ಅವಸರ - ಅವಾಂತರ

ಅವಸರ - ಅವಾಂತರ

ಒಬ್ಬಳು ತನ್ನ ಪತಿಗೆ ಒಂದು ಪತ್ರ ಬರೆದಳು. ಅದರಲ್ಲಿ ಅವಳು ಎಲ್ಲಿಯೂ ವಿರಾಮ ಚೆಹ್ನೆಯನ್ನು ಹಾಕಿರಲಿಲ್ಲ. ಪತ್ರ ಬರೆದ ನಂತರ ಅವಳಿಗೆ ತನ್ನ ತಪ್ಪಿನ ಅರಿವಾಯಿತು. ಅವಳು ಅವಸರದಲ್ಲಿ ಅಂದಾಜಿನಿಂದ ಪೂರ್ಣ ವಿರಾಮ ಗಳನ್ನು ಹಾಕಿದಳು. ಆ ಪತ್ರ ಹೀಗಿದೆ.

ಪ್ರಿಯ ಪತಿಯವರಿಗೆ,

ವಂದನೆಗಳು,
ಏನು ಸಮಾಚಾರ? ನೀವು ಬಹಳ ದಿನಗಳಿಂದ ಕಾಗದ ಬರೆದೇ ಇಲ್ಲ ನನ್ನ ಗೆಳತಿ ಮೀನಾಳಿಗೆ. ಕೆಲಸ ಸಿಕ್ಕಿದೆ ನಮ್ಮ ಹಸುವಿಗೆ. ಕರು ಆಗಿದೆ ನನ್ನ ತಾತನಿಗೆ. ತಲೆನೋವು ಶುರುವಾಗಿದೆ ನಮ್ಮ ನಾಯಿಗೆ. ಗಾಯ ಆಗಿದೆ ನಿಮ್ಮ ಜಮೀನಿನಲ್ಲಿ. ಭತ್ತ ಬೆಳೆದಿದೆ ಚಿಕ್ಕಪ್ಪನ ತಲೆಯಲ್ಲಿ. ಹೇನಾಗಿದೆ ನನ್ನ ಕಾಲಿನಲ್ಲಿ. ಬಹಳ ನೋವಾಗುತ್ತಿದೆ ನಿಮ್ಮ ತಮ್ಮನಿಗೆ.  ಸಿಗರೇಟಿನ ಚಟ ಶುರುವಾಗಿದೆ ನನಗೆ. ಸ್ವಲ್ಪ ಹಣ ಬೇಕಾಗಿದೆ ನಾಯಿಮರಿ. ಅನ್ನ ತಿನ್ನುತ್ತಾ ಇಲ್ಲ ರೇಶನ್ನಿನ ಸಕ್ಕರೆಯನ್ನು. ರಜೆಯಲ್ಲಿ ಬರುವಾಗ ತನ್ನಿ ಒಂದು ಸುಂದರ ಮಹಿಳೆ. ನನ್ನ ಹೊಸ ಗೆಳತಿಯಾಗಿದ್ದಾಳೆ ಐಶ್ವರ್ಯ ರೈ. ಈ ಸಮಯದಲ್ಲಿ ಟಿ. ವಿ. ಯಲ್ಲಿ ನಟಿಸುತ್ತಿದ್ದಾಳೆ ನಮ್ಮ ಕುರಿ. ಮಾರಿದೆ ನಾನು ನಿಮ್ಮ ತಾಯಿಯನ್ನು. ಆಸ್ಪತ್ರೆಯಲ್ಲಿ ಸೇರಿಸಿದ್ದೇನೆ ನಿಮ್ಮ ಪತ್ರವನ್ನು ಓದುವುದಕ್ಕೆ ಕಾಯುತ್ತಿರುತ್ತೇನೆ.
ಇಂತಿ ನಿಮ್ಮ ಪ್ರೀತಿಯ ಪತ್ನಿ

 

 

 

ಸೂಚನೆ: ಇದು ಮಿಂಚಂಚೆ ಬಂದದ್ದು (ನಂದಲ್ಲ)
ಬಶೀರ್ ಕೊಡಗು

Rating
No votes yet

Comments