ಅಲ್ಲಮನ ವಚನವನ್ನು ಬಿಡಿಸಿ

ಅಲ್ಲಮನ ವಚನವನ್ನು ಬಿಡಿಸಿ

ಈ ವಚನ ಅರ್ಥ ಮಾಡಿಕೊಳ್ಳಲು ತಿಪ್ಪರ ಲಾಗ ಹಾಕ್ತಾ ಇದ್ದೀನಿ. ಆದರೆ ಇನ್ನು ಸರಿಯಾಗಿ ಅರ್ಥ ಆಗಿಲ್ಲ. ದಯವಿಟ್ಟು ಬಲ್ಲವರು ದನಿಗೂಡಿಸಿ

ವಚನವನ್ನು ವಿಚಾರ ಮಂಟಪದಿಂದ ಪಡೆದೆ :-

" ನಿಚ್ಚಕ್ಕೆ ನಿಚ್ಚ ಒತ್ತೆಯ ಬೇಡಿದಡೆ

ಅಚ್ಚಿ(ಚ್ಚು?)ಗ ವಾಯಿತ್ತವ್ವಾ, ನಮ್ಮ ನಲ್ಲಂಗೆ

ಕಿಚ್ಚನೆ ಹೊತ್ತುಕೊಂಡು

ಅಚ್ಚನೆಯಾಡಲು

ಅಚ್ಚುಗವಾಯಿತ್ತವ್ವಾ..ನಮ್ಮ ನಲ್ಲಂಗೆ!

ಅಚ್ಚನೆಯ ಗಳಿಹವನಿಳುಹಿದರೆ

ಬಳಿಕ ನಿಶ್ಚಿಂತವಾಯಿತ್ತು, ಗುಹೇಶ್ವರ !!"

ಇಷ್ಟೆ ಅರ್ಥ ಆಗಿದ್ದು ನನಗೆ:-

ನಿಚ್ಚ - ನಿಜ (?)

ಅಚ್ಚುಗ - ಮೋಹ

ಕಿಚ್ಚು - ಬೆಂಕಿ

ಬೆಂಕಿ ಹೊತ್ತುಕೊಂಡು ಅಚ್ಚನೆ(?) ಆಡಲು ಅಚ್ಚುಗ(ಮೋಹ) ಯಾಕೆ ಆಗುತ್ತೆ? :(

ಯಾಕೆ ನಿಶ್ಚಿಂತೆಯಾಯ್ತು ? :(

Rating
No votes yet

Comments