ಅರ್ಕಾವತಿ ಜಮೀನು : ರೈತರಿಗೆ ಬೇಕಾದ್ದು ಏನು?

ಅರ್ಕಾವತಿ ಜಮೀನು : ರೈತರಿಗೆ ಬೇಕಾದ್ದು ಏನು?

ಅರ್ಕಾವತಿ ಬಡಾವಣೆ ಡಿನೋಟಿಫಿಕೇಶನ್ ವಿರುಧ್ಧ ರೈತರ ಚಳುವಳಿ ಹತ್ತೊಂಭತ್ತನೇ ದಿನಕ್ಕೆ ಕಾಲಿಟ್ಟಿದೆ ಎಂದು ಪತ್ರಿಕೆಗಳಲ್ಲಿ ಓದಿದೆ. ಆದರೆ ಆ ವರದಿಯಲ್ಲಿದ್ದಂಥ ರೈತರ ಬೇಡಿಕೆಗಳನ್ನು ಓದಿ ನನಗೆ ಆಶ್ಚರ್ಯವಾಯಿತು. ಆ ರೈತರ ಬೇಡಿಕೆ ಏನೆಂದರೆ ಎಕರೆಗೆ ಮೂವತ್ತು ಕೋಟಿ ರೂಪಾಯಿಗಳಂತೆ ಪರಿಹಾರ ಕೊಡಬೇಕು ಎಂಬುದಾಗಿ. ಜಮೀನು ಕೊಡಲಾರೆವು ಎಂದು ಯಾರೂ ಹೇಳಿದ್ದು ನನಗೆ ತಿಳಿದಿಲ್ಲ. ಅಂದರೆ ರೈತರೂ ಹಣಕ್ಕೆ ತಮ್ಮನ್ನು ತಾವು ಮಾರಿಕೊಂಡಿದ್ದಾರೆ ಎಂದರ್ಥವೇ? ಮೂವತ್ತು ಕೋಟಿ ರೂ ಇಟ್ಟುಕೊಂಡು ರೈತ ಏನು ಮಾಡುತ್ತಾನೆ? ಬೇರೆ ಕಡೆ ಇನ್ನೊಂದು ಜಮೀನು ಕೊಳ್ಳಲೂ ಇಷ್ಟೊಂದು ಹಣ ಬೇಕಿಲ್ಲ. ಆ ಹಣದಲ್ಲಿ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಧಂಧೆ ಮಾಡುವ ಹುನ್ನಾರವೇ? ಹಾಗಿದ್ದಲ್ಲಿ ರೈತರಿಗೂ ರಾಜಕಾರಣಿಗಳಿಗೂ ಏನು ವ್ಯತ್ಯಾಸ? ಅಥವಾ ಭಾರೀ ಮೊತ್ತದ ಬೇಡಿಕೆಯಿಂದಾಗಿ ಸರಕಾರ ಜಮೀನನ್ನು ಹಿಂದಿರುಗಿಸಲಿ ಎಂಬ ಒಳ್ಳೆ ಉದ್ದೇಶದ ಬೇಡಿಕೆಯೇ? ನನಗಂತೂ ಅರ್ಥವಾಗುತ್ತಿಲ್ಲ. ಯಾರಾದರೂ ಈ ಪ್ರತಿಭಟನೆಯ ಒಳ-ಹೊರಗನ್ನು ತಿಳಿದವರಿದ್ದರೆ ದಯವಿಟ್ಟು ತಿಳಿಸಿ.

Rating
No votes yet

Comments