ಅ(ಇ)ವಳ(ಲ್ಲ)

ಅ(ಇ)ವಳ(ಲ್ಲ)

ಹುಡುಕುತ್ತಿದ್ದೆ ಅವಳನ್ನು ಹಳ್ಳಿಯ ಹರಿಣಿಯರ ನಡುವೆ ಪುಸ್ತಕವನ್ನ ಎದೆಗಾನಿಸಿಕೊಂಡು ಹೋಗುತ್ತಿರುವ ಹದಿಹರೆಯದ ಹುಡುಗಿಯರ ಹಿಂಡಲ್ಲಿ ಹೂದೋಟದಲ್ಲಿ ಆಗತಾನೇ ಅರಳುತ್ತಿರುವ ಹೂಗಳನ್ನ ಹೆಕ್ಕುತ್ತಿರುವ ಲಲನೆಯರ ಗುಂಪಲ್ಲಿ ನೇಸರ ಸವಿಯುತ್ತಾ ಸಾಗುತ್ತಿರುವ ಸುಂದರಿಯರ ಸಾಲಲ್ಲಿ ಬಿಂದಿಗೆಯನ್ನ ಸೊಂಟಕ್ಕೆ ಸಿಕ್ಕಿಸಿ ನೀರ ತರಲು ಹೋಗುತ್ತಿರುವ ಮಂಜು ಮುಸುಕಿದ ಹಾದಿಯಲ್ಲಿ ಇಲ್ಲ, ಎಲ್ಲೂ ಕಾಣಿಸಲಿಲ್ಲ, ಎಲ್ಲಿ ಹೋದಳು?? ಇವಳೇ?!! ಹೌದು ಇವಳೇ!! ಮಂತ್ರಿ ಮಾಲಲ್ಲಿ ಅವನ ಜೊತೆಗೆ ಮೈಗೆ ಮೈ ತಾಕಿಸಿ ಹೋಗುತ್ತಿರುವವಳೇ ಕಾಫೀ ಡೇಯಲ್ಲಿ ಕಾಸ್ಟ್ಲೀ ಕಾಫಿಯನ್ನ ಹೀರುತ್ತಿರುವವಳೇ ಪಬ್ಬಿನ ಕತ್ತಲ ಕೂಪದಲ್ಲಿ ಅವನನ್ನ ಹಿಡಿದುಕೊಂಡು ನರ್ತಿಸುತ್ತಿರುವವಳೇ ಅಲ್ಲವೇ ಅಲ್ಲ ಇವಳು ಅವಳಲ್ಲ ಇವಳು ಅವಳಾಗಿರಲಿಕ್ಕಿಲ್ಲ ಎಲ್ಲಿಯ ಲಂಗ ದಾವಣಿ, ಎಲ್ಲಿಯ ತುಂಡು ಲಂಗ ಆ ಮುಗ್ಧ ಮುಗುಳ್ನಗೆ, ಈ ಕೃತಕ ನಗೆ ಆ ಸರಳ ಸೌಂದರ್ಯ, ಈ ಸರ್ಪ ಸೌಂದರ್ಯ ಆ ಸಹಜ ಪ್ರೀತಿ, ಈ ತೋರಿಕೆ ಪ್ರೀತಿ ಆದರೂ ಬಳಿಹೋಗಿ ಮಾತನಾಡಿಸಲೇ?? ಬೇಡ ಹಿಂದಿರುಗಿ ಹೋಗಿ ಹಳ್ಳಿಯಲ್ಲೇ ಹುಡುಕುವೆ ಅವಳು ಅಲ್ಲಿಯೇ ಅಡಗಿರಬಹುದೇನೋ?? ಒಂದೊಮ್ಮೆ ಸಿಗದಿದ್ದರೂ ಕಲ್ಪನೆಯಲ್ಲೇ ಇರಲಿ ಆ ಅಮೂರ್ತ ರೂಪ ಮರುಕಳಿಸುತ್ತಿರಲಿ
Rating
No votes yet

Comments