ಅವನ ತಲೆ ಕಂಡರೆ ಆಗುವುದಿಲ್ಲ..

ಅವನ ತಲೆ ಕಂಡರೆ ಆಗುವುದಿಲ್ಲ..

ಯಡ್ಡಿಯನ್ನು ಕಂಡ್ರೆ ಗೌಡ್ರಿಗೆ ಆಗುವುದಿಲ್ಲ.


ಗೌಡ್ರನ್ನು ಕಂಡ್ರೆ ರೆಡ್ಡಿಗಾಗುವುದಿಲ್ಲ.


___________ಕಂಡ್ರೆ ______________ಆಗುವುದಿಲ್ಲ.(ಬಿಟ್ಟ ಸ್ಥಳದಲ್ಲಿ ಕರ್ನಾಟಕದ ಯಾವುದೇ ಶಾಸಕರ ಹೆಸರನ್ನು ತುಂಬಿಸಿ)


ಇವರೆಲ್ಲರ ನಾಟಕ ಯಾರಿಗೆ ಗೊತ್ತಿಲ್ಲ..


ನಿನ್ನೆ "ಬ್ಲ ಬಾ ಯಡ್ಡಿ"ಅಂದಿದ್ದ ಗೌಡ್ರು , ನಾಳೆ "ಆತ ನನ್ನ ದೊಡ್ಡ ಮಗನಿದ್ದಂತೆ..."ಅನ್ನುವರು.


ನಾಡದು "ಅಪ್ಪಾಜೀ....." ಎಂದು ಅಳುತ್ತಾ ಯಡ್ಡಿ ಗೌಡ್ರ ಮನೆಗೆ ಹೋಗಿ ಜತೆಯಲ್ಲೇ ಫೋಟೋಗೆ ಪೋಸ್ ಕೊಡಬಹುದು.


ರಾಜಕೀಯ...ಹೀಗೇನೇ...


ನಮಗೆ ಯಾಕೆ ಇವರ ತರಹ ನಾಟಕ ಮಾಡಲು ಆಗುವುದಿಲ್ಲ? ಯಾರನ್ನೇ ಆಗಲಿ "ಕಂಡರೆ ಆಗುವುದಿಲ್ಲ" ಅಂದರೆ ಮುಗಿಯಿತು.ಅವರ ಸ್ವರ ಕೇಳಿದರೂ ಆಗುವುದಿಲ್ಲ. ಅವರ ನೆರಳು ಬೀಳುವಲ್ಲಿಯೂ ಸಂಚರಿಸುವುದಿಲ್ಲ. ಟಿ.ವಿ.ಯಲ್ಲೂ ಅವರ ಮುಖ ಕಂಡರೆ ಸಿಟ್ಟಾಗುತ್ತೇವೆ-


ಟಿ.ವಿ.ಯಲ್ಲಿ ಮಂತ್ರಿ ರೇಣುಕಾ ಮುಖ ಕಂಡ ಕೂಡಲೇ-"ಅವನ ತಲೆ ಕಂಡರೆ ಆಗುವುದಿಲ್ಲ.. .ತೆಗೆಯೋ ಅದನ್ನು...ಈ ಟಿ.ವಿ.ಯವರಿಗೆ ಬೇರೆ ಕೆಲಸವಿಲ್ಲ ಕಾಣುತ್ತದೆ. ೨೪ ಗಂಟೆ ಅವನ ಹಿಂದೇ ಸುತ್ತುತ್ತಿರುತ್ತಾರೆ..."ಅಂದರೊಬ್ಬರು. ಇಡೀ ಕರ್ನಾಟಕ ರಾಜ್ಯದ ಪತ್ರಿಕೆಗಳು, ವಿರೋಧ ಪಕ್ಷ,ಆಡಳಿತ ಪಕ್ಷದವರಿಗೇ ಅವರ್ನ ಮಂತ್ರಿಗಿರಿಯಿಂದ ಅಲ್ಲಾಡಿಸಲಾಗಲಿಲ್ಲ. ನಾನು ತೆಗೆದೆ-


ರಿಮೋಟು-ಬೇರೆ ಚ್ಯಾನೆಲ್ ಹಾಕಿದೆ.


ಅಲ್ನೋಡಿದ್ರೆ ಮೂಢನಂಬಿಕೆಗಳ ವಿರೋಧಿ,ಚಿಂತಕ,ಇತ್ಯಾದಿ ಇತ್ಯಾದಿ ಆದ ಗೋವಿಂದ ರಾವ್ ಗರಂ ಆಗಿ ಕೂತಿದ್ದರು. ಅವರು ಕೈಯಲ್ಲಿ ಬಾಬಾನನ್ನು ತೋರಿಸುವವನ ಮೇಲೆ ಕೆಂಡಾಮಂಡಲ .........ಟಿ.ವಿನೋಡುತ್ತಿದ್ದ ನಮ್ಮ ಮೈಯೆಲ್ಲಾ ಉರಿಯಲು ಸುರುವಾಗಿ "ಓಂ ಶಾಂತಿಃ ಶಾಂತಿಃ.." ಅಂದು,ಚ್ಯಾನಲ್ ಚೇಂಜ್ ಮಾಡಿದೆ-


  ನಮ್ಮ ಬುದ್ಧಿವಂತ ನಟನ ಹಾಡು-ಕುಣಿತ ಬರುತ್ತಿತ್ತು. ಹಿಂದೊಮ್ಮೆ ಆತನ ಸಿನೆಮಾದ ಹಾಡಿನ ಕ್ಯಾಸೆಟ್ ತಂದು ಕೇಳಿದ್ದೆ- ಹೆಣ್ಣಿನ ಬಗ್ಗೆ ಕೀಳಾಗಿ ಮಾತನಾಡುವ ಡಯಲಾಗುಗಳು ಹಾಡಿನ ನಡುನಡುವೆ ಇತ್ತು. ಸಿನೆಮಾ/ಆಕ್ಟಿಂಗ್/ಕ್ಯಾಸೆಟ್ಮಾರಾಟದ ಗಿಮಿಕ್ ಎಂದು ಗೊತ್ತಿದ್ದರೂ ನನಗಾತನನ್ನ ಕಂಡರಾಗುವುದಿಲ್ಲ. ಆತನಿಗೆ ಹೆಂಡತಿಯಾಗಿ ಕನ್ನಡದ ಹುಡುಗಿ ಸಿಗಲಿಲ್ಲ ಎಂಬುದೇ ಸಮಾಧಾನ.


ಕೆಟ್ಟಜನ, ವಿಲನ್‌ಗಳ ಬಾಯಲ್ಲಿ ಕೆಟ್ಟಮಾತು ಬಂದರೂ ಬೇಸರವಿಲ್ಲ.ಯಾರನ್ನು ನಾವು ಒಳ್ಳೆಯ ಜನ,ನಾಯಕ ಅಂದುಕೊಳ್ಳುತ್ತೇವೋ ಅವರು ತಮ್ಮ ಮಾತು,ನಡತೆಯಲ್ಲಿ ತಪ್ಪಬಾರದು.


ಒಂದೇ ಒಂದು ಏಟು ನಮ್ಮ ಮೆಚ್ಚಿನ ನಿರ್ದೇಶಕರನ್ನು ಹೀರೋದಿಂದ ವಿಲನ್ ಪಟ್ಟಕ್ಕೆ ಇಳಿಯುವಂತೆ ಮಾಡಿತು.


ಆಗದವರು ಅಂದ್ರೆ ಮನುಷ್ಯರೇ ಆಗಬೇಕೆಂದೇನಿಲ್ಲ. ನಮ್ಮ ಭಾರತದ ತಲೆಗೆ ತಾಗಿಕೊಂಡೇ ಇನ್ನೊಂದು ದೇಶವಿದೆಯಲ್ಲಾ.. ಹಿಂದೆ,ಇಂದು,ಮುಂದೂ ಆ ದೇಶ ಸ್ನೇಹಕ್ಕೆ ಅರ್ಹವಲ್ಲ. ಗೊತ್ತಿದ್ದೂ ಅವರ ಕಡೆ ಸ್ನೇಹಹಸ್ತ ಚಾಚುವುದು-ಅಮಾನ್ ಕಿ ಆಶಾ (TOI ಹೊಸ ಸ್ಲೋ ಗನ್) ಅಲ್ಲಾ- ಅವಮಾನ..ಅಮಾನ್ ಕಿ ದುರ್ದಶಾ..


-ಗಣೇಶ.


 


 


 


 

Rating
No votes yet

Comments