ಆಧುನಿಕ "ಬೇಡರ ಕಣ್ಣಪ್ಪ"..

ಆಧುನಿಕ "ಬೇಡರ ಕಣ್ಣಪ್ಪ"..

ಇತ್ತೀಚೆಗೆ ತಾನೇ ಬಾದಾಮಿ ತಾಲ್ಲೂಕಿನಲ್ಲೊಬ್ಬ ತನ್ನ ಬಲಗಣ್ಣನ್ನೇ ಕೈಯಿಂದ ಕಿತ್ತು ಭಕ್ತಿಯ ಪರಾಕಷ್ಟೆಯನ್ನು ಮೆರೆದಿದ್ದನ್ನು ಪತ್ತ್ರಿಕೆಯಲ್ಲಿ ಓದಿದೆ.
ಶಂಕರಜ್ಜಯ್ಯ ಕೇಳಿದನೆಂದು ಮದುಕಪ್ಪ ಯಲ್ಲಪ್ಪ ಮಲ್ಲಾಡದ ಕರಡಿಯವರು ತೋರಿರುವ ಭಕ್ತಿ ನನ್ನಲ್ಲಿ ಮರುಕವನ್ನುಂಟುಮಾಡಿತು. ಕರಡಿಯವರು ಮಾನಸಿಕ ಅಸ್ವಸ್ಥನೆಂದು ಗೆಳೆಯನಿಂದ ಕೇಳಿದೆನಾದರೂ ಸಮಾಜದಲ್ಲಿ ಈ ರೀತಿಯ ಮೌಢ್ಯಕ್ಕೆ ಕೊನೆಯೆಂದು? ಬೆಳಕಿನಿಂದ ಕತ್ತಲೆಯೆಡೆಗೆ ಪಯಣ ಸಾಧುವೇ?

ಯಾಕೋ ಯುಗಕವಿ ಡಿ.ವಿ.ಗುಂಡಪ್ಪನವರ ಒಂದು ಸಾಲು ನೆನಪಾಗುತ್ತಿದೆ....

"ಪರದೈವವನು ತೊರೆಯೆ ಗತಿ ನರನಿಗಿಲ್ಲ ದಿಟ
ನರನಿಲ್ಲದಿರೆ ದೇವನನು ಕೇಳ್ವರಾರು
ಪುರಷತೆಯೆ ಸೇತುವೆ ಮೄಗತ್ವದಿ೦ ದಿವ್ಯತೆಗೆ
ಮುರಿಯದಿರು ಸೇತುವೆಯ - ಮ೦ಕುತಿಮ್ಮ"

Rating
No votes yet