ಅನುವಾದ ಅಕಾಡೆಮಿ ಏನು ಮಾಡಬಹುದು?

ಅನುವಾದ ಅಕಾಡೆಮಿ ಏನು ಮಾಡಬಹುದು?

ಗೆಳೆಯರೆ, ಇಂದು ಪತ್ರಿಕೆಗಳಲ್ಲಿ ಅನುವಾದ ಅಕಾಡೆಮಿಯನ್ನು ಕರ್ನಾಟಕ ಸರ್ಕಾರ ಆರಂಭಿಸಿರುವ ಬಗ್ಗೆ ಸುದ್ದಿ ಪ್ರಕಟವಾಗಿದೆ. ಸನುವಾದಕ್ಕಾಗಿಯೇ ಅಕಾಡೆಮಿಯೊಂದು ಸ್ಥಾಪನೆಗೊಂಡಿರುವುದು, ಬಹುಶಃ ಭಾರತೀಯ ಭಾಷೆಗಳಲ್ಲಿ ಇದೇ ಮೊದಲು.
ಈ ಅಕಾಡೆಮಿಗಾಗಿ ಯಾವ ಧ್ಯೇಯೋದ್ದೇಶಗಳನ್ನು ಸರ್ಕಾರ ಗೊತ್ತು ಮಾಡಿದೆಯೋ ತಿಳಿಯದು. ಇನ್ನೂ ಮೊದಲ ಸಭೆ ನಡೆಯಬೇಕಾಗಿದೆ.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯದಲ್ಲಿ ನಿಜವಾಗಿ ಆಸಕ್ತರಾದ ಸಂಪದ ಬಳಗದ ಸದಸ್ಯರು ಈ ಅಕಾಅಡೆಮಿ ಯಾವ ಕಾರ್ಯಗಳನ್ನು ಮಾಡಬಹುದೆಂಬ ಬಗ್ಗೆ ಸಲಹೆಗಳನ್ನು ನೀಡಿದರೆ ಉಪಕಾರವಾಗುತ್ತದೆ.
ಅಕಾಡೆಮಿಗಳೆಂದರೆ ಕೇವಲ ಬಹುಮಾನ ನೀಡುವ ಸಂಸ್ಥೆಗಳಾಗಿಬಿಟ್ಟಿರುವುದು ವಿಷಾದಕರ. ಬಹುಮಾನ ಮನ್ನಣೆಗಳನ್ನು ನೀಡುವುದು ಮುಖ್ಯವೇ ಆದರೂ ಅದೊಂದೇ ಕೆಲಸವಾಗಬಾರದು
ಕನ್ನಡಕ್ಕೆ ಉಪಯುಕ್ತವಾಗುವಂಥ ಯಾವ ಬಗೆಯ ಕೆಲಸಗಳನ್ನು ಭಾಷಾಂತರ ಅಕಾಡೆಮಿ ಕೈಗೆತ್ತಿಕೊಳ್ಳಬಹುದು ಎಂಬ ಬಗ್ಗೆ ಗೆಳೆಯರಿಂದ ಸಲಹೆ ಸೂಚನೆಗಳನ್ನು ನಿರೀಕ್ಷಿಸಿದ್ದೇನೆ. ನನ್ನನ್ನೂ ಈ ಅಕಾಡೆಮಿಯ ಒಬ್ಬ ಸದಸ್ಯನ್ನಾಗಿ ಸರ್ಕಾರ ನೇಮಿಸಿರುವುದಂರಿಂದ ಈ ಬಗ್ಗೆ ಸಹಜವಾಗಿಯೇ ನಿಮ್ಮ ಅನಿಸಿಕೆಗಳನ್ನು ತಿಳಿಯಲು ಆಸಕ್ತಿ, ಕುತೂಹಲ.
ಬರೆಯುವಿರಷ್ಟೆ?

Rating
No votes yet

Comments