ಅ ಕಪ್ ಓಫ್ ಕಾಫಿ ... ಸಿಪ್ - ೪
ಬೈಕನ್ನು ಪಾರ್ಕಿಂಗ್ ಲೋಟ್ ನಲ್ಲಿ ಇಟ್ಟು ಒಳಬಂದ ನನಗೆ
"ವೈಭು ಇಲ್ಲಿ..." ಎಂದು ಪ್ರೀತಿ ಕರೆಯುತಿದ್ದಳು. ತೊಟ್ಟ ನವಿಲು ಹಸಿರು ಬಣ್ಣದ ಸಲ್ವಾರ್ ಕಾಫಿ ಡೇ ನ ಕೆಂಪು ಬಾಕ್ ಗ್ರೌಂಡ್ ನಲ್ಲಿ ಎದ್ದು ಕಾಣುವಂತಿತ್ತು. ಸಲ್ವಾರ್ನಲ್ಲಿನ ಜರಿ ಕುಸುರಿಯು ಮೇಲಿನ ಮಿನಿಚರ್ ಲೈಟ್ ನ ಪ್ರಕಾಶದಲ್ಲಿ ಇನ್ನೂ ಹೊಳಪಾಗಿ ಕಾಣುತಿದ್ದವು.
ಒಂದು ಅಡಿ ಚೌಕದ ಟೇಬಲ್. ಎರಡು ಚೀರ್ ಎರಡು ಪಕ್ಕದಲ್ಲಿ. ಒಬ್ಬರಿಗೊಬ್ಬರು ಎದುರು ಬದುರಿಗೆ ಕುಳಿತು ಕೊಂಡಿದ್ದೆವು. ಮೊದಲ ಬಾರಿಗೆ ಒಂದು ಹೆಣ್ಣಿನೊಂದಿಗೆ ಇಷ್ಟು ಸನಿಹದಲ್ಲಿ ಕೂತು ಕೊಂಡಿರುವುದು. ಅವಳನ್ನು ನೋಡಲಾರದೆ ನಾನು ಎಂಟ್ರನ್ಸ್ ನಲ್ಲಿ ಹಾಕಿರುವ "Welcome 2005 " ಎಂಬ ಕಟೌಟ್ ನೋಡುತ್ತಾ ಕುಳಿತೆ.
ಕೆಂಪು ಕುತ್ತಿಗೆ ಪಟ್ಟಿಯ ವೈಟರ್ ಬಂದು ಮೆನು ಬುಕ್ ನಮ್ಮ ಟೇಬಲ್ ಮೇಲೆ ಇಟ್ಟ. ಅವಳು "ಏನ್ ತೆಕೊತೀಯ ...??"
ಕಾಫೀ ಡೇ ಗೆ ಇದೇ ಮೊದಲ ಬಾರಿಗೆ ಬಂದದ್ದು, ಏನು ಸಿಗುತ್ತದೆ ಎಂಬ ಪರಿಚಯ ವಿಲ್ಲದವನಲ್ಲಿ ಏನು ಆರ್ಡರ್ ತೆಗೊತೀಯ ಅಂತ ಹೇಳಿದರೆ ಹೇಗೆ ಹೇಳುವುದು, ಇದೆ ನನ್ನ ಮೊದಲ ಅನುಭವ ಎಂದು ಹೇಳಿ ಬಿಡಲೇ...? ಬೇಡ ಹುಡುಗಿಯರ ಎದುರು ಸಣ್ಣವನಾಗಬಾರದು.
"ನಿನ್ನ ಪಾರ್ಟಿ ನೀನೇ ಆರ್ಡರ್ ಕೊಡು" ಅಂದೆ
"೨ ಕಾಫಿ ಚಿನೋ ಅಂಡ್ ೨ ಕೂಕ್ಕೀಸ್ ಪ್ಲೀಸ್ ..."
"ಓಕೆ ಸರ್ .." ಆರ್ಡರ್ ತೆಕ್ಕೊಂಡು ಆ ಕರಿ ಧರಿಸು ತೊಟ್ಟ ೨೫ ರ ವೈಟರ್ ಹೋದ.
ನಾನು ಇನ್ನೂ ಅದೇ ಕಟೌಟ್ ನೋಡುತಿದ್ದೆ. ಅವಳು ಅದೇ ಮೆನು ಕಾರ್ಡ್ ನಲ್ಲಿ ತನ್ನ ಬೆರಳುಗಳನ್ನು ಆಡಿಸುತಿದ್ದಳು. ಮಾತನಾಡಲು ವಿಷಯಗಳಿದ್ದವು ಆದರೆ ಎಲ್ಲಿಂದ ಶುರು ಮಾಡುವುದು ಅಂತ ತಿಳಿಯುತಿರಲಿಲ್ಲ.
ಒಮ್ಮೆ ಮೆನು ಕಾರ್ಡ್ ನ ಎಂಟೂ ಪುಟಗಳನ್ನೂ ತಿರುವಿಹಾಕಿದ ಮೇಲೆ. ಮೆನು ಕಾರ್ಡ್ ಅನ್ನು ಬದಿಗಿಟ್ಟು ಅವಳು "ಏನೂ ?? ಮೌನ ವೃತಾನ...?"
"ಇಲ್ಲಾ , ಹಂಗೇನಿಲ್ಲ.. ನೀನು ಮೆನು ಕಾರ್ಡ್ ನಲ್ಲಿ ಬ್ಯುಸಿ ಇದ್ದೀಯಲ್ಲ , ನಿನಗೆ ಡಿಸ್ಟರ್ಬ್ ಮಾಡುವುದು ಬೇಡ ಅಂತ ನಾನು ನನ್ನಷ್ಟಕ್ಕೆ ಇದ್ದೇನೆ ..."
"ಅಬ್ಬಾ ಮಾತಾಡುವ ಪರಿ ನೋಡು, ನಂಗೆ ಏನು ನಾಳೆ ಮೆನು ಕಾರ್ಡ್ ನ ಮೇಲೆ ಅಸ್ಸೆಸ್ಸ್ಮೆಂಟ್ ಇದೇ ನೋಡು ..!!!"
"ಮತ್ತೇಕೆ ಅಷ್ಟು ಸೀರಿಯಸ್ ಆಗಿ ಅದನ್ನು ನೋಡುತಿದ್ದೆ ..??"
"ಮತ್ತೇನು ಮಾಡುವುದು ? ಎದುರು ಕುಳಿತ ವ್ಯಕ್ತಿ ಬಾಯಿಗೆ ಬೀಗ ಹಾಕಿ ಕುಳಿತುಕೊಂಡರೆ ?"
"ಓಕೆ ಅಮ್ಮಾ , ಮಾತಾಡು ..."
"ನೀನೇ ಶುರು ಮಾಡು .."
ಎಲ್ಲಿಂದ ಶುರು ಮಾಡಲಿ ಕಾಲೇಜ್ ಅಡ್ಮಿಶನ್ ದಿನದಿಂದ ಶುರು ಮಾಡಲಾ, ಇಲ್ಲ ಒಂದು ವಾರದ ಹಿಂದೆ ಮಿಂದ ಜಿನುಗು ಮಳೆಯಿಂದ ಶುರು ಮಾಡಲಾ...??
ಬೇಡ ಬೇಡ ಇಷ್ಟು ಬೇಗ ಬೇಡ, ಮೊದಲು ಅವಳ ಮನಸಲ್ಲಿ ಏನಿದೆ ಎಂದು ತಿಳಿದು ಕೊಳ್ಳಬೇಕು.
ಸರಿ ಆದರೆ ಸದ್ಯಕ್ಕೆ ಮಾತನಾಡಲು ಯಾವ ಟಾಪಿಕ್ ಹುಡುಕಲಿ ಎಂದು ಆಲೋಚಿಸಲು ಅದೇ ಎಂಟ್ರನ್ಸ್ ನಲ್ಲಿ ಹಾಕಿರುವ ಕಟೌಟ್ ನಿಂದ ಮಾತನಾಡಲು ಒಂದು ಟಾಪಿಕ್ ಸಿಕ್ಕಿತು.
"ಪ್ರೀತಿ... happy new year in advance"
"wish you the same ... ಫಾರ್ಮಾಲಿಟೀಸ್ ಬಿಟ್ಟು ಬೇರೇನೂ ಮಾತಿಲ್ವಾ ನಿನ್ನಲ್ಲಿ ??"
"ಹುಂ ಸ್ಟಾಕ್ ಮುಗಿದು ಹೋಗಿದೆ, ಆರ್ಡರ್ ಕೊಟ್ಟಿದ್ದೇನೆ , ಡೆಲಿವೆರಿ ಗೆ ಇನ್ನೂ ಸಮಯ ಬೇಕಂತೆ !!!!"
"ಅಬ್ಬಾ .. ಓಕೆ .."
ಮತ್ತೆ ಪುನಃ ಇಬ್ಬರು ಮೌನ. ಸಲ್ಪದರಲ್ಲೇ ನಮ್ಮ ಆರ್ಡರ್ ನಮ್ಮ ಟೇಬಲ್ ಮೇಲಿತ್ತು.
ತನ್ನ ಬದಿಯಲ್ಲಿದ್ದ ಕಪ್ಅನ್ನು ಇನ್ನೂ ಪಕ್ಕಕ್ಕೆ ಸರಿಸಿ ಟ್ರೇ ನಲ್ಲಿದ್ದ ಶುಗರ್ ಕ್ಯೂಬ್ ಅನ್ನು ಹಾಕಿ ಕಾಫಿ ರೆಡಿ ಮಾಡಿಕೊಂಡಳು. ನಾನು ಅವಳನ್ನು ಅನುಸರಿಸಿದೆ.
ಮೊದಲ ಸಿಪ್ ಅನ್ನು ಅಸ್ವಾಧಿಸುತ್ತಾ "ಇವತ್ತು ಪ್ಲಾನ್ಸ್ ಏನು ? New Year ಗೆ ??" ಅಂದಳು.
"ಏನಿಲ್ಲ ... ನಮ್ದೆನಿದೆ as usual ... ನಿಂದು"
"ನೋಡ್ಬೇಕು, ಪಪ್ಪಾ ನೋಟ್ಟಿಗೆ ಅವರ ಆಫೀಸ್ ಕೋಲಿಗ್ಸ್ ಎಲ್ಲ ಸೇರಿ ಪಾರ್ಟಿ ಮಾಡ್ತಾರೆ ಅಲ್ಲಿ ಹೋಗ್ತಿವಿ .."
"ಅಂದ್ರೆ , ಇವತ್ತು ಫುಲ್ ನೈಟ್ ಔಟಾ...??"
"ನೈಟ್ ಔಟ್ ಮಾಡಲು ನಾವೇನು ಹುಡುಗ್ರಾ..? ಹಂಗೇನಿಲ್ಲ ರಾತ್ರಿ ೧ ರ ಸುಮಾರಿಗೆ ಮನೆಗೆ ಹೋಗಿ ತಾತಿ..."
"ನಾವೇನು ಹುಡುಗ್ರಾ ಅಂದ್ರೆ ...??"
"ನೀವು ಬಿಡಿ ಅಪ್ಪಾ ... ಹುಡುಗ್ರು ... ಅದರಲ್ಲೂ ಹಾಸ್ಟೆಲ್ ನಲ್ಲಿರುವ ಹುಡುಗ್ರು ... ಸ್ವತಂತ್ರ ಕುರಿಗಳು, ಯಾರೇನು ಮಾಡಿದ್ರು ಯಾರು ಕೇಳುವುದಿಲ್ಲ."
"ಅಂದ್ರೆ ...?"
"ಹಾಸ್ಟೆಲ್ ಜೀವನ ಅದರಲ್ಲೂ ಹುಡುಗ್ರ ಹಾಸ್ಟೆಲ್ ಲೈಫ್ ಗೊತಪ್ಪಾ ನಂಗೆ.. ನೀನು ಕೂಸುಮರಿ ನೋಡು ಏನು ಗೊತಿಲ್ಲದ ಪಾಪು ..."
"...??"
"ಇವತ್ತು ಅದೆಷ್ಟು ಬಾಟಲ್ ಹೊಡೆಯುವ ಮಾತಾಗಿದೆ..??"
"ಇಲ್ಲ ಹಂಗೆನಿಲ್ಲಾ .."
" ನಂಗ್ ಗೊತ್ತು ... ನಾನ್ ನಿನ್ನ ಫ್ರೆಂಡ್ ಅಲ್ವೇನೂ ...ಹೇಳೂ ಪರವಾಗಿಲ್ಲಾ"
"ಇಲ್ಲಾ ನಾನು ಹಾಕಲ್ಲ ..."
"ಪರವಾಗಿಲ್ಲಾ ಹೇಳು ನಾನು ಯಾರಿಗೂ ಹೇಳಲ್ಲ .."
"ಇಲ್ಲ ಪ್ರೀತಿ ...ನಾನೂ ಅಂತವನು ಅಲ್ಲಾ .."
"ನಂಗೆ ಕುಡ್ರೆ ಏನು ಬೇಜಾರಿಲ್ಲಾ, ಇನ್ಫ್ಯಾಕ್ಟ್ ನಾನೂ ಆಗೊಮ್ಮೆ ಈಗೊಮ್ಮೆ ಎಣ್ಣೆ ಇಳಿಸ್ತೀನಿ .."
ಅವಳ ಈ ಮಾತು ಕೆಳುತಿದ್ದಂತೆ ಅವಕ್ಕಾದೆ "ಹ್ಹೇ...? ಏನು ರೈಲು ಹತ್ತಿಸ್ತಿದ್ದಿಯಾ ..??"
"ಇಲ್ಲ, ನಿಜವಾಗಲು, ನಾನೂ ಪಪ್ಪಾ ನೊಂದಿಗೆ ಆಗೊಮ್ಮೆ ಈಗೊಮ್ಮೆ ಪಾರ್ಟಿಗೆ ಹೋದಾಗ ಕುಡಿತೇನೆ"
"ರಿಯಲಿ...?? "
"ರೆಡ್ ವೈನ್ ಗ್ರಿಲ್ಲ್ದ್ ಚಿಕನ್ !!! ನನ್ ಫೆವರೆಟ್"
"ಹಮ್ .. "
"ವೋಡ್ಕಾ ನನ್ ಸೆಕೆಂಡ್ ಫೆವರೆಟ್"
"ಫ್ಯಾಮಿಲಿ ಜೊತೆಗೆ ಕುಡಿತೀಯಾ ??"
"ಸ್ಕಾಚ್ ಅಂದ್ರೂ ಇಷ್ಟ, ಆದ್ರೆ ಕುಡಿದಾದ ಮೇಲೆ ನಾನೂ ಹಿಡಿತದಲ್ಲಿರಲ್ಲ ಅಂತ ಪಪ್ಪಾ ನನ್ನನ್ನು ಸ್ಕಾಚ್ ಕುಡಿಯಲು ಬಿಡುವುದಿಲ್ಲ, ಗೆಳೆಯರೊಡನೆ ಹೋದಾಗ ಸ್ಕಾಚ್ ಕುಡಿತೇನೆ"
"ಅಬ್ಬಾ ಹುಡುಗೀ ನಾನ್ದ್ಕೊಂಡಂತೆ ಇಲ್ಲಾ ...!!!"
"ಅಂದ್ರೆ, ಇದೆಲ್ಲ ಬರೀ ಹುಡುಗರಿಗೆ ಮೀಸಲು ಅಂತ ನಿನ್ನ ವಾದಾನಾ??"
"ಅಲ್ಲಲ್ಲಾ, ಹಾಗಲ್ಲ, ಮಂಗಳೂರು ಹುಡುಗೀರು ಬೆಂಗಳೂರು ಹುಡ್ಗೀರ್ ಲೆವೆಲ್ಲಿಗೆ ಬೆಳ್ದಿದ್ದಾರೆ ಅಂತ ಗೊತ್ತಿರಲಿಲ್ಲ..."
"ಅಂದ್ರೆ, ಹುಡುಗೀರಲ್ಲಿ ಅಂತಹ ವಿಧಗಳಿದೆಯಾ..? ಇಂತವರು ಗೌರಮ್ಮ ತರಹ ಇರ್ಬೇಕು, ಇಂತಹವರು ಪೋಶ್ ಇರ್ಬೇಕು ಅಂತೆಲ್ಲಾ ..?? "
"ಇಲ್ಲಾ , ನಿಮ್ ಲೈಫು ನಿಮಗಿಷ್ಟ ಇದ್ದ ಹಾಗೆ ಬದುಕ ಬಹುದು"
"ಹುಂ ಮತ್ತೆ...'life is short make it sweet' ಆಲ್ವಾ ??"
"ಹೌದು"
"ನಿಂಗೆ ಯಾವುದಿಷ್ಟ..??"
"ಇಲ್ಲ, ಇನ್ನೂ ವರೆಗೂ ಕುಡ್ದಿಲ್ಲಾ...?"
"ನಿಜವಾಗ್ಲೂ ...?? ನಂಬೊಕಾಗಲ್ಲಾ ..? ಕುಡ್ಡಿಲ್ಲಾ ಅದು ಹಾಸ್ಟೆಲ್ ನಲ್ಲಿ ಇದ್ದುಕೊಂಡು"
"ಹುಂ , ನಂಗೆ ಯಾವತ್ತು ಕುಡಿಬೇಕು ಅಂತ ಅನ್ಸಿಯೇ ಇಲ್ಲಾ"
"ಒಂದು ಸಲ ಲವ್ ಮಾಡು, ಹುಡುಗಿ ಕೈ ಕೊಡಲಿ, ಆಟೋಮೆಟಿಕ್ ಆಗಿ ನೀನು ದೇವದಾಸ ಆಗ್ತೀಯ..!!!"
ಈಗ ಲೈಟ್ ಆಗಿ ದೇವದಾಸ ಅಗ್ತಾ ಇದ್ದೇನೆ ಅಂತ ಹೇಳೋಣ ಅನ್ಕ್ಕೊಂಡೆ ಮತ್ತೆ ಬೇಡ ಎಂದು ಸುಮ್ಮನಾದೆ.
"ನೀನು ಹೇಳುದು ಒಳ್ಳೇದಿದೆ, ಕುಡುಕ ಆಗಲು ಪ್ರೀತಿ ವೈಫಲ್ಯವೇ ಕಾರಣ ಅಂತೀಯಾ...?? ನಿಂದೂ ಅದೇ ಕಾರಣನಾ ??"
"ಅಲ್ಲ ಹಾಗಲ್ಲ, ಕುಡಿತಕ್ಕೆ ಒಂದು ರೀಸನ್ ಬೇಕಲ್ಲ, ಒಬ್ಬ ಪಾಪದ ಹುಡುಗಿಯ ತಲೆ ಮೇಲೆ ನೀವು ಆ ಕಾರಣ ಹೊರೆಸಿ ಕುಡಿಯಲು ಶುರು ಮಾಡ್ತೀರಿ...!!"
"ಇಲ್ಲಾ, ಅದರ ಅನುಭವವೂ ಆಗಿದೆ ಅದ್ರೂ ಕುಡಿತ ಬೇಡ ಹೇಳಿ ಕುಡಿಲಿಲ್ಲ"
"ಅಂದ್ರೆ ನೀನು ಹೇಳುವುದು ನೀನು ಲವ್ ಫೈಲೂರ್ ಪಾರ್ಟಿ.. !!!"
"ಒಂದು ತಾರಾ ಹಾಗೆಯೇ.."
"ವೈಭೂ ಪ್ಲೀಸ್ ಹೇಳೂ ನಿನ್ ಲವ್ ಸ್ಟೋರಿ.."
"ಅದೆಲ್ಲಾ ಈಗ ಬೇಕಾ..."
"ಹೇಳೂ ಪ್ಲೀಸ್, ಏನಾಯ್ತು ನಿಮ್ ಲವ್ ಸ್ಟೋರಿಗೆ ??"
"ಏನಾಗ್ತಿದೆ ಅಂತಾ ಗೊತ್ತಿಲ್ಲ, ಟು ಸೈಡೆಡ್ ಅನ್ಕೊಂಡಿದ್ದೆ, ಆದ್ರೆ..."
"ಏನು ಆದ್ರೆ ..??"
"ಏನಿಲ್ಲಾ , ಬಿಡು..."
"ನೀನು ಹೇಳ್ ಲೇ ಬೇಕು .."
"ಏನಿಲ್ಲಾ ಅವಳ ಮನಸಲ್ಲಿ ಬೇರೆ ಯಾರೋ ಇದ್ದಾರೆ ಅಂತ ಗೊತಾಯ್ತು ಅದಕ್ಕೆ ಅವಳನ್ನು ಮರೀಲಿಕ್ಕೆ ಪ್ರಯತ್ನ ಪಡ್ತಾ ಇದ್ದೀನಿ."
"ಯಾರೂ ಅವಳು..?? ನಂಗ್ ಗೊತ್ತಾ ..?? ನಾನ್ ಅವಳಿಗೆ ಹೇಳ್ತೀನೆ ನನ್ನ ವೈಭು ಭಂಗಾರದಂತಹ ಹುಡುಗ ಅಂತ"
ಅವಳ 'ನನ್ನ ವೈಭು' ನನ್ನಲ್ಲಿ ಹೊಸ ಅಲೆಯನ್ನೇ ಉಂಟುಮಾಡಿತು. ಒಳಗಿನ ವಿರಹದ ಜ್ವಾಲಾಮುಖಿ ಎದುರಲ್ಲಿ ಆ ಅಲೆ ಲೀನವಾಯಿತು.
"ಹುಂ ಬೇಕಾಗಿಲ್ಲ, ಅವಳು ನನ್ನ ಅರ್ಥ ಮಾಡ್ಕೊಂಡಿಲ್ಲ"
"ಹೇಳೂ , ಯಾರವಳು??ನಮ್ಮ ಕಾಲೇಜಾ??"
"ನಿಂಗೆ ಗೊತ್ತಿಲ್ಲ ಅವಳು ಯಾರಂತ.. ನಮ್ ಊರವಳು ಕಳೆದ ೬ ವರ್ಷದಿಂದ ಅವಳನ್ನು ಮನಸಲ್ಲೇ ಇಟ್ಟು ಪೂಜಿಸುತಿದ್ದೆ"
"ಪೂಜಿಸುತಿದ್ದೆ..? ಅಂದ್ರೆ ಈಗ ಅವಳಿಲ್ವಾ...??"
"ಇಲ್ಲಾ ... ಅವಳು ಬೇಡ... ಬೇರೆಯವರಿಗೆ ಆ ಸ್ಥಾನ ಕೊಡುವ ಅಂತ ಈಗ ಯಾರಿಗೂ ನೈವೇದ್ಯ ಕೊಡ್ತಾ ಇಲ್ಲ"
"ಹೋಗ್ಲಿ ಬಿಡು ನಿಂಗೆ ಒಳ್ಳೆ ದೇವತೇನೆ ಸಿಗ್ತಾಳೆ"
"ಹುಂ, ನೋಡೋಣಾ ಯಾರು ಬಂದು ಈ ದೇವಸ್ತಾನ ಆಳ್ತಾರೆ ಅಂತ"
"ಹೋಗ್ಲಿ ಬಿಡು, ಆ ಮೂಲ ದೇವತೆಯ ಹೆಸರಾದರು ಹೇಳು"
"ಕೃಪಾ, ನನ್ನ ಮೊದಲ ಲವ್ !!!"
"ಕ್ರುಪಾದೆವಿಯ ಕೃಪೆಯಿಂದ ನಿನಗೆ ಒಳ್ಳೆ ದೇವತೇನೆ ಸಿಗುತ್ತಾಳೆ"
"ನೋಡೋಣಾ..."
ಕೃಪಾಳ ನೆನಪಿನ ಕಸದಲ್ಲಿ ಸುಳಿದಾಡುತ್ತಿರುವ ನನ್ನ ಮನಸನ್ನು ಈಗ ಎದುರು ಕೂತಿರುವ ಪ್ರೀತಿ ಗುಡಿಸುತಿದ್ದಳು. ನನ್ನ ನಿವೇದನೆ ಇವಳಲ್ಲಿ ಮಾಡಲೇ ಎನ್ನುವಷ್ಟರಲ್ಲಿ ಅವಳು "ಲವರ್ ಬಾಯ್, ಮತ್ತೆ ಯಾವಾಗ ಇನ್ನೊಮ್ಮೆ ಲವ್ ಮಾಡುವ ಪ್ಲಾನ್ಸ್ ???"
"ಅದೆಲ್ಲಾ ಬಿಡು, ಈಗ ನೀನು ನಿನ್ನ ಲವ್ ಸ್ಟೋರಿ ಹೇಳು"
"ಸಾರೀ ಗುರು, ಹೇಳ್ತೇನೆ ಇಗಲ್ಲಾ ನಿನ್ನ ಪಾರ್ಟಿ ದಿನ"
"ಈಗಲೇ ಹೇಳಬಹುದು ಅಲ್ಲಾ .."
"ಬೇಗ ಮನೆಗೆ ಹೋಗ್ಬೇಕು, ಪಾರ್ಲರ್ ಗೆ ಅಮ್ಮನ ಜೊತೆಗೆ ಹೋಗೋದಿದೆ, ೮ ಗಂಟೆಗೆ ಹೋಟೆಲ್ ಸೇರಬೇಕು, ಸಾರೀ ಕಣೋ .."
"ಓಕೆ ಪರವಾಗಿಲ್ಲ, ನಿಂಗೆ ಹೇಳ್ಬೇಕು ಅನ್ಸಿದ್ದಾಗ ಹೇಳು, ಯಾವಾಗ ಫ್ರೀ ಇದ್ದಿ ಹೇಳು ಆಗ ನನ್ ಪಾರ್ಟಿ ಕೊಡ್ತೇನೆ"
"ನಾಳೆ ಆಗಬಹುದಾ..??"
"sure !!! ಎಲ್ಲಿ ??"
"ಮತ್ತೆಲ್ಲಿ ಇಲ್ಲೇ, ಇದೇ ಟೇಬಲ್ ನಲ್ಲಿ ಸೇಮ್ ಟೈಮ್ ನಲ್ಲಿ ಆಗಬಹುದಾ..."
"ಆಗಬಹುದು"
ಕೈಯಲ್ಲಿದ್ದ ಎರಡೂ ಕಪ್ ಖಾಲಿಯಾಗಿತ್ತು. ಟ್ರೇನಲ್ಲಿ ಕೂಕೀಸ್ ನ ಹುಡಿ ಚದುರಿತ್ತು.
ಅವಳು ಬಿಲ್ ಪೇ ಮಾಡಿದಳು. ಇಬ್ಬರು ಎದ್ದು ಹೊರ ಹೋಗಲು ಕ್ಯಾಶ್ ಕೌಂಟರ್ ನಲ್ಲಿದ್ದ ಕ್ಯಾಷಿಯರ್ ಕೊಂಪ್ಲಿಮೇನ್ಟ್ರಿ ಗಿಫ್ಟ್ ಆಗಿ ಒಂದು ಸಣ್ಣ ಟೆಡ್ಡಿ ಬೇರ್ ಅವಳ ಕೈಯಲ್ಲಿ ಇಟ್ಟು "Wish u a Happy New Year mam!!" ಅಂದ. ಇಬ್ಬರೂ ಅಲ್ಲಿಂದ ಹೊರ ನಡೆದೆವು.
Comments
ಉ: ಅ ಕಪ್ ಓಫ್ ಕಾಫಿ ... ಸಿಪ್ - ೪
ಉ: ಅ ಕಪ್ ಓಫ್ ಕಾಫಿ ... ಸಿಪ್ - ೪
ಉ: ಅ ಕಪ್ ಓಫ್ ಕಾಫಿ ... ಸಿಪ್ - ೪