ಅಪ್ಪಅಮ್ಮನಿಗಿಲ್ಲದ ರಜೆ

ಅಪ್ಪಅಮ್ಮನಿಗಿಲ್ಲದ ರಜೆ

         ೧
ಶಾಲೆಗ್ಯಾಕೆ ಕೊಡುತ್ತಾರೆ
ಅಪ್ಪಅಮ್ಮನಿಗಿಲ್ಲದ ರಜೆ
ಮನೆಯಾಗಿದೆ ಸಜೆ
ಆಟಿಕೆಗಳಿವೆ ಕೋಣೆತುಂಬಾ
ತಿಂಡಿಗಳಿವೆ ಡಬ್ಬಿತುಂಬಾ
ಕಣ್ತುಂಬಿ ಬರುವುದು
ಒಂಟಿಯಾಗಿರುವುದು ಕಷ್ಟ
ಕಿಟಿಕಿಯಲಿಣುಕುವುದು ಇಷ್ಟ
ಹೊರಗಿನಿಂದ ಬೀಗ
ಬರುತ್ತಾರಂತೆ ಬೇಗ
              ೨
ನಾನೀಗ ತುಸುದೊಡ್ಡವನು
ದೂರದ ಶಾಲೆಯಲಿ ಓದುವೆನು
ಹಾತೊರೆಯುವರು ಗೆಳೆಯರು
ದಸರಾರಜೆಗೆ ಮನೆಗೆ ಹಾರಲು
ಮತ್ತದೇ ಶೂನ್ಯಹಗಲು
ನಾನೂ ಹೋಗಬೇಕು
ಹಾಕುವರು ಹಾಸ್ಟೆಲಿಗೆ ಬೀಗ
ಶಾಲೆ ಶುರುವಾಗಲಿ  ಬೇಗ

Rating
No votes yet

Comments

Submitted by lpitnal@gmail.com Tue, 10/16/2012 - 18:30

ಪ್ರೇಮಶ್ರೀ ರವರೇ , ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಹೊರಗಿನಿಂದ ಬೀಗ ಬರುತ್ತಾರಂತೆ ಬೇಗ, ಹಾಕುವರು ಹಾಸ್ಟೆಲಿಗೆ ಬೀಗ
ಶಾಲೆ ಶುರುವಾಗಲಿ ಬೇಗ .......ತುಂಟರ ಇಂದಿನ ರಜೆಗಳನ್ನು ನೆನೆದು ಮನ ಮರುಗಿತು.

Submitted by venkatb83 Wed, 12/05/2012 - 15:56

ಅಬ್ಬಬ್ಬಾ...!! ಸಖತ್ ....
ಒಂದು ರಜೆಯ ಹಿಂದಿನ ಎರಡು ಭಾವಗಳನ್ನ ಸೊಗಸಾಗಿ ಸರಳವಾಗಿ ಅಕ್ಷರ ರೂಪಕ್ಕಿಳಿಸಿರುವಿರಿ ..

ಶುಭವಾಗಲಿ..

\|

Submitted by Premashri Wed, 12/05/2012 - 17:05

In reply to by venkatb83

ಧನ್ಯವಾದಗಳು ಸಪ್ತಗಿರಿಯವರೆ.
ನಿಮ್ಮ ಪ್ರೋತ್ಸಾಹಕ ಮೆಚ್ಚುಗೆಯ ನುಡಿಗಳು ಹುರುಪು ಉತ್ಸಾಹಗಳನ್ನು ತುಂಬುವುದಲ್ಲದೆ ಇನ್ನಷ್ಟು ಬರೆಯಲು ಪ್ರೇರಣೆ
ಕೊಡುವುದು.