ಅನುಭವ - ಆಲೋಚನ-ಭಾಷೆ

ಅನುಭವ - ಆಲೋಚನ-ಭಾಷೆ

ಆಲೋಚನೆ ಮತ್ತು ಭಾವನೆ ಇವೆರಡೂ ಒಟ್ಟಿಗೆ ಇರಲು ಸಾಧ್ಯವೇ ಎನ್ನುವುದು ನನ್ನನ್ನು ಬಹು ದಿನಗಳಿಂದ ಕಾಡುತ್ತಿರುವ ಪ್ರಶ್ನೆ. ಆಲೋಚನೆಯ ಬದಲು ಅನುಭವ ಎಂಬ ಪದವನ್ನೂ ಸೇರಿಸಬಹುದು. ಆಲೋಚನೆಯಲ್ಲಿ ನಿರತವಾದಾಗ ಉಳಿದ ಎರಡೂ ಆಗದೆ ಇರಬಹುದೇ? ಇದು ಕೇವಲ ಸಾಹಿತ್ಯವನ್ನು ರಚಿಸುವವರ ಸಮಸ್ಯೆಯಲ್ಲ. ನಮ್ಮ ಸ್ವಂತ ಬದುಕಿನಲ್ಲೂ ಈ ಸವಾಲು ಹುಟ್ಟುತ್ತದೆ. ಕೇವಲ ಇಂದ್ರಿಯಗಳ ನೆಲೆಯಲ್ಲಿ ಭಾಷೆಯ ಹಂಗೂ ಇಲ್ಲದೆ ಅನುಭವಿಸುತ್ತೇವಲ್ಲ ಅದು ಮಾತ್ರ ನಿಜವೇ? ಸರಿಯಾದ ಉತ್ತರ ನನಗೂ ತಿಳಿಯದು. ಸಾಹಿತ್ಯವಿರಲಿ, ಮಾತಿರಲಿ ಎಲ್ಲವೂ ವಾಸ್ತವದ ಪ್ರತಿಬಿಂಬವೋ ಮರುಸೃಷ್ಟಿಯೋ? ಓದುಗರ ಪ್ರತಿಕ್ರಿಯೆಗಳು ಈ ಚಚೆಯನ್ನು ಬೆಳೆಸಬಹುದು.

Rating
No votes yet

Comments