ಆ.........ದಿನದ ನೆನಪು
ಆ..............ದಿನ
ಮಧ್ಯಾಹ್ನದ ಸುಡುಬಿಸಿಲು
ತಡವಾಗಿತ್ತು ನನಗೆ......
ಕಾಲೇಜಿನಿಂದ ಮನೆಗೆ ಬರಲು !
ತೆಂಗಿನಗರಿಯ ಚಪ್ಪರದ ನೆರಳಿನಡಿ
ಹಲಸಿನ ಹಣ್ಣಿನ ಮುಂದೆ.......
ನನ್ನ ನೋಡುತ್ತ ಕಣ್ಣು ಕೆಕ್ಕರಿಸಿ
"ಎಂತಕ್ಕೆ ತಡ ಆತೆ ?" ಎಂಬ ಪ್ರಶ್ನೆ
ಚಾಕು ಹಿಡಿದು ಹಣ್ಣು ಕತ್ತರಿಸುತ್ತಿದ್ದ
ಅಮ್ಮನ ಕಣ್ಣು ನನ್ನನ್ನು
ಕೆಕ್ಕರಿಸಿ ಇರಿಯುತ್ತಿತ್ತು...
"ನೀನು ಹೆಣ್ಣಕೂಸು ತಿಳಕೊ"
ನನ್ನ ಮಾತು ಈ ಹಲಸಿನ ಹಣ್ಣಿನ
ಮುಳ್ಳು ಇದ್ದ ಹಾಗೆ ..............
ಆದರೆ.....ಒಳಗೆ ಸಿಹಿ.
ನಗುತ್ತಿದ್ದ ಪಕ್ಕದ ಮನೆಯ
ಗೆಳತಿಯರಿಗೆ ಹಣ್ಣಿನ ಸೊಳೆಗಳ
ಬಿಡಿಸಿಕೊಟ್ಟ ........ಅಮ್ಮ.!
ಚಪ್ಪರಿಸಿದ ಸಿಹಿ ಬಾಯಿಗಳು
ಗೊಳ್ಳನೆ ನಕ್ಕವು...ನನ್ನದು
ಮೌನವೇ..... ಉತ್ತರ
ಬಿಸಿಲು ಸುಡುತ್ತಿತ್ತು..
ಎವೆಯಿಕ್ಕದೇ........ನಾನಲ್ಲಿ ಒಂಟಿ
"ನೀ ಒಳ್ಗೋಗೆ ಕೂಸೆ"
ಅಪ್ಪ ಬೀಡಿ ಸೇದುತ್ತ .......ಹೊಗೆ ಬಿಟ್ಟಿದ್ದ !
Rating
Comments
ಉ: ಆ.........ದಿನದ ನೆನಪು
In reply to ಉ: ಆ.........ದಿನದ ನೆನಪು by Harish Athreya
ಉ: ಆ.........ದಿನದ ನೆನಪು