ಅಡಿಗೆಯವರ ಪುರಾಣ - ಭಾಗ -೨

ಅಡಿಗೆಯವರ ಪುರಾಣ - ಭಾಗ -೨

ಇದರ ಮೊದಲ ಭಾಗ - www.sampada.net/blog/roopablrao/04/01/2008/6921
ಬಂದ ಮಹರಾಯಿತಿ ಸವಿತ ಪಿ.ಯು.ಸಿ ಓದಿದವಳು. ೨೩ ವರ್ಷದವಳು
ಚೆಂದದ ಅಡಿಗೆ ಮಾಡಲು ಬರುವುದಿಲ್ಲ ಆದರೆ ಒಂದೆರೆಡು ದಿನದಲ್ಲಿ ಕಲಿಯುವುದಾಗಿ ಹೇಳಿದಳು.
ನಾವು ನಂಬಿದೆವು.

ಆಕೆ ಅಡಿಗೆ ಶುರು ಮಾಡಿದಳು . ಅಕ್ಕಿ ತೊಳೆದು ಹಾಕಮ್ಮ ಎಂದರೆ
ಹೇಗಿದ್ದರೂ ನೀರಿಗೆ ಹಾಕುತ್ತೇವಲ್ಲ ಮತ್ತೆ ಯಾಕೆ ನೀರು ಎಂದಳು?
ಈರುಳ್ಳಿ ಸಣ್ದಗೆ ಹೆಚ್ಚಬೇಕು ಎಂದರೆ ಒಗ್ಗರಣೆಯಲ್ಲಿ ಸಣ್ನದಾಗುತ್ತದೆ ಎಂದಳು.
ಹೇಗೊ ಅಡಿಗೆ ಮಾಡಿಕೊಂಡಿರಲಿ ಎಂದು ಸುಮ್ಮನಾದೆವು.

ಕೆಲವು ದಿನಗಳ ನಂತರ ನಾನು ಕಂಪ್ಯುಟ್‌ರ್ ಕಲಿಯುತ್ತೇನೆ ಎಂದಳು.

ಪರೋಪಕಾರವೆ ಪರಮ ಧರ್ಮ ಎನ್ನುವ ನಾನು ಹೂಂ ಎಂದೆ.
ತರಗತಿಗೆ ಹೋಗಲಾರಂಭಿಸಿದಳು

ಪರೋಪಕಾರ ಪರಮ ಅಪಕಾರ ಎನ್ನುವುದು ನನಗೆ ಗೊತ್ತದುದು ನನ್ನ ಮೊಬೈಲಗೆ ಅವಳಿಗೆ ಕರೆ ಬರಲು ಶುರುವಾದ ನಂತರ.

ಆಕೆಗೆ ಅವಳ ಬಾಯ್‌ ಫ್ರೆಂಡ್ಸಗಳಿಂದ ದಿನಾ ಕರೆಗಳು.
ಅವಳನ್ನು ಕರೆಯುತ್ತ ಅವಳ ಕೆಲಸವನ್ನು ಮಾಡಬೆಕಾಯಿತು. ಅವಳು ನನ್ನ ಕ್ಲಾಸ್ ಬಗ್ಗೆ ಮಾತನಾಡಲು ಎನ್ನುತ್ತಿದ್ದಳು

ನನ್ನ ಪಿತ್ತ ಕೆರಳಿದ್ದು ಅವಳ್ ಒಬ್ಬ ಬಾಯ್ ಫ್ರೆಂಡ್ ನನ್ನನ್ನು ಮೀಟ್ ಮಾಡಲು ಕರೆದಾಗ.
ಇನ್ನು ನಿನ್ನ ಕ್ಲಾಸ್ ಸಾಕು ಮಾಡು ಎಂದು ಹೇಳಿ ಅವಳ್ನ್ನು ಸ್ಟಾಪ್ ಮಾಡಿದೆವು.
ಅನಿವಾರ್ಯತೆ (ಅಡಿಗೆ ) ಅವಳನ್ನು ಇರಿಸಿಕೊಳ್ಳುವಂತೆ ಮಾಡಿತು.
ಅದೇ ಅನಿವರ್ಯತೆ ಒಮ್ಮೆ ಬೀರುವಿನಲ್ಲಿ ಇಟ್ಟಿದ್ದ ಹಣ ಕಳುವಾದಗಲೂ ಏನೂ ಕೇಳದಂತೆ ಮಾಡಿತು
ಪ್ರತಿ ಭಾನುವಾರ ಹಾಗೂ ಶನಿವಾರ ಅವಳು ತನ್ನ ಅಣ್ಣನ ಮನೆಗೆ ಹೋಗುತ್ತಿದ್ದಳು
ಒಮ್ಮೆ ಅವಳ ಅಣ್ಭ ಫೋನ್ ಮಾಡಿ
" ಯಾಕ್ರಿ ನನ್ನ ತಂಗಿನಾ ಎಲ್ಲೆಲ್ಲೊ ಕರೆದುಕೊಂಡು ಹೋಗ್ತೀರ."
ನನಗೆ ಕಕ್ಕಾಬಿಕ್ಕಿ ನಂತರವೇ ಅರಿವಾದದ್ದು . ಅವಳು ಕೆಲವು ದಿನ ಬೇರೆಲ್ಲೊ ಹೋಗುತ್ತಿದ್ದಳು ಎಂದು.
ಅವಳ ಅಣ್ಣನಿಗೆ ಹೇಳಿ ಅಂದೆ ಅವಳನ್ನು ಪಾರ್ಸಲ್ ಮಾಡಿದೆವು.

ಇನ್ನು ಮುಂದೆ 30ರ ವರ್ಷದ ಮೇಲಿನ ಹೆಂಗಸರನ್ನು ಕೆಲಸಕ್ಕೆ ಕರೆದುಕೊಳ್ಳುವೆ ಎಂದು ಪ್ರತಿಗ್ನೆ ಮಾಡಿದೆ.
ಈ ಸಲ ವಿಜಯ ಕರ್ನಾಟಕ ದಲ್ಲಿ ಆಡ್ ಕೊಟ್ಟೆವು
ಅದನ್ನು ನೋಡಿ ಬಂದವಳೆ ಮೀನಾಕ್ಶಿ (35 ವರ್ಷ )

ಮುಂದುವರೆಯುವುದು.

Rating
No votes yet

Comments