"ಅದಾವ ಶಕ್ತಿ ತುಂಬಿಹುದು ”
ಅದಾವ ಶಕ್ತಿ ತುಂಬಿಹುದು
ತಾಯೆ ನಿನ್ನ ನುಡಿಯಲಿ
ಅದಾವ ಭಕ್ತಿ ನೆಲೆಸಿಹುದು
ನಿನ್ನ ನುಡಿಯ ಗುಡಿಯಲಿ||
ನಿನ್ನ ಹೆಸರೆ ಅಪ್ಯಾಯಮಾನ
ನುಡಿಯೆ ಎನ್ನ ತುಟಿಯಲಿ
ನಿನ್ನ ಲಿಪಿಯೆ ಶೋಭಾಯಮಾನ
ಭಾಷೆ ಭಾಷೆ ನಡುವಲಿ||
ನಿನ್ನ ನೆಲದ ಮಣ್ಣು ತಾನೆ
ಕರುಣೆಯೊಡಲ ಧಾತ್ರಿಯು
ಇಲ್ಲಿ ಹರಿವ ನೀರು ತಾನೆ
ಪವಿತ್ರ ಗಂಗೆ ತುಂಗೆಯು||
ಅಮ್ಮ ನಿನ್ನ ಮಕ್ಕಳೆನಲು
ನಿಜದಿ ನಾವು ಧನ್ಯರು
ಜಗದಿ ನಿನ್ನ ಒಲುಮೆಯಿರಲು
ನಾವೇ ಸಕಲ ಮಾನ್ಯರು||
ಕನ್ನಡಾಂಬೆ ಕನ್ನಡಾಂಬೆ
ನಿತ್ಯ ಭಜನೆಯಾಗಲಿ
ಮನ ಮನದಲೂ ತಾಯೆ ನಿನ್ನ
ದಿವ್ಯ ಪಾದವ ನೆನೆಯಲಿ||
Rating