ಅಮ್ಮ

ಅಮ್ಮ

ಅಮ್ಮ

ಇನ್ನು ಹಳತಾಯ್ತು ಹರಿದೀತು
ಬಣ್ಣ ಬಂದು ಮಾಸಿದೆಯೆಂದು ತೆಗೆದಿಟ್ಟು
ನಿನಗೆ ಕೊಟ್ಟ ಹಣ
ತನಗಿಟ್ಟುಕೊಳ್ಳದೆ
ಅಪ್ಪನ ಹೊಸ ಪಂಚೆಗೆ ಖರ್ಚು ಮಾಡಿದೆಯಲ್ಲ ಅಮ್ಮ
ನೀನುಡುವ ಸೀರೆಯೂ
ನಿನ್ನ ಶ್ರಮದ ಬದುಕಿಗೆ
ಸೊರಗಿದೆ ಮಾಸಿದೆ
ನಿನಗೆ ಹೇಗೆ ಅದು ನೆನಪಾಗಲಿಲ್ಲ?

Rating
No votes yet

Comments