ಅರಿತು ಸಿರಿ ಕನ್ನಡವನಾಡು ಮಂಕುತಿಮ್ಮ ||

ಅರಿತು ಸಿರಿ ಕನ್ನಡವನಾಡು ಮಂಕುತಿಮ್ಮ ||

ಇಂದು ನಸುಕಿನಲ್ಲಿ ಚೀನಾದಲ್ಲಿರುವ ನನ್ನೊಬ್ಬ ಗೆಳೆಯನಿಗೆ ಅವನ ಹಾಗು ಹೋಗುಗಳನ್ನು ಕೇಳುತ್ತ ಮಿಂಚೋಲೆ (ಇ-ಮೇಲ್) ಕಳಿಸಿದೆ. ಅದಕ್ಕೆ ಅವನು ಮರು ಮಿಂಚೋಲೆ ಕಳಿಸಿದ. ಅವನು ಕನ್ನಡ ಕುವರನಾಗಿದ್ದರು, ಪಿರಿಕನ್ನಡದ ಕಯ್ವಾರಿ(ಅಬಿಮಾನಿ)ಯಾಗಿದ್ದೂ ತನ್ನ ಎದುರೋಲೆಯಲ್ಲಿ ಬಳಸಿದ ಒಂದು ಸಕ್ಕದ ಒರೆ(ಪದ) ನನ್ನೊಳಗೆ ಮಲಗಿದ್ದ ಕನ್ನಡತನವನ್ನು ಕೆಣಕುವಂತೆ ಮಾಡಿತು. ಸಿಡಿದೆದ್ದ ನನ್ನ ಕನ್ನಡತನ ಅವನು ಬಳಸಿದ ಸಕ್ಕದ ಒರೆಗಳನ್ನೇ ಬಳಸಿ ಈ ಕೆಳಗಿನಂತೆ ಬರೆದು ಉತ್ತರಿಸುವಂತೆ ಮಾಡಿತು.
'ಮಹಿಳೆ' 'ಪುರುಷ' ಎಂದು ಸಕ್ಕವನುಲಿಯುತ 
ಕನ್ನಡವನು ಕೀಳಾಗಿ ಏಳಿಲಸದಿರು ಗೆಳೆಯ
ಮಹಿಳೆಗೆ 'ಹೆಂಗಸುಂಟು' ಪುರುಷನಿಗೆ 'ಗಂಡಸುಂಟು'
ಅರಿತು ಸಿರಿ ಕನ್ನಡವನಾಡು ಮಂಕುತಿಮ್ಮ ||
ಏಳಿಲ-ಅವಮಾನ
ಹಿರಿಯರಾದ ಗುಂಡಪ್ಪರಲ್ಲಿ ಮನ್ನಿಸೆಂದು ಕೋರುತ್ತ....
ನನ್ನ ಈ ಪಿರಿಕನ್ನಡ ಕಯ್ವಾರ(ಅಬಿಮಾನ)ವನ್ನು ಎಲ್ಲಾ ಕನ್ನಾಡಿಗ ಗೆಳೆಯರಲ್ಲಿ ಹಂಚಿಕೊಳ್ಳುವ ಹುಚ್ಚು ಹುಂಬತನದಿಂದ ಇದನ್ನು ಇಲ್ಲಿ ಬರೆದು ನಿಮಗೆಲ್ಲ ಕಳಿಸುತ್ತಿರುವೆ.
"ನಾನು ಕನ್ನಡಿಗ ಇದಕ್ಕಿಂತ ಹೆಚ್ಚುಗಾರಿಕೆ ಎನಗಿನ್ನೊಂದಿಲ್ಲ"
ಕುಕೂಊ...
ಕುಮಾರಸ್ವಾಮಿ. ಕಡಾಕೊಳ್ಳ
ಪುಣೆ
26/12/08
Rating
No votes yet