ಅಯೋಧ್ಯೆ ಭಾರತದ ವ್ಯಾಟಿಕನ್ನೇ?
ಅಯೋಧ್ಯೆ ಎಂದರೆ ಈಗ ರಾಮ ನೆನಪಾಗುವುದು ದೂರವಾಗಿ, ಹಿಂದು-ಮುಸ್ಲಿಮ್ ಗಲಭೆಗಳಷ್ಟೇ ಮನಸ್ಸಿಗೆ ಬರುವ ದಿನಗಳಿವು. ಕೆಲವರ ಅಂಬೋಣವೆಂದರೆ ಅಯೋಧ್ಯೆ ಭಾರತದ ಅಸ್ಮಿತೆಗೆ ಕೇಂದ್ರ ಬಿಂದುವಾಗಿದೆ. ಇವೆಲ್ಲ ಎಷ್ಟು ವಿಪರೀತ ಎಂದು ನೋಡಿರಿ. ಹಾಗೊಮ್ಮೆ ಅಂದರೆ ಅದರರ್ಥ, ರಾಮಾಯಣ ಭಾರತದ ಕೇಂದ್ರ ಗ್ರಂಥ ಎಂದಂತೇ. ಇದನ್ನು ಭಾರತದ ಎಷ್ಟು ಜನ ಒಪ್ಪಿಕೊಂಡಾರು. ಹೀಗೆಲ್ಲ ಅಯೋಧ್ಯೆ ಬರೀ ಹಿಂದುಗಳದ್ದು, ಅಥವಾ ಬರೀ ಮುಸ್ಲಿಮರದ್ದು ಎಂದೆಲ್ಲ ವಾದಿಸುವುದು ಒಣರಗಳೆಯೇ ಸರಿ. ಅಯೋಧ್ಯೆ ಎಂಬ ಊರು ಕೆಲವು ಹಿಂದು ನಂಬಿಕೆಗಳಲ್ಲಿ ಪೂಜ್ಯವಾಗಿರುವುದು ಎಷ್ಟು ಸತ್ಯವೋ, ಅಷ್ಟೇ ಸತ್ಯ ಅದೀಗ ಮುಸ್ಲಿಮ್ ಇತಿಹಾಸವನ್ನೂ ಹೊಂದಿರುವುದು. ಎಷ್ಟೇ ಬೊಬ್ಬೆ ಹೊಡೆದು ಕೊಂಡರೂ, ಎಷ್ಟೇ ಕೊಲೆಸುಲಿಗೆ ಮಾಡಿದರೂ ಇದೀಗ ಮರೆಯಲಾರದ ಐತಿಹಾಸಿಕ ಗುರುತು.
ಇಷ್ಟೇ ಅಲ್ಲದೆ, ಈ ಒಂದು ಊರು ಇನ್ನೂ ಎಷ್ಟೋ ನಂಬಿಕೆಗಳ ಬೀಡಾಗಿರಬಹುದು. ಕೇಳುವವರಾರು? ಇಲ್ಲೊಂದು ಲೇಖನವಿದೆ, ಓದಿ ನೋಡಿ
Rating