ಬದನೆ ಮಜ್ಜಿಗೆ ಹುಳಿ

ಬದನೆ ಮಜ್ಜಿಗೆ ಹುಳಿ

ಬೇಕಿರುವ ಸಾಮಗ್ರಿ

ಉಡುಪಿ ಗುಳ್ಳ (ಮಟ್ಟು ಗುಳ್ಳ, ಬದನೆ) ೨ ಮಧ್ಯಮ ಗಾತ್ರ, ಮಜ್ಜಿಗೆ ೩ ಕಪ್, ಅರಶಿನ ಹುಡಿ, ಉಪ್ಪು ರುಚಿಗೆ ತಕ್ಕಷ್ಟು, ಟೊಮ್ಯಾಟೋ -೪, ಕಾಯಿಮೆಣಸು ೩, ತೆಂಗಿನ ಕಾಯಿ ತುರಿ ೨ ಕಪ್, ಮೆಂತೆ, ತುಪ್ಪ.

ತಯಾರಿಸುವ ವಿಧಾನ

ಬದನೆ(ಉಡುಪಿ ಗುಳ್ಳ)ಯನ್ನು ತುಂಡುಗಳನ್ನಾಗಿ ಮಾಡಿ, ಮಜ್ಜಿಗೆ ಅಥವಾ ಅರಶಿನ ಹುಡಿ ಹಾಕಿದ ನೀರಿನಲ್ಲಿ ಹತ್ತು ನಿಮಿಷ ಇಡಬೇಕು. ರುಚಿಗೆ ತಕ್ಕಷ್ಟು ಉಪ್ಪು, ಟೊಮ್ಯಾಟೊ, ಎರಡು ಕಾಯಿಮೆಣಸುಗಳನ್ನು ಬದನೆ ಹೋಳುಗಳಿಗೆ ಹಾಕಿ ಸ್ವಲ್ಪ ನೀರು ಸೇರಿಸಿ ಬೇಯಿಸಬೇಕು. (ಚಿಟಿಕೆ ಅರಶಿನ ಹುಡಿ ಬೇಕಾದರೆ ಹಾಕಬಹುದು) ಈ ಹೋಳುಗಳು ಹತ್ತೇ ನಿಮಿಷದಲ್ಲಿ ಬೇಯುತ್ತದೆ. ತೆಂಗಿನಕಾಯಿ ತುರಿಗೆ ಒಂದು ಕಾಯಿಮೆಣ‌ಸು ಹಾಕಿ ನುಣ್ಣಗೆ ರುಬ್ಬಿ, ಬೆಂದ ಹೋಳುಗಳಿಗೆ ಸೇರಿಸಿ. ಮಜ್ಜಿಗೆ ಸೇರಿಸಿ, ಹದ ಕುದಿಯಲು ಆರಂಭಿಸುವಾಗ ಕೆಳಗಿಳಿಸಿ. ತುಪ್ಪ, ಮೆಂತೆ ಹಾಕಿ ಒಗ್ಗರಣೆ ಹಾಕಿ, ಹತ್ತು ನಿಮಿಷ ಮುಚ್ಚಿಡಿ. ಇದನ್ನು ಹೆಚ್ಚು ಕುದಿಸಬಾರದು. ಕುದಿಸಿದರೆ ರುಚಿ ಹಾಳಾಗುತ್ತದೆ. ಈ ಹುಳಿಯನ್ನು ‘ಮೇಲಾರ’ ಎಂದೂ ಕರೆಯುತ್ತಾರೆ

-ರತ್ನಾ ಕೆ.ಭಟ್, ತಲಂಜೇರಿ