ಅಪ್ಪಅಮ್ಮನಿಗಿಲ್ಲದ ರಜೆ
೧
ಶಾಲೆಗ್ಯಾಕೆ ಕೊಡುತ್ತಾರೆ
ಅಪ್ಪಅಮ್ಮನಿಗಿಲ್ಲದ ರಜೆ
ಮನೆಯಾಗಿದೆ ಸಜೆ
ಆಟಿಕೆಗಳಿವೆ ಕೋಣೆತುಂಬಾ
ತಿಂಡಿಗಳಿವೆ ಡಬ್ಬಿತುಂಬಾ
ಕಣ್ತುಂಬಿ ಬರುವುದು
ಒಂಟಿಯಾಗಿರುವುದು ಕಷ್ಟ
ಕಿಟಿಕಿಯಲಿಣುಕುವುದು ಇಷ್ಟ
ಹೊರಗಿನಿಂದ ಬೀಗ
ಬರುತ್ತಾರಂತೆ ಬೇಗ
೨
ನಾನೀಗ ತುಸುದೊಡ್ಡವನು
ದೂರದ ಶಾಲೆಯಲಿ ಓದುವೆನು
ಹಾತೊರೆಯುವರು ಗೆಳೆಯರು
ದಸರಾರಜೆಗೆ ಮನೆಗೆ ಹಾರಲು
ಮತ್ತದೇ ಶೂನ್ಯಹಗಲು
ನಾನೂ ಹೋಗಬೇಕು
ಹಾಕುವರು ಹಾಸ್ಟೆಲಿಗೆ ಬೀಗ
ಶಾಲೆ ಶುರುವಾಗಲಿ ಬೇಗ
Rating
Comments
ಅಪ್ಪ ಅಮ್ಮನಿಗಿಲ್ಲದ ರಜೆ
ಪ್ರೇಮಶ್ರೀ ರವರೇ , ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಹೊರಗಿನಿಂದ ಬೀಗ ಬರುತ್ತಾರಂತೆ ಬೇಗ, ಹಾಕುವರು ಹಾಸ್ಟೆಲಿಗೆ ಬೀಗ
ಶಾಲೆ ಶುರುವಾಗಲಿ ಬೇಗ .......ತುಂಟರ ಇಂದಿನ ರಜೆಗಳನ್ನು ನೆನೆದು ಮನ ಮರುಗಿತು.
In reply to ಅಪ್ಪ ಅಮ್ಮನಿಗಿಲ್ಲದ ರಜೆ by lpitnal@gmail.com
ಧನ್ಯವಾದಗಳು ಲಕ್ಷ್ಮೀಕಾಂತ ಇಟ್ನಾಳ
ಧನ್ಯವಾದಗಳು ಲಕ್ಷ್ಮೀಕಾಂತ ಇಟ್ನಾಳ ಅವರೆ.
ಮಕ್ಕಳ ಸ್ಥಾನದಲ್ಲಿ ನಿಂತು
ಮಕ್ಕಳ ಸ್ಥಾನದಲ್ಲಿ ನಿಂತು ಯೋಚಿಸಿರುವಿರಿ!! ಅರ್ಥಪೂರ್ಣವಾಗಿದೆ.
In reply to ಮಕ್ಕಳ ಸ್ಥಾನದಲ್ಲಿ ನಿಂತು by kavinagaraj
ಧನ್ಯವಾದಗಳು ಕವಿನಾಗರಾಜ್ ಅವರೆ.
ಧನ್ಯವಾದಗಳು ಕವಿನಾಗರಾಜ್ ಅವರೆ.
ಅಬ್ಬಬ್ಬಾ...!! ಸಖತ್ ....
ಅಬ್ಬಬ್ಬಾ...!! ಸಖತ್ ....
ಒಂದು ರಜೆಯ ಹಿಂದಿನ ಎರಡು ಭಾವಗಳನ್ನ ಸೊಗಸಾಗಿ ಸರಳವಾಗಿ ಅಕ್ಷರ ರೂಪಕ್ಕಿಳಿಸಿರುವಿರಿ ..
ಶುಭವಾಗಲಿ..
\|
In reply to ಅಬ್ಬಬ್ಬಾ...!! ಸಖತ್ .... by venkatb83
ಧನ್ಯವಾದಗಳು ಸಪ್ತಗಿರಿಯವರೆ.
ಧನ್ಯವಾದಗಳು ಸಪ್ತಗಿರಿಯವರೆ.
ನಿಮ್ಮ ಪ್ರೋತ್ಸಾಹಕ ಮೆಚ್ಚುಗೆಯ ನುಡಿಗಳು ಹುರುಪು ಉತ್ಸಾಹಗಳನ್ನು ತುಂಬುವುದಲ್ಲದೆ ಇನ್ನಷ್ಟು ಬರೆಯಲು ಪ್ರೇರಣೆ
ಕೊಡುವುದು.