ಅವಿವಾಹಿತನ ಗೋಳು

ಅವಿವಾಹಿತನ ಗೋಳು

 ಜಯನಗರದ ನಾಲ್ಕನೇ ಬ್ಲಾಕಿನ

ಬಂಜಾರಾ ಹೋಟೇಲಿನ
"ಫ್ಯಾಮಿಲಿ" ರೂಮಲ್ಲಿ ಕೂರಲು
ನಂಗೆ ಅನುಮತಿ ಇಲ್ವಲ್ಲಾ...
ಜೊತೆಗಾರ್ತಿ ಈಗ ಬೇಕಲ್ಲಾ!
 
ಬಾಲ್ಯದಲ್ಲಿ ಅಮ್ಮ ತಿಕ್ಕಿ ತಿಕ್ಕಿ
ತೊಳೆದಿದ್ದ ಬೆನ್ನಲ್ಲಿ 
ಕೊಳೆ ತುಂಬಿದೆ ಈಗ
ಶುಚಿಯಾಗಿಸಲು ನಂಗೆ ಕೈ ಎಟ್ಕಲ್ಲ
ತಿಕ್ಕುವವಳು ಈಗ ಬೇಕಲ್ಲಾ!
 
"ಕೆಲ್ಸ ಮುಗ್ಸ್ರೀ, ಏನಿದೆ ಮನೇಲಿ?"
ಅಂತನ್ನೋ ಬಾಸ್, ಮುಗುಳ್ನಕ್ಕು,
"ಹೋಗ್ರೀ ಮನೇಗೆ, ಲೇಟಾಯ್ತಲ್ಲ"-
ಹೇಳೋಕೆ, ಮನೆಯೊಡತಿ ಈಗ ಬೇಕಲ್ಲಾ!
 
ದುಡ್ದ ಸಂಬಳದಲ್ಲಿ ಉಳೀತಿದೆ ಎಲ್ಲಾ
ಖರ್ಚು ಮಾಡೋದು ಹೇಗೋ ತಿಳೀತಿಲ್ಲ
ಬ್ಯೂಟಿ ಪಾರ್ಲರ್, ಶಾಪಿಂಗಂತ ಸುತ್ತಾಡಿ
ಚಿಕ್ಕಾಸೂ ಬಿಡದೆ ನನ್ನ ಸಂಬಳ-
ಚಿಂದಿ ಉಡಾಯಿಸುವವಳು ಈಗ ಬೇಕಲ್ಲಾ!
 
ತುಂಬಿದೆ ವರ್ಷ ಇಪ್ಪತ್ತಾರು
ಪ್ರೊಪೋಸಲ್‌ಗಳೂ ಬಂದಿವೆ ಒಂದೈದಾರು
ಮದುವೆಯಾಗಿ ಬೇಗ 
ಸವಿಯಬೇಕಿನ್ನು ಬದುಕ ಬೇವುಬೆಲ್ಲ!
 
-ಶಫಿ
 
 
 
 
 
Rating
No votes yet

Comments