ಅವ್ವ..

ಅವ್ವ..

ನನ್ನಾಕಿ ಹೆತ್ತಾಕಿ ಕಂಡಾರೆ ಎದೆಯುಕ್ಕಿ

ಅಂತಾದ  ಅವ್ವಾ ಅವ್ವ..

ಕರಿ ನೆಲದ  ಮೈಯಾಕಿ

ಕಬ್ಬಿನ  ಒಡಲಾಕಿ

ಅಕಿಗಿಂತ  ಬೇರಿಲ್ಲ  ನನ್ನ  ದೈವ..

 

ಬಿದ್ದಾಗ  ಎದ್ದಾಗ  ಕೈಗೆ  ಕೈ ಹಿಡಿದಾಗ

ನಗುವ   ಮುಖಗಳು  ಎಷ್ಟೊ ಕನಸಿನ್ಯಾಗ,

ಬಣ್ಣ  ಬಣ್ಣದ  ಮಾತು

ಬಿಳಿಯ  ಸೀರಿಯ  ಮ್ಯಾಗ 

ಮೈ  ಮನಸ  ಮರೆತಾಂಗ  ಮಣ್ಣಿನೊಳಗ..

 

ಬಡವಿಯಾದರು  ಆಕಿ  ಒಲವನ್ನೆ

ಉಣಿಸಿದಳು,

ಕೆನೆಗಟ್ಟಿದ  ಹಾಲು ಆಕಿ ಕಣ್ಣೀರು,

ಸಪ್ತ ಸ್ವರ್ಗಕೂ ಮೀರಿ ಹರಿದಿಹುದು

ಕರುಳ  ರಸ 

ತಳದಿ  ಕಾಣುವುದು ಅವಳ  ಉಸಿರು..

 

ತೆಲಿ  ಇಡಲು ತೊಡಿ  ಮ್ಯಾಗ

ತಡಿಯಲಾರದ  ಪ್ರಶ್ನೆ,

ಉತ್ತರವು ಆಕಿಯ  ನಗುವ  ಮೊಗವು

ನೆನೆದಾಗ  ಮೈಯೆಲ್ಲ  ಹೊಸ  ರಕ್ತದ  ಹರಿವು,

ಹೆಚ್ಚಿದಂತೆಯೆ  ಬಾಳ  ಸುಳಿಯ  ಸೆಳವು..

 

ಶಿವಪ್ರಸಾದ್  ಎಸ್.ಪಿ.ಎಸ್

Rating
No votes yet

Comments