ಅಬ್ದುಲ್ ಕಲಾಂ - ಸಾವಿನ ಸುದ್ದಿ ಹಾಗೂ "ಗೂಗಲ್ ಟ್ರೆಂಡ್ಸ್"
ಸ್ನೇಹಿತರೇ..
ನೆನ್ನೆ.. ಅಂದರೆ, ೨೨ನೇ ಮಾರ್ಚ್ ೨೦೧೧ರ ದಿನದಂದು ಹಬ್ಬಿದ ಗಾಳಿಸುದ್ದಿ, ಶ್ರೀಯುತ ಎ.ಪಿ.ಜೆ. ಅಬ್ದುಲ್ ಕಲಾಂ ಸಾವಿನ ಸುಳ್ಳು ಸುದ್ದಿ.. ಬಹಳ ಜನರಿಗಾಗಲೇ ತಲುಪಿರಬೇಕು.. ಅದು ಈಗಿನ ಅತಿವೇಗದ ಕಾಲದಲ್ಲಿ, ಕಾಳ್ಗಿಚ್ಚಿಗಿಂತ ಜೋರಾಗಿ, ಎಲ್ಲೆಡೆ ಹಬ್ಬಲೇ ಬೇಕಲ್ಲವೇ..
ಅದರ ಪ್ರಭಾವ, ಗೂಗಲ್‌ನಲ್ಲಿ ಎಷ್ಟರ ಮಟ್ಟಿಗೆ ಆಗಿರಬಹುದೆಂಬುದರ ಚಿಕ್ಕ ವಿಚಾರ ಈ ಮೂಲಕ ನಿಮ್ಮ ಮುಂದೆ.. ಗೂಗಲ್‌ನ "ಟ್ರೆಂಡ್ಸ್" ಎಂಬ ಉತ್ಪನ್ನ ನಿಮಗೆ "ಹಾಟ್ ಸರ್ಚ್"ಗಳ ಬಗ್ಗೆ ವಿವರ ನೀಡುತ್ತದೆ. ನೆನ್ನೆಯ ಒಂದು ಚಿತ್ರಣ ಈ ಚಿತ್ರದಲ್ಲಿದೆ. ಅದನ್ನ ನೀವೆ ಪರೀಕ್ಷಿಸಲು.. ಈ ಕೊಂಡಿಯನ್ನ ನೋಡಿ..ಗೂಗಲ್‌ನ ನೆನ್ನೆಯ "ಟ್ರೆಂಡ್ಸ್"
ಹೆಚ್ಚು ಕಡಿಮೆ, ೭ ವಿವಿಧ ರೀತಿಯಲ್ಲಿ ಪದಗಳಲ್ಲಿ, ಈ ಶೋಧನೆ ನಡೆದಿದ್ದರೂ, ನೆನ್ನೆ ಜನ ಗಾಬರಿ, ಆಶ್ಚರ್ಯಗೊಂಡದ್ದಂತೂ ನಿಜ.. ಪಟ್ಟಿಯಲ್ಲಿ ಎರಡನೇ ಶ್ರೇಣಿಯಲ್ಲಿ ಇರೋ ಪದ "abdul kalam death". ಅದರ ಮೇಲೇ ಕ್ಲಿಕ್ಕಿಸಿದಾಗ, ಸಿಗೋ ವಿವರಗಳಲ್ಲಿ ಕೆಲವೊಂದನ್ನ ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ..
ಇದರ ಹಾಟ್‌ನೆಸ್: ವೊಲ್ಕ್ಯಾನಿಕ್ ಅಂತೆ. ಅಂದರೆ, ಜ್ವಾಲಾಮುಖಿಯಂತೆ ಸಿಡಿದಿದೆ ಶೋಧನೆ..
ಪೀಕ್: ೪ರ ಸಂಜೆ. ಅಂದರೆ, ಸಂಜೆ ೪ರ ಹೊತ್ತಿಗೆ ಇದು ಅತ್ಯಂತ ಹೆಚ್ಚು ಶೋಧನೆಗೆ ಒಳಪಟ್ಟಿದೆ.
Location: 24% - Bangalore, KA
24% - Chennai, TN
20% - Hyderabad, AP
ಅಂದರೆ, ಬೆಂಗಳೂರಿನಿಂದ ನಡೆದ ಶೋಧನೆ - ೨೪ ಶೇ., ಚೆನ್ನೈನಿಂದ ನಡೆದ ಶೋಧನೆ - ೨೪ ಶೇ., ಹೈದರಾಬಾದಿನಿಂದ ನಡೆದ ಶೋಧನೆ ೨೦ ಶೇ. ಚಿತ್ರದಲ್ಲಿರೋ ಗ್ರಾಫ್‌ನೊಮ್ಮೆ ನೋಡಿ..
ಇನ್ನೊಂದು ಪದ (keyword) "apj abdul kalam died". ಇದರದ್ದೂ ಹೆಚ್ಚು ಕಡಿಮೆ ಅದೇ ಕತೆ..
Hotness: Volcanic
Peak: 4PM (GMT+05:30)
Location: 22% - Bangalore, KA
22% - Hyderabad, AP
14% - Chennai, TN
ಆದರೆ, ಸ್ಥಳದಲ್ಲಿ, ಅದರ ಶೋಧನೆಯ ಶೇಕಡಾವಾರು ಹಂಚಿಕೆಯಲ್ಲಿ ಸ್ವಲ್ಪ ಬದಲಾವಣೆ..
ನೆನ್ನೆಯ ಈ ವಿಚಾರಕ್ಕಾಗಿ ನಾನು ಅಂತರ್ಜಾಲದಲ್ಲಿ ನನ್ನದೇ ಯೋಚನೆಯಲ್ಲಿ ಮುಳುಗಿ ಅದರ ಜಾಲಾಟದಲ್ಲಿದ್ದಾಗ, ನನ್ನ ಈ ಯೋಚನೆಗಳನ್ನ ನಿಮ್ಮೊಂದಿಗೇಕೆ ಹಂಚಿಕೊಳ್ಳಬಾರದು, "ಗೂಗಲ್ ಟ್ರೆಂಡ್ಸ್"ನ ಪರಿಚಯ ಮಾಡಿಕೊಟ್ಟ ಹಾಗೂ ಆಗತ್ತಲ್ಲ ಅನ್ನೋ ಯೋಚನೆ, ಈ ಬರಹಕ್ಕೆ ನಾಂದಿಯಾಯಿತು.. ಸಂಪದಿಗರು, ತಮಗೆ ತಿಳಿದಿರೋ ಇನ್ನೂ ಹೆಚ್ಚಿನ ವಿಚಾರ ಹಂಚಿಕೊಳ್ಳಬಹುದು.. ಅನುಮಾನಗಳನ್ನ ಕೇಳಿದಲ್ಲಿ, ಗೊತ್ತಿರುವ ವಿಚಾರ ತಿಳಿಸಲು ಅಡ್ಡಿಯಿಲ್ಲ.. ಗೊತ್ತಿಲ್ಲದಿದ್ದಲ್ಲಿ, ಕೇಳಿ ತಿಳಿದು ಹೇಳುವ.. :)
ನಿಮ್ಮೊಲವಿನ,