ಅಗ್ನಿ-೫ ಕ್ಷಿಪಣಿ ಯಶಸ್ವಿ ಪರೀಕ್ಷೆ.......

ಅಗ್ನಿ-೫ ಕ್ಷಿಪಣಿ ಯಶಸ್ವಿ ಪರೀಕ್ಷೆ.......

ಇವತ್ತು ನಮ್ಮ ದೇಶ ಅಗ್ನಿ-೫ ಕ್ಷಿಪಣಿ ಯನ್ನ ಪರೀಕ್ಷಾರ್ಥ ಉಡಾವಣೆಯನ್ನ (ನಿನ್ನೆಯೇ ಮಾಡಬೇಕಿತ್ತು  ಆದರೆ ಪ್ರತಿಕೂಲ ಹವಾಮಾನ ಕಾರಣವಾಗಿ ಇವತ್ತು ಮಾಡಿದರು)  ಯಶಶ್ವಿಯಾಗಿ ಮಾಡಿತು....

 

ಅದೇನೂ ಸಾಮಾನ್ಯ ಸಾಧನೆ ಅಲ್ಲ....

 

ಅದಕ್ಕಾಗಿ ಹಲ ವರ್ಷಗಳ ಸಂಶೋಧನೆ ಪರೀಕ್ಷಣೆ ಹಲ ವಿಫಲತೆ- ಆದಸ್ತು ಬೇಗ ಅದನ್ನು ತಯಾರಿಸಿ ಪರೀಕ್ಷಿಸಿ ಸೈನ್ಯಕ್ಕೆ ಸೇರಿಸುವ ಸಂದರ್ಭ ಇತ್ತು... ಅದರಲ್ಲೂ ನಮ್ಮ ನೆರೆಯ ದೇಶಗಳು ಮುಖ್ಯವಾಗಿ 'ಚೀನಾ' ಆದಾಗಲೇ ಇದರ 'ದುಪ್ಪಟ್ಟು' ದೂರ ಕ್ರಮಿಸಬಲ್ಲ ಕ್ಷಿಪಣಿಗಳನ್ನ ತಯಾರಿಸಿ ಪರೀಕ್ಷಿಸಿ ಸೈನ್ಯಕ್ಕೆ ಸೇರಿಸಿ, ಅವುಗಳಲ್ಲಿ ಹಲವನ್ಣ ನಮ್ಮ ದೇಶದ ಗಡಿ ಗುಂಟ ಸಜ್ಜು ಮಾಡಿ ಇಟ್ಟಿದ್ದು ಹೀಗಾಗಿ ಸಹಜವಾಗೇ ನಮ್ಮ ಈ ಅಗ್ನಿ ಕ್ಷಿಪಣಿ ಯೆಶಸ್ಸಿನ ಮೇಲೆ ಎಲ್ಲರ ಕಣ್ಣು ಸಹಜವಾಗಿ ನೆಟ್ಟಿದ್ದವು...

ಮುಖ್ಯವಾಗಿ ಚೀನಾ ಮತ್ತು ಇನ್ನಿತರ ಮುಂದುವರೆದ ರಾಸ್ತ್ರಗಳು ಸಹಾ ಇದರ ಫಲಿತಾಂಶದ ಬಗೆ ಕಾತುರರಾಗಿದ್ದರು.....

 

ದೇಶದಲ್ಲಿ ಬಡತನ ನಿರುದ್ಯೊಗ ಅಪೌಸ್ಟಿಕತೆ - ಶಿಶು ಮರಣ ಅದು ಇದು ಅಂತೆಲ್ಲಾ ಏನೇನೂ ಇರುವಾಗ ಈ ಕ್ಷಿಪಣಿಗಳಿಗಾಗಿ ಅಸ್ತು ಹಣ (೨.೫ ಬಿಲಿಯನ್) ಖರ್ಚು ಮಾಡೋ ಅವಶ್ಯಕತೆ ಇತ್ತ? ಖಂಡಿತ ಸುತ್ತಮುತ್ತಲಿನ ದೇಶಗಳು ತಮ್ಮ ಸೈನ್ಯದ ಶಕ್ತಿ ಹೆಚ್ಚಿಸಿಕೊಳ್ಳುತ್ತ ಅಕ್ಕ ಪಕ್ಕದ ದೇಶಗಳಿಗೆ ಆತಂಕ ಮೂಡಿಸಿದಾಗ ಸಹಜವಾಗಿಯೇ ನಾವ್ ಸಹಾ ಸಮಯ ಸಂದರ್ಭಕ್ಕೆ ತಕ್ಕಂತೆ ನಮ್ಮ ಶಕ್ತಿ ಸಾಮರ್ಥ್ಯ ವೃದ್ಧಿಸಿಕೊಳ್ಳಲೇ ಬೇಕಲ್ಲ... ಈಗ ಅದೇ ಆಗಿದ್ದು- ಆಗುತ್ತಿರುವುದು-ಆಗುವುದು..

 

ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮದು ಮಹಾನ್ ಸಾಧನೆ ಏನೂ ಅಲ್ಲ(ಆದಾಗಲೇ ಬೇರೆ ದೇಶಗಳ ಹತ್ತಿರ ೦೦,೦೦೦ ಕಿಲೋ ಮೀಟರ್ ಗಿಂತ ಜಾಸ್ತಿ ದೂರ ಕ್ರಮಿಸಬಲ್ಲ ಹತ್ತಾರು ಕ್ಷಿಪಣಿಗಳಿವೆ) ಆದರೂ ಮುಂದಿನ ದಿನಗಳಲಿ ಇನ್ನೂ ಹೆಚ್ಚು ದೂರ ಕ್ರಮಿಸಬಲ್ಲ ಕ್ಷಿಪಣಿಗಳ ತಯಾರಿಕೆಯಲ್ಲಿ ಇದು 'ಸ್ಪೂರ್ತಿ' ತುಂಬುವ ಯಶಸ್ವಿ ಪರೀಕ್ಷೆ...

 

ಈ ಪರೀಕ್ಷೆ ಯಶಸ್ವಿ ಆಗುತ್ತಿದ್ದಂತೆ ಬೇರೆ ದೇಶಗಳಿಗಿಂತ ಹೆಚ್ ಆಗಿ 'ಚೀನಾ' ತನ್ನ 'ಹೊಟ್ಟೆ ಕಿಚ್ಛನ್ನ' ಹೊರಗೆ ಹಾಕಿದೆ... ಅದರ ವಿವರ ಇಲ್ಲಿದೆ..

ttp://www.dnaindia.com/world/report_indian-media-reporting-on-agni-v-test-provocative-china_1677991

ಲಿಂಕ್ ಕ್ಲಿಕ್ಕಿಸಿ

ಈ ಯಶಸ್ಸಿಗೆ ಕಾರಣರಾದ ವಿಜ್ಞಾನಿಗಳಿಗೂ -ತಂತ್ರಜ್ಞರಿಗೂ ಹಾಗೂ ಚೀನಾಕ್ಕೂ (ಅದರ ಕ್ಷಿಪಣಿ ಪರೀಕ್ಷೆ ಸ್ಪರ್ಧೆ ಕಾರಣವಾಗಿಯೇ ಇದೆಲ್ಲ ಸಾಧ್ಯವಾಗಿದ್ದು!) ಧನ್ಯವಾದ ಹೇಳೋಣ...!!

 
ಈ ಪರೀಕ್ಷೆ ಯಶಸ್ಸು ಬಗ್ಗೆ ಚೀನಾ ಪ್ರತಿಕ್ರಿಯೆ ಏನು? ಕ್ಲಿಕ್ಕಿಸಿ http://www.dnaindia.com/world/report_indian-media-reporting-on-agni-v-test-provocative-china_1677991


ಚಿತ್ರಮೂಲ:

http://www.techtree.com/content/news/1029/agni-v-indias-first-icbm-successfully-test-fired.html

Rating
No votes yet

Comments