ಅರ್ಥವಿಲ್ಲದ ಪ್ರಮೋಶನ್ ಪರೀಕ್ಷೆಯೂ ನಾನೂ

ಅರ್ಥವಿಲ್ಲದ ಪ್ರಮೋಶನ್ ಪರೀಕ್ಷೆಯೂ ನಾನೂ

ಇಪ್ಪತ್ತ್ಮೂರಕ್ಕೆ ನಾನು ಒಂದು ಪ್ರಮೋಶನ್ ಪರೀಕ್ಷೆಗೆ ಹಾಜರಾಗಬೇಕು (ಆ ಬಗ್ಗೆ ಹಿಂದಿನ ಬ್ಲಾಗ್ http://sampada.net/blog/shreekantmishrikoti/25/04/2009/19549 ನಲ್ಲಿ ಬರ್ದಿದ್ದೀನಿ . )
ತಮಾಷೆ ಏನೆಂದರೆ ಈ ಪ್ರಮೋಶನ್ ಗೆ ಏನೂ ಅರ್ಥ ಇಲ್ಲದೆ ಇರೋದು . ಹೇಗಂತೀರಾ ಕೇಳಿ .

ನನ್ನ ಆದಾಯ / ಅನುಕೂಲತೆಗಳು ಹೆಚ್ಚುವದಿಲ್ಲ .
ನನ್ನ ಕೆಲ್ಸದ ರೀತಿಯಾಗಲೀ , ಸ್ಥಳವಾಗಲೀ ಬದಲಾಗುವದಿಲ್ಲ .
ಅಧಿಕಾರ ಅಂಬೋದು ಇಲ್ಲವೆ ಇಲ್ಲ ;ಮೊದಲೂ ಇಲ್ಲ ; ಆಮೇಲೂ ಇಲ್ಲ ; ಮುಂದೂ ಇಲ್ಲ ; ಅಧಿಕಾರ ಚಲಾಯಿಸಲಿಕ್ಕೆ ನನ್ನ ಮನಸ್ಸೂ ಒಲ್ಲದು ! ( ನನ್ನ ಮೇಲೂ ಯಾರ ಅಧಿಕಾರವೂ ಇಲ್ಲ ; ನನಗೆ ನಾನೇ ಬಾಸ್ :) ಹಿಂದೊಮ್ಮೆ ಒಬ್ಬರಿಗೆ ಈ ವಿಷಯ ಹೇಳಿದೆ- ನನ್ನ ಮೇಲೆ ಯಾಧಿಕಾರವೂ ಇಷ್ಟ ಇಲ್ಲ;ಯಾರ ಮೇಲೂ ಅಧಿಕಾರ ಚಲಾಯಿಸಲೂ ಇಷ್ಟ ಇಲ್ಲ ; ನನ್ನ ಕೆಲ್ಸ ಹಾಗೇ ಇದೆ- ಅಂತ . ಆಗ ಅವರು 'ದೇವರು ಯಾರ್ಯಾರನ್ನ ಎಲ್ಲೆಲ್ಲಿಡಬೇಕೋ ಅಲ್ಲೇ ಒಯ್ದು ಮುಟ್ಟಿಸುತ್ತಾನೆ- ಅಂದು ಬೆ/ಮೆಚ್ಚಿಸಿದರು ! )
ಇನ್ನು ಇತರರಿಗೆ . ನಾನು ಏನಿದ್ದರೇನು ? ಅವರು ನಾನು ನಮ್ಮ ಕಚೇರಿಯಲ್ಲಿ ಏನು ಇದ್ದೇನೆ ? ಯಾವ ಹುದ್ದೆ ಅಂತ ತಗೊಂಡು ಅವರಿಗೆ ಏನಾಗಬೇಕು . ಅವರ ಜತೆಗಿನ ನನ್ನ ನಡವಳಿಕೆ ಏನಿದೆ ಅದು ತಾನೆ ಅವರಿಗೆ ಮುಖ್ಯ ?
ಇನ್ನು ಸಂತೋಷ/ಹೆಮ್ಮೆ/ಅಹಂಕಾರ ಪಡಬಹುದೇ ? ಯಾರ ಮುಂದು ಹೆಮ್ಮೆ ? ನಾನು ಪರಊರಿನಲ್ಲಿ ಪರದೇಶಿಯಾಗಿರುವೆ !
ಇನ್ನು ಸಾಧನೆ ಮತ್ತು ಆತ್ಮತೃಪ್ತಿಯೋ ? ಅವರು ಕೇಳೋ ವಿಶಯ ನನ್ನ ಕೆಲ್ಸಕ್ಕೆ ಬಹುತೇಕ ಸಂಬಂಧವಿಲ್ಲದ್ದೇ ಆಗಿದೆ . ನಾನು ಸಾಧಿಸಬೇಕಾದ್ದನ್ನು ( ನನ್ನ ಯೋಗ್ಯತೆಗೆ ಅನುಗುಣವಾಗಿ ಅನ್ನಿ) ಸಾಧಿಸಿ ಆಗಿದೆ . ನಾನು ಮಾಡಿದ ಕೆಲ್ಸಕ್ಕೆ ರಿಕಗ್ನಿಶನ್ ಸಿಕ್ಕಿದೆ.ನನಗೆ ತೃಪ್ತಿಯೂ ಇದೆ. ಕಚೇರಿ ವಾತಾವರಣದಲ್ಲಿ ನನಗೆ ಗೌರವ ಇದೆ. .

ನಾನು ನಂಬದೇ ಇದ್ದರೂ ಪತ್ರಿಕೆಗಳಲ್ಲಿ ಬರುವ ಭವಿಷ್ಯಗಳನ್ನು ಹೊಸ ವಿಚಾರ , ಒಳನೋಟಗಳಿಗಾಗಿ ಓದುತ್ತೇನೆ . ಕಳೆದ ಎರಡು ವರ್ಷದ ಪರೀಕ್ಷೆಗಳಲ್ಲಿ ಫೇಲಾದಾಗ . "ನೀವು ಆಗಲೇ ಸಾಧಿಸಿರುವದಕ್ಕಾಗಿ ಸಮಯ,ಶಕ್ತಿ ವ್ಯರ್ಥ ಮಾಡುತ್ತ ಇದ್ದೀರಿ; ನೀವು ಎಲ್ಲಿರಬೇಕಿತ್ತೋ ಅಲ್ಲಿ ಇದ್ದೀರಿ " ಅಂತ ಇತ್ತು ! ಮತ್ತೆ ಈ ಸಲ "ನೀವು ಸವಾಲುಗಳನ್ನು ಮೀರಿ ಇದ್ದೀರಿ" ಅಂತ ಇದೆ . ಈ ಪರೀಕ್ಷೆ , ಬಡ್ತಿಗಳು ಸವಾಲು ಎಂದಾದರೆ ನಾನು ಅವುಗಳನ್ನ ಮೀರಿ ಇದ್ದೇನೆ. ಏನಂತೀರಿ ?

Rating
No votes yet

Comments