ಅಕ್ಷರಗಳ ಕೈಪಿಡಿದು......

ಅಕ್ಷರಗಳ ಕೈಪಿಡಿದು......

ಬರೆಯುವ ಜಾಗ ಮತ್ತು ಬರಹಗಾರರು:

ನೊಬೆಲ್‌ ಪ್ರಶಸ್ತಿ  ಪರಸ್ಕೃತ ಲೇಖಕ ಫೆರಿಟ್‌ ಒರ್ಹಾನ್‌ ಪಮುಕ್‌ ಹಾಗೂ  ಅಮೆರಿಕದ ಲೇಖಕಿ  ಮಾಯಾ ಏಂಜಲೋ ರವರ ಬರಹದ ಬದುಕಿನ ಬಗ್ಗೆ  " ಮಯೂರ" ಪತ್ರಿಕೆಯಲ್ಲಿನ ಲೇಖನಗಳು ಈ ಬ್ಲಾಗ್‌  ಗೆ ಪ್ರೇರಣೆ ( ಜುಲೈ, ಆಗಸ್ಟ ೨೦೨೧  ಸಂಚಿಕೆಗಳು).

ಬರವಣಿಗೆಯ ಉದ್ದೇಶಕ್ಕಾಗಿಯೇ  ವಾಸದ ಮನೆಗೆ ಹತ್ತಿರವಾದ ಆದರೆ ಬೇರೆಯಾದ ಬಾಡಿಗೆ ಮನೆ /ಹೊಟೆಲ್‌ ರೂಮ್‌ ನಲ್ಲಿ ಬರವಣಿಗೆ ಮಾಡುತ್ತಿದ್ದುದು ಇವರಿಬ್ಬರಲ್ಲಿ ಕಂಡ ಒಂದು ಸಾಮಾನ್ಯ ಅಂಶ. ನಮ್ಮಲ್ಲಿಯೂ ಕೆಲವು  ಕನ್ನಡದ ಬರಹಗಾರರು ಬರವಣಿಗೆಗಾಗಿ  ಹೊಟೆಲ್‌ ರೂಮ್‌  ಬಳಸುತ್ತಿದುದನ್ನು  ನಾವು ಕೇಳಿದ್ದೇವೆ.. 

ಮೇಲಿನ ಎಲ್ಲ ಬರಹಗಾರರೂ ನೀಡುವ ಕಾರಣಗಳೇನೇ  ಇರಲಿ , ಬರವಣಿಗೆಯನ್ನು ಗಂಭೀರವಾಗಿ ತೆಗೆದುಕೊಂಡ ಲೇಖಕರಿಗೆ  ಬೇಕಾದ   ಧ್ಯಾನಸ್ಥ ಮನಸ್ತಿತಿಯನ್ನು ಒದಗಿಸಲು ದಿನನಿತ್ಯದ  ಚಟುವಟಿಕೆಗಳಿಂದ ಸುತ್ತವರೆದ ವಾತಾವರಣದಿಂದ ಬೇರೆಯಾದ ಜಾಗದ ಅವಶ್ಕಕತೆಯಿದೆ ಎಂದು ಅನಿಸುತ್ತದೆ. ನಿಜ. ಕವಿ ಇರಬಹುದು ಅಥವಾ ಬರಹಗಾರನಿರಬಹುದು ಅವರು ವಿಹರಿಸುವುದು ಕಲ್ಪನಾಲೋಕದಲ್ಲಿ.  ಈ ಕಲ್ಪನಾಲೋಕದ ಆಕಾಶಯಾನವನ್ನು ಭಗ್ನಗೊಳಿಸಿ ಧರೆಗಿಳಿಸುವ ಹಲವಾರು  ಸಾಧ್ಯತೆಗಳು ನಮ್ಮ ವಾಸಸ್ಥಳದ ಅವಿಭಾಜ್ಯ ಅಂಗವಾಗಿರುತ್ತದೆ. ಹೀಗಾಗಿ  ಬರಹಗಾರರು  ಸ್ವತಂತ್ರರಾಗಿ ಮಾನಸ ಪ್ರಪಂಚದಲ್ಲಿ ವಿಹರಿಸಲು  ಬೇರೆ ಜಾಗ ಸಹಕಾರಿಯಾಗುತ್ತದೆ.

ಓದು- ಬರಹದ  ವಿಧಾನದಲ್ಲಿನ  ವಿಭಿನ್ನತೆಗಳು

ಬರಹಗಾರರ ಪರಮಾಪ್ತ ವಿಚಾರವಾದ ಒದು-ಬರಹದ ಕ್ರಿಯೆಗಳು  ಅವರ ಸೃಜನಶೀಲ ಚಟುವಟಿಕೆಯ ಮುಖ್ಯ ಭಾಗವಾಗಿದ್ದು, ರೂಢಿಸಿಕೊಂಡ  ಸ್ವಭಾವದಂತೆ ,   ಕೆಲವು ಅವರ ವಿಧಾನಗಳು ಹತ್ತಿರದಿಂದ ಗಮನಿಸುವವರಿಗೆ  ಸಹ್ಯವಾಗದೆ ಇರಬಹುದು. ಉದಾಹರಣೆಗೆ ಲೇಖಕಿ ಮಾಯಾ ಏಂಜಲೋಳ  " ಹಾಸಿಗೆಯ ಮೇಲೆ ಬೋರಲು ಮಲಗಿ ಮೊಣಕೈ ಮೇಲೆ ಒರಗಿಕೊಂಡು ಬರೆಯುವ " ಅಭ್ಯಾಸ. ಕೆಲವು ಲೇಖಕರ ಓದು-ಬರಹ ಸಾಗುವುದೇ ಪುಸ್ತಕಗಳ  ರಾಶಿಯ ಮಧ್ಯೆ.  ಈ  ಸ್ವಭಾವ ವ್ಯತ್ಯಾಸಗಳು ಗಂಡ-ಹೆಂಡತಿ, ತಂದೆ-ಮಕ್ಕಳನ್ನೊಳಗೊಂಡಂತೆ ಎಲ್ಲ ಸಂಬಂದಗಳ ನಡುವೆಯೂ ಕಿರಿಕಿರಿ , ಹೊಂದಾಣಿಕೆಯ ಸಮಸ್ಯೆ ತರಬಲ್ಲುದು.  ಬೇರೆ ಜಾಗದಲ್ಲಿ  ಬರವಣಿಗೆ ಈ  ಸಮಸ್ಯೆಗೂ ಪರಿಹಾರ.

ನಿಜ ಜೀವನದ ಸಣ್ಣಪುಟ್ಟ ಸಮಸ್ಯೆಗಳು, ಕಿರಿಕಿರಿಗಳು ಇತ್ಯಾದಿಗಳಿಂದ  ಮೇಲಿನ  ರೀತಿಯ ಪಲಾಯನ ಮಾಡಬೇಕೆ?  ಬರಹದ ತಪಸ್ಸಿಗೆ  ಭಂಗವಾಗದಂತೆ  ವಾಸಸ್ಥಳದಲ್ಲಿಯೇ ಇದ್ದು  ಸಾಧಿಸುವುದು   ಉತ್ತಮ ಮತ್ತು  ಸುಲಭದ ಮಾರ್ಗವಲ್ಲವೇ? . ಖಂಡಿತ  ಯೋಚಿಸಬೇಕು.

 

 

 

 

Rating
Average: 4 (1 vote)