ಅರಿತುಕೋ ಓ ಮನವೇ
ಅರಿತುಕೋ ಮನವೇ
ನಿನ್ನ ಎಲ್ಲೆಯ
ತಿಳಿದುಕೋ ಮನವೇ
ನಿನ್ನೊಂದು ಮಾತಿನ ಅಪಾರ್ಥವ
ಇರುವುದೆಂದು ನಾಲಿಗೆ
ಹರಿಹಾಯಬಿಡದಿರು
ಕಟ್ಟದಿರು ಬಣ್ಣದ ರೆಕ್ಕೆಯ
ತೋಚಿದ ವಿಷಯಕ್ಕೆಲ್ಲ
ಇರಲೇಬೇಕೆಂದಿಲ್ಲ ಎಲ್ಲವೂ
ನೀ ಚಿಂತಿಸಿದಹಾಗೆ
ಇರಬಾರದೆನೆಂದಿಲ್ಲ ಎಲ್ಲವೂ
ನೀ ತರ್ಕಿಸದಹಾಗೆ
ತುಸು ನಕ್ಕು ಕೈ ಕುಲುಕಿದಕ್ಕೆ
ಅಂದುಕೊಳ್ಳಬೇಡ, ಅರಿತೆ ನಾ
ಅವನಯೆಂದು ,ನೀ ಅರಿತಿದ್ದು ಅವನ ಭಾಹ್ಯವನ್ನು
ಅಂತರಾತ್ಮದ ಅರಿವಿಕೆ ಅರಿಯಬೇಕಿದೆ ನೀ ನಿನ್ನು
ಆ ಅಂತರವ ಮೊದಲು
ಹೊರ ನಗುವವನ ನೋಡಿ
ಅಣಕಿಸದಿರೆಂದು ಅರಿತುಕೋ ನೀನೋಮ್ಮೆ
ಇರುವುದು ನಿನ್ನಂತೆ
ಅವರಲ್ಲೊಂದು ಮನವು
ಘಾಸಿ ಆಗುವುದೆಂದು
ಅದಕ್ಕೂ ಎಂದು .
Rating