಿಸಿತು,
2. ಕಾಗಜ್ ಕೆ ಫೂಲ್ (1959),
3. ಚೌಧ್ವಿನ್ ಕಾ ಚಾಂದ್ (1960),
4. ಸಾಹಿಬ್ ಬೀಬಿ ಔರ್ ಗುಲಾಮ್ (1962),
ಈ ಕಲಾತ್ಮಕ ಚಿತ್ರಗಳು, ಹಿಂದಿ ಚಿತ್ರರಂಗದ ಶ್ರೇಷ್ಠ ಚಲನಚಿತ್ರಗಳ ಪಟ್ಟಿಯಲ್ಲಿ ದಾಖಲಾಗಿದೆ.