ಅಡಿಯೂರಪ್ಪ
ಜೀವನದ ನಿಜ ಪಥದಿ ಅಡಿಯೂರಪ್ಪ
ತಾನೆಲ್ಲರನು ಹಳಿದು ತುಳಿದು ಮೇಲೆದ್ದವನು
ಏನಾದರೂ ಸರಿಯೆ ತಾ ಗೈದುದೆಂದವನು
ಬದಿಕೂತ ದಿನದಿಂದ ಬಡಬಡಿಸುತಿಹ ನೋಡು
ದುಡಿದವರಿಗಿಲ್ಲಿ ಬೆಲೆಯಿಲ್ಲ ಎನುತಿಹನು
ಹಿಡಿತದಲಿ ಎಲ್ಲರಿರಲೆಂದು ಬಯಸುವನು ||೧||
ವೀರತೆಯಲಿರುವವರ ಹಗಲಿರುಳು ದುಡಿದವರ
ಹೋರಾಟಕೆಂದು ಮನೆ ಸಿರಿ ತೊರೆದು ಹೊರಟವರ
ನೀನಗ್ರಗಣ್ಯನಾದಾದಿನದಿ ಮರೆತಿದ್ದೆ
ಹೀನ ಜನರನೆ ನಿನ್ನ ಸುತ್ತವಿರಿಸಿದ್ದೆ
ಹಿಂದಿನವರನು ಹಿಂದೆ ಹಿಂದೆ ತಳ್ಳಿದ್ದೆ ||೨||
ಅಡಿಗಲ್ಲನಿಟ್ಟವರ ಇಟ್ಟಿಗೆಗಳಾದವರ
ಅಡಗಿಸಿದೆ ಗಾರೆಯಲಿ ನಿನ್ನರಗು ರಂಗುಗಳ
ಮೇಲ್ನೋಟ ಥಳಥಳಿಸಿ ಒಳ ಹೂರಣವ ಕೊಳೆಸಿ
ಅಲ್ಲೆಲ್ಲ ಕ್ರಿಮಿ ಕೀಟ ಸಂಚಾರವತಿಯಾಗಿ
ನಿಸ್ಸಾರದಲಿ ಹೆಮ್ಮೆ ಎಂದು ಭ್ರಮಿಸಿದ್ದೆ ||೩||
ಆದರ್ಶ ಹುಡಿಯಾಯ್ತು ಸ್ವಾರ್ಥತನ ಮಿಗಿಲಾಯ್ತು
ಬೇಧವಿಲ್ಲದೆ ತತ್ವ ಸಿದ್ಧಾಂತ ಬದಿಗಾಯ್ತು
ನೀತಿಯಿಲ್ಲದೆ ಧರ್ಪ ಧನದಾಸೆ ನೆಲೆಯಾಗಿ
ಪ್ರೀತಿಯೆಂಬುದು ತಾನು ತನ್ನವರಿಗಾಗಿ
ಬಿಸಿತಾಗೆ ಬದಲಾಗುತೇನೆ ಎನುತಿದ್ದೆ ||೪||
ಬಹುಮತಕೆ ಕೊಡು ಕೋಟಿ ಭಿನ್ನಮತಕಿದೆ ಕೋಟಿ
ಸಹಕರಿಸಬೇಕೆಂದು ಮಟ ಮಂದಿರಕೆ ಕೋಟಿ
ಲೂಟಿಯಲ್ಲದೆ ಮತ್ತದೇನು ಸಾಧನೆಯಿತ್ತು ?
ಕೋಟಿ ಹೃದಯದ ಭಾವಕೇನು ಬೆಲೆಯಿತ್ತು ?
ಸಂಸ್ಕಾರವೆಂಬುದು ಆಚಾರಕಿರದಿತ್ತು ||೫||
ಅಂದು ಸಂಘಸ್ಥಾನ ಹೇಳಿಲ್ಲವೇ ಕಥೆಯ
ಇಂದು ನೀ ನೋಡಯ್ಯ ಹಿರಿಯರಾ ವ್ಯಥೆಯ
ಕಣ್ಮುಚ್ಚಿ ಸಜ್ಜನರು ಬಿಟ್ಟ ನಿಟ್ಟುಸಿರು
ತಿನ್ನುತಿದೆ ಕರ್ಮಫಲ ಭೂತ ಬಂದಿದಿರು
ಇನ್ನಾದರು ತಿದ್ದಿ ಕೊಂಡಿರುತ ಬಾಳು ||೬||
ವಸುಧೆ ರಮಣರು ಲಕ್ಷ ಲಕ್ಷ ಸತ್ತಿಹರು
ವ್ಯಸನವಿಲ್ಲದೆ ಅನ್ಯರನ್ನಿವಳು ಒಪ್ಪಿಹಳು
ನೀನು ಕೊಸರಾಡದಿರು ನಾಯಕರು ಇಲ್ಲೆಂದು
ಏನೇನೋ ಮಾಡಿ ಮಾತಾಡಿ ಗುಲ್ಲೆಂದು
ಜನರಾಡಿ ಕೊಳ್ಳುವರು ಮರುಳಾಟವೆಂದು ||೭||
ಸಿಟ್ಟಾಗದಿರು ಸಹನೆ ವಹಿಸಿ ನೀ ಕೇಳು
ಗುಟ್ಟಾಗಿ ಉಳಿದಿಲ್ಲ ಈ ಎಲ್ಲ ಹಾಳು
ನಿನ್ನ ಸನ್ಮಾರ್ಗಗಳ ಮುಖವಾಡ ತೆಗೆದಿರಿಸಿ
ನಿನ್ನವರ ಒಣಗುಬಣ ಭಿಗುಮಾನ ಬದಿಗಿರಿಸಿ
ಜೀವನದ ನಿಜ ಪಥದಿ ನೀ ಅಡಿಯೂರಪ್ಪ ||೮||
- ಸದಾನಂದ
Comments
ಉ: ಅಡಿಯೂರಪ್ಪ
In reply to ಉ: ಅಡಿಯೂರಪ್ಪ by kavinagaraj
ಉ: ಅಡಿಯೂರಪ್ಪ
ಉ: ಅಡಿಯೂರಪ್ಪ
In reply to ಉ: ಅಡಿಯೂರಪ್ಪ by venkatb83
ಉ: ಅಡಿಯೂರಪ್ಪ
In reply to ಉ: ಅಡಿಯೂರಪ್ಪ by makara
ಉ: ಅಡಿಯೂರಪ್ಪ
In reply to ಉ: ಅಡಿಯೂರಪ್ಪ by venkatb83
ಉ: ಅಡಿಯೂರಪ್ಪ
In reply to ಉ: ಅಡಿಯೂರಪ್ಪ by venkatb83
ಉ: ಅಡಿಯೂರಪ್ಪ
In reply to ಉ: ಅಡಿಯೂರಪ್ಪ by venkatb83
ಉ: ಅಡಿಯೂರಪ್ಪ
ಉ: ಅಡಿಯೂರಪ್ಪ
In reply to ಉ: ಅಡಿಯೂರಪ್ಪ by H A Patil
ಉ: ಅಡಿಯೂರಪ್ಪ
ಉ: ಅಡಿಯೂರಪ್ಪ
In reply to ಉ: ಅಡಿಯೂರಪ್ಪ by ಗಣೇಶ
ಉ: ಅಡಿಯೂರಪ್ಪ
ಉ: ಅಡಿಯೂರಪ್ಪ
ಉ: ಅಡಿಯೂರಪ್ಪ
In reply to ಉ: ಅಡಿಯೂರಪ್ಪ by ananthaveera
ಉ: ಅಡಿಯೂರಪ್ಪ