ಅಭಿವೃದ್ಧಿ: ನಮ್ಮಿಂದಲೇ, ನಮಗೋಸ್ಕರವೇ ನಮ್ಮಲ್ಲಿಯೇ
ಮುಕ್ತ ಮಾರುಕಟ್ಟೆಗಳು ಮತ್ತು ಜಾಗತೀಕರಣದಿಂದ ಇಂದು ಸಾವಿರಾರು ಕೆಲಸಗಳು ಅಮೇರಿಕಾ ದೇಶದ ಕೈ ತಪ್ಪಿವೆ. ಭಾರತ, ಚೀನ ಮೆಕ್ಸಿಕೋದಂತಹ ಹಲವು ದೇಶಗಳಲ್ಲಿ ಈ ಬೆಳವಣಿಗೆಗಳಿಂದಾಗಿ ಹಲವಾರು ಜನಕ್ಕೆ ಕೆಲಸಗಳು ಸಿಕ್ಕಿವೆ. ಈ ಪ್ರಕ್ರಿಯೆಯಲ್ಲಿ ಕೆಲಸ ಕಳೆದುಕೊಂಡ ಅಮೇರಿಕಾದ ಜನರ ವಿಚಾರವಾಗಿ ಹೆಚ್ಚಾಗಿ ತಿಳಿದಿಲ್ಲ. ಮೊದಲು manufacturing ವಲಯದಲ್ಲಿ ಬಹಳ ಪ್ರಸಿದ್ಧವಾಗಿದ್ದ ಸಣ್ಣ ಸಣ್ಣ ನಗರಗಳು ಇಂದು ಯಾವ ಚಟುವಟಿಕೆಗಳಿಲ್ಲದೇ ಪಾಳು ಬಿದ್ದಿವೆ. ಕೆಲಸ ಕಳೆದುಕೊಂಡ ಜನರು ದೊಡ್ಡ ನಗರಗಳಿಗೆ ವಲಸೆ ಹೋಗಿದ್ದಾರೆ ಅಥವ ಸರ್ಕಾರದ welfare ಯೋಜನೆಗಳ ಆಶ್ರಯ ಪಡೆದಿದ್ದಾರೆ. ಉದಾಹರಣೆಗೆ: ನೇಯ್ಗೆ ಮುಂತಾದ ದೊಡ್ಡ ದೊಡ್ಡ ಕೈಗಾರಿಕೆಗಳಿದ್ದಂತಹ ನಗರಗಳು. ಅವರ ಕೆಲಸಗಳು ಮೆಕ್ಸಿಕೋ ಚೀನ ಭಾರತಗಳಿಗೆ, ಕ್ಯಾಲಿಫೋರ್ನಿಯಾದ ಅಕ್ರಮ ವಲಸೆಗಾರರ ಕಡಿಮೆ ಸಂಬಳದ ಮಿಲ್‍ಗಳ ವಶವಾಗಿವೆ. ಕೆಲಸ ಕಳೆದುಕೊಂಡ ಜನರಿಗೆ ಇನ್ನೂ ಉತ್ಕೃಷ್ಟವಾದ ಕೆಲಸ ಸಿಗುತ್ತದೆಯೆಂಬ ಆಶ್ವಾಸನೆ ಸುಳ್ಳಾಗಿದೆ.
ಜಾಗತೀಕರಣದ ಮೊದಲಿದ್ದ ಕೈಗಾರಿಕೋದ್ಯಮಗಳನ್ನು ಇಂದಿನ ಜಾಗತಿಕ ಮಾರುಕಟ್ಟೆಯಲ್ಲಿ, ಹಲವು ದೇಶಗಳಲ್ಲಿ ವ್ಯಾಪಾರ ಮಾಡುವ ಉದ್ಯಮಗಳಿಗೆ ಹೋಲಿಸಿದರೆ ಖಂಡಿತವಾಗಿಯೂ ಅವು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿರಲಿಲ್ಲ. ಅಂದರೆ, ಇಂದಿಗೆ ಲಭ್ಯವಿರುವ ತಂತ್ರಜ್ಞಾನಗಳೂ, ಬೇಕಾಗುವಂತಹ ಆರ್ಥಿಕ ಬಂಡವಾಳ ಮತ್ತು ಕಾರ್ಮಿಕರ ವೈವಿಧ್ಯತೆ ಅಂದಿನ ಕಾಲಕ್ಕೆ ಇರಲಿಲ್ಲ. ಆದ್ದರಿಂದ ಅವರ ಉತ್ಪಾದನಾ ವಿಧಾನಗಳಲ್ಲಿ ಇಂದಿನ ದಕ್ಷತೆ ಕಾಣುವುದಿಲ್ಲ.
ನಿಜವಾದ ಸ್ಪರ್ಧ್ಯಾತ್ಮಕ ನೀತಿಗಳು ಇಂದಿನ ಮಾರುಕಟ್ಟೆಯಲ್ಲಿ ಕ್ಷೀಣಿಸುತ್ತಿವೆ. ಕಾರಣ, corporate takeoverಗಳೂ, mergerಗಳೂ ಮತ್ತು ನಿಯಂತ್ರಣವಿಲ್ಲದೇ ಬೆಳೆಯುತ್ತಿರುವ ಅತೀ ದೊಡ್ಡ ಸಂಸ್ಥೆಗಳು. ಹೀಗಿರುವಾಗ ಸಣ್ಣ ಸಣ್ಣ ಉದ್ದಿಮೆಗಾರರಿಗೆ ತಮ್ಮ ಉತ್ಪತ್ತಿಗೆ ತಕ್ಕ ಬೆಲೆ ತರುವಂತಹ ವ್ಯಾಪಾರ ಮಾಡುವುದು ಕಷ್ಟವಾಗುತ್ತಿದೆ. ಆದ್ದರಿಂದ ಲಾಭಗಳನ್ನು ಹೆಚ್ಚಿಸುವುದಕ್ಕಿಂತ, ಉದ್ದಿಮೆಯಲ್ಲಿ ಬರುವ ಮೊತ್ತಗಳನ್ನು ಕಮ್ಮಿಮಾಡಿಕೊಳ್ಳುವುದು ವ್ಯಾವಹಾರಿಕತನವಾಗಿದೆ. ಕನಿಷ್ಠ ಮೊತ್ತದಲ್ಲಿ ಉತ್ಪಾದಿಸುವುದಕ್ಕೆ ಕಂಪನಿಗಳು ಒಂದೋ ತಮ್ಮ ಕಾರ್ಮಿಕರ ಸಂಖ್ಯೆಗಳನ್ನು ಕಡಿತಗಳಿಸಿ ಇರುವ ಕಾರ್ಮಿಕರನ್ನು ಹೆದರಿಸಿ ಹೆಚ್ಚು ಕೆಲಸ ಮಾಡಿಸುವುದೋ ಅಥವ ಹೆಚ್ಚು ಬಂಡವಾಳ ಹೂಡಿ ಕಡಿಮೆ ಕಾರ್ಮಿಕರನ್ನು ಬಳಸುವುದನ್ನೋ ಮಾಡಬೇಕಾಗುತ್ತದೆ. ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುತ್ತಿರುವ ಈ ಉದ್ದಿಮೆಗಳು ದಾನ ಧರ್ಮಕ್ಕಾಗಲೀ ವ್ಯಾಪಾರದಲ್ಲಿ ಎಥಿಕ್ಸ್ ಪ್ರದರ್ಶಿಸುವುದಕ್ಕಾಗಲೀ ಆಗುವುದಿಲ್ಲ.. ಇವುಗಳಿಗೆ ಸಂಪನ್ಮೂಲಗಳನ್ನು ವ್ಯಯಿಸುತ್ತಾ ಕೂತರೆ ಕಂಪನಿಗಳ ಉಳಿವಿಗೇ ಸಂಚಾಕಾರ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೆಳದರ್ಜೆ ಗುಣಮಟ್ಟದ ಸರಕುಗಳನ್ನು (ಅಂದರೆ ಗ್ರಾಹಕರ ಆದಾಯ ಏರಿದಂತೆ ಈ ಸರಕುಗಳ ಬೇಡಿಕೆ ಕುಸಿಯುತ್ತವೆ, ಉದಾ: ಅಗ್ಗವಾದ electronic ಉತ್ಪನ್ನಗಳು, ನೂಡಲ್ಸ್ ನಂತಹ ತಿನಿಸುಗಳು ಇತ್ಯಾದಿ) ಉತ್ಪಾಸಿದುವಂತಹ ಕಂಪನಿಗಳು ಜಾಗತೀಕರಣದಿಂದಾಗಿ, ಕಾರ್ಮಿಕರ ಮೇಲೆ ಕಡಿಮೆ ಸಂಬಳಗಳನ್ನು ಹೇರಿಯೋ ಅಥವ ಉತ್ಪಾದನೆಯನ್ನು ಬಡರಾಷ್ಟ್ರಗಳಿಗೆ outsource ಮಾಡಿಯೋ ತಮ್ಮ ಉತ್ಪಾದನಾ ವಿಧಾನಗಳಲ್ಲಿ ಕಠೋರವಾದ ಕಾರ್ಯದಕ್ಷತೆ ಸಾಧಿಸುವಲ್ಲಿ ಯಶಸ್ವಿಯಾಗಿವೆ. ಹೀಗಾಗಿ ಇಂದು ಇಂತಹ ಉದ್ದಿಮೆಗಳು ತಮ್ಮ ಉತ್ಪಾದನ ಪ್ರಕ್ರಿಯಯಲ್ಲಿ ಹೆಚ್ಚಿನ ಸ್ವಾತಂತ್ರ್ಯತೆಯನ್ನು ಕಂಡಿವೆ. ಇದರಿಂದಾಗೆ ಅವುಗಳ ಲಾಭ ಹೆಚ್ಚಿದ್ದು ಸಣ್ಣ ಪುಟ್ಟ ನಷ್ಟಗಳನ್ನ್ಯೂ ಸಹಿಸಿಕೊಳ್ಳಬಲ್ಲವಾಗಿವೆ.
ಇಂತಹ ಕೆಳಮಟ್ಟದ ಸರಕುಗಳ ಕ್ಷೇತ್ರಕ್ಕೆ ಇಂದು ಭಾರಿ ಬೇಡಿಕೆ ಇದೆ. ಏಕೆಂದರೆ ವಿಶ್ವದಲ್ಲಿ ಹೆಚ್ಚಾಗಿರುವವರು ಒಂದೋ ಬಡಜನರು ಅಥವ ಈಗ ತಾನೆ ಮಧ್ಯಮವರ್ಗಕ್ಕೆ ಕಾಲಿಟ್ಟಿರುವಂತಹವರು. ಆದ್ದರಿಂದ ಇಂತಹ ಜನಕ್ಕೆ ಕಳಪೆ ಗುಣಮಟ್ಟದ ಅಗ್ಗವಾದ ಕಂಪ್ಯೂಟರ್ ಗಳು, ಟೀವಿಗಳು chainಹೋಟೇಲ್‍ಗಳ ಊಟ ತಿಂಡಿ, ಇತ್ಯಾದಿ ಸಾಮಗ್ರಿಗಳು ಅತ್ಯಂತ ಪ್ರಿಯವಾಗಿವೆ. ಇದರಿಂದ ಅವರ ಲೌಕಿಕ ಸೇವನೆಯ ಚಟಗಳೂ ತೀರುತ್ತವೆ, ಮತ್ತಷ್ಟು ಕಳಪೆ ಸಾಮಗ್ರಿಗಳನ್ನು ಭೋಗಿಸಲು ದುಡ್ಡೂ ಮಿಗುತ್ತದೆ. ಇದರಿಂದಾಗಿ ಕಾರ್ಮಿಕರ ಲಿಖಿತ ಆದಾಯವು ಕಡಿಮೆಯಾದರೂ ಅವರ ನಿಜವಾದ ಆದಾಯಗಳು (ಇಂದಿನ ಅರ್ಥಶಾಸ್ತ್ರದ ಪ್ರಕಾರ) ಹೆಚ್ಚಿವೆ. (ಏಕೆಂದರೆ ಈಗ ಗ್ರಾಹಕನಿಗೆ ಆಯ್ಕೆಯ ಸ್ವಾತಂತ್ರತೆ ಇದೆ, ಈ ಕಳಪೆ ವಸ್ತುಗಳಲ್ಲಿ)
ಆದ್ದರಿಂದ ನನಗನಿಸುತ್ತದೆ, ಇಂದು ಸಂಪತ್ತಿನ್ನ ವಿಂಗಡನೆ ಆಗುತ್ತಿದೆ, ನಿಜ. ಆದರೆ, ಇದು ನಡೆಯುತ್ತಿರುವುದು ಪಾಶ್ಚಿಮಾತ್ಯರ ಮಧ್ಯಮ ವರ್ಗಗಳಿಂದ ಬಡ ದೇಶದ ಮಧ್ಯಮ ವರ್ಗಗಳಿಗೆ. ಉದ್ದಿಮೆಗಳು ಏಕೀಕರಣ ಮತ್ತು ಬಲವರ್ಧನೆಗಳಿಂದ ಇನ್ನೂ ಪ್ರಭಾವಶಾಲಿಗಳಾಗುತ್ತಿವೆಯೇ ವಿನಹ ಅವುಗಳಲ್ಲಿ ಹೆಚ್ಚಿನ ಮೊತ್ತದ ಪಾಲುದಾರದಾರಗಲಿ ಬೇರೆ ವರ್ಗದ ಜನರ ನಿಯಂತ್ರಣವಾಗಲಿ ಕಂಡುಬರುವುದಿಲ್ಲ. ಇಂದು ಜಾಗತಿಕ ಮಟ್ಟದಲ್ಲಿ ಉದ್ದಿಮೆಗಳಲ್ಲಿ ಯಾರೂ ಸ್ಪರ್ಧಿಗಳಲ್ಲ.. ಇವತ್ತು ಕಟ್ಟಾ ಸ್ಪರ್ಧಿಗಳು ನಾಳೆ merge ಆಗಿ ಇಡೀ ಮಾರುಕಟ್ಟೆಯನ್ನೇ ಕಬಳಿಸಿ ಬಿಡಬಹುದು. ಈ ತರಹ ನೋಡಿದಾಗ, ಇಲ್ಲಿ ಸಂಪತ್ತಿನ ವಿಭಜನೆಯೇನು, ಅದರ ವ್ಯತಿರಿಕ್ತವಾಗಿರುವ consolidation ಕಂಡುಬರುತ್ತಿದೆ. ಇಂತಹ ಕಂಪನಿಗಳಿಗೆ broadbased redistribution ಕಳವಳಕಾರೀ ಬೆಳವಣಿಗೆ. ಏಕೆಂದರೆ, ಒಮ್ಮೆ ಗ್ರಾಹಕರ ನಿಜವಾದ ಆದಾಯ ಹೆಚ್ಚಿದರೆ, ಈ ಕಂಪನಿಗಳು ತಯಾರಿಸುವ ಅಗ್ಗದ ಸಾಮಗ್ರಿಗಳನ್ನು ಅವರು ಖರೀದಿಸುವುದಿಲ್ಲ. ತಮ್ಮ ತಮ್ಮ ರುಚಿಗೆ ತಕ್ಕಂತಹ ಶ್ರೇಷ್ಠವಾದ ಸಾಮಗ್ರಿಗಳನ್ನು ಕೊಳ್ಳಲು ಮುಂದಾಗುತ್ತಾರೆ. ಈ ಉತ್ತಮ ದರ್ಜೆಯ ಸಾಮಗ್ರಿಗಳ ಉತ್ಪಾದನೆಗೆ ಜಾಗತೀಕರಣದ ಅಗ್ಗದ ಕಾರ್ಯದಕ್ಷತೆ ಇರುವುದಿಲ್ಲವಾದ್ದರಿಂದ ದೊಡ್ಡ ದೊಡ್ಡ ಸಂಸ್ಥೆಗಳು ಈ ಬೆಳವಣಿಗೆಗೆ ಅವಕಾಶ ಕೊಡುವುದಿಲ್ಲ.
ಜಗತ್ತಿನ ಒಂದು ಭಾಗದ ಬಡಜನ ಮತ್ತು ಮಧ್ಯಮವರ್ಗದ ಜನರಿಂದ ಇನ್ನೊಂದೆಡೆಗೆ ಸಂಪತ್ತನ್ನು ಸಾಗಿಸುವಲ್ಲಿ ಮಾತ್ರ ಯಶಸ್ವಿಯಾಗಿದೆ ಜಾಗತೀಕರಣ. ಇದು ಸುಸ್ಥಿರ ಬೆಳವಣಿಗೆಯಲ್ಲ ಏಕೆಂದರೆ, ಪಶ್ಚಿಮದ ಕೆಳವರ್ಗದ ಜನರ ಸಂಪತ್ತು ಬಡ ದೇಶಗಳ ಕೆಳವರ್ಗದ ಜನರನ್ನು ಮೇಲಕ್ಕೆತ್ತಲು ಸಾಧ್ಯವಿಲ್ಲ. ಜೊತೆಗೆ ಅಲ್ಲಿನ ಮಧ್ಯಮವರ್ಗ ಮತ್ತು ಕೆಳವರ್ಗದ ಜನರ ಆದಾಯಗಳು ಕಾಲಕ್ರಮೇಣ ವರ್ಧಿತವೂ ಆಗಿಲ್ಲ, ಅಲ್ಲಿನ ಮಧ್ಯಮವರ್ಗದ ಜನಸಂಖ್ಯೆ ಬಡರಾಷ್ತ್ರಗಳ ಬಡಜನರ ಜನಸಂಖ್ಯೆಗಿಂತ ಬಹಳ ಕಮ್ಮಿ.
ಆದ್ದರಿಂದ ಜಾಗತೀಕರಣದಿಂದಾಗಿ ಬಡದೇಶದ ಎಲ್ಲಾ ಜನರಿಗೂ ಲಾಭವಾಗುವುದಿಲ್ಲ. ಲಾಭವಾದರೂ ಅದು ಸುಸ್ಥಿರವಾಗಿರುವುದಿಲ್ಲ. ಇದರಿಂದಾಗಿ ಜಗತ್ತಿನ ಕೆಳವರ್ಗದ ಜನರಿಗೆ trickle down effect ಇಂದಿಗೂ ತಟ್ಟಿಲ್ಲ.
ಪ್ರಾದೇಶಿಕ ಬೆಳವಣಿಗೆಯನ್ನು ಬಿಟ್ಟರೆ ಜನತೆಯ ಸಮೃದ್ಧಿಗೆ ಬೇರೆ ದಾರಿಯಿಲ್ಲ. ಆದ್ದರಿಂದ "ನಮ್ಮಿಂದಲೇ ನಮಗೋಸ್ಕರವಾಗಿಯೇ ನಮ್ಮಲ್ಲಿಯೇ ಬೆಳವಣಿಗೆ ಆಗಬೇಕು"
ಶ್ಯಾಮ್ ಕಶ್ಯಪ್
ಈ ಲೇಖನವನ್ನು ಇಂಗ್ಲೀಷ್‍ನಿಂದ ಭಾಷಾಂತರಿಸಲು ಕನ್ನಡಕಸ್ತೂರಿ.ಕಾಂ ನ ಪದಕೋಶವನ್ನು ಉಪಯೋಗಿಸಲಾಗಿದೆ.
ಇದರ ಆಂಗ್ಲ ಪ್ರತಿಯನ್ನು ಸಧ್ಯದಲ್ಲೇ [:http://shamkashyap.blogspot.com] ನಲ್ಲಿ ಹಾಕಲಾಗುವುದು.
Comments
ಕೆಲವು referenceಗಳು
ತುಂಬಾ ಒಳ್ಳೆಯ ಲೇಖನ