ಆನೆ ನಡೆದದ್ದೇ ದಾರಿ .. ಆದರೆ ಜನಗಳು??
ಚಿತ್ರ
ಆನೆ ನಡೆದದ್ದೇ ದಾರಿ ..
ಆದರೆ ಜನಗಳು ಅದರ ದಾರಿಗೆ ಅಡ್ಡ -ಬಂದು ಬಿದ್ದು ತಮ್ಮ ಜೀವ ಕಳೆದುಕೊಳ್ಳೋದು ಯಾಕೆ ?
ಒಂದು ವರ್ಷದ ಹಿಂದೆ ಮೈಸೂರಲ್ಲಿ ಆನೆಗೆ ಬಲಿಯಾದ ಕುತೂಹಲಿ ನೋಡುಗನೊಬ್ಬನ ನಡೆಯನ್ನ ಟೀವಿಯಲ್ಲಿ ಲೈವ್ ಆಗಿ ನೋಡಿ ಇನ್ನೂ ಮರೆತಿಲ್ಲ , ಈಗ ಬೆಂಗಳೂರು ಸುತ್ತ ಮುತ್ತ ಮತ್ತು ಬೆಂಗಳೂರಿಗೆ ಅತಿ ಹತ್ತಿರದಲ್ಲಿಯೇ ಬೀಡು ಬಿಟ್ಟಿರುವ ಕಾಡಾನೆಗಳ ಓಡಿಸಲು ಅರಣ್ಯ ಸಿಬ್ಬಂಧಿ ಮತ್ತು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಆದರೆ ಅವರಿಗೆ ಅಡ್ಡಿಯಾಗಿರೋದು ಈ ಹಾಳು ಕೆಟ್ಟ ಕುತೂಹಲಿ ಜನರೇ .. ;(೯
ಆನೆ ಧಾಳಿ ಬಗ್ಗೆ ಗೊತ್ತಿದ್ದೂ ಅದರ ಹತ್ತಿರ ಹೋಗಿ ನೋಡುವ ಇವರ ಕುತೂಹಲಕ್ಕೆ ಏನು ಅನ್ನಬೇಕೋ ತಿಳಿಯದಾಗಿದೆ .. .
ಹಿಂದೆ ಒಮ್ಮೆ ಬೆಂಗಳೂರಲ್ಲಿ ಬಾಂಬ್ ಪತ್ತೆ ಆದಾಗ ಅದು ನಿಷ್ಕ್ರಿಯ ಮಾಡುವಾಗಲೂ ಜನ ಅದು ನೋಡಲು ಫೋಟೋ ತೆಗೆಯಲು ಮುಗಿ ಬಿದ್ದದ್ದು ನೋಡಿದಾಗ ಇವರಿಗೆ ಪ್ರಾಣದ ಮೇಲೆ ಆಶೆ ಇಲ್ಲವೇ ಅನ್ನಿಸಿದ್ದು ಸುಳ್ಳಲ್ಲ .. !!
ಜನರ ಕೂಗಾಟ ಹಾರಾಟ ಚೀರಾಟ ಈ ಪ್ರಾಣಿಗಳನ್ನು ಗಲಿಬಿಲಿಗೊಳಿಸಿ ಅವು ಸಿಕ್ಕಲ್ಲೆಲ್ಲ ನುಗ್ಗಿ ಅನಾಹುತ ಮಾಡೋದು ಖಾತ್ರಿ . .
ಆನೆಗಳು ಮರಳಿ ಕಾಡು ಸೇರಲಿ - ನಾಡ ಜನ ಕಾಡು ಆಕ್ರಮಿಸೋದು ನಿಲ್ಲಿಸಲಿ .
ನಾವೂ ಬಾಳೋಣ -ಅವುಗಳನ್ನೂ ಬದುಕಲು ಬಿಡೋಣ
ಚಿತ್ರ ಸುದ್ಧಿ ಮೂಲ :
ವಿಜಯ ಕರ್ನಾಟಕ
(೨೫ /೦೬/ ೨೦೧೩-ಮಂಗಳವಾರ )
Rating
Comments
http://bit.ly/132KyH1
http://bit.ly/132KyH1
ಸಪ್ತಗಿರಿಗಳೆ ನಮಸ್ಕಾರ, ನಮಗೇನೂ
ಸಪ್ತಗಿರಿಗಳೆ ನಮಸ್ಕಾರ, ನಮಗೇನೂ ಆಗದೆಂಬ ಭಂಢ ಧೈರ್ಯ ನಮ್ಮ ಜನರಲ್ಲಿ ರಕ್ತಗತವೆಂದು ಕಾಣುತ್ತದೆ - ನಾಗೇಶ ಮೈಸೂರು
ಸಪ್ತಗಿರಿಯವರೆ , ತನಗೆ
ಸಪ್ತಗಿರಿಯವರೆ , ತನಗೆ ಬೇಕಾದುದ್ದಕ್ಕೆ ಹೊರತಾಗಿ ಯಾವುದಕ್ಕು ಗಮನ ಕೊಡದ ಈಗಿನ ಜನರ ದುರಂಕಾರವೆ ಇಂತಹುದಕ್ಕೆಲ್ಲ ಕಾರಣ ಅನ್ನಿಸುತ್ತೆ.
In reply to ಸಪ್ತಗಿರಿಯವರೆ , ತನಗೆ by partha1059
ಗುರುಗಳೆ ಮತ್ತು ನಾಗೇಶ್ ಅವರೇ
ಗುರುಗಳೆ ಮತ್ತು ನಾಗೇಶ್ ಅವರೇ ಆನೆ ಭಾರವಾಗಿದ್ದು ನೋಡಿದರೆ ದೂರದಲ್ಲಿ ಬರುವಂತಿದ್ದರೂ ಅತಿ ಶೀಘ್ರದಲ್ಲಿಯೇ ಹತ್ತಿರ ಬಂದು ಸೊಂಡ್ಲಿಂದ ಕಾಲಿಂದ ತುಳಿದು ಅಪ್ಪಚ್ಚ್ಹಿ ಮಾಡಬಲ್ಲುದು , ಇಂದಿನ ಪೇಪರ್ ನೋಡಿದಾಗ ಅದರ ಸೊಂಡಿಲಿಂದ ಬಚಾವ್ ಆಗಿ ಮೂರ್ಚೆ ಹೋದ ಆ ಹೈದ ಇನ್ನು ಮುಂದೆ ತನ್ನ ಬದುಕುಳಿದ ಕಥೆ ಹೇಳಿ ಜಾಗೃತಿ ಮೂಡಿಸಲಿ ... !!
ಕುತೂಹಲ ಓಕೆ - ಕೆಟ್ಟ ಕುತೂಹಲ ಯಾಕೆ ? ..!!
ಪ್ರತಿಕ್ರಿಯೆಗೆ ನನ್ನಿ
ಶುಭವಾಗಲಿ
\।
ಆನೆ ನಡೆದಿದ್ದೇ ದಾರಿ; ಹಾಗಾದರೆ
ಆನೆ ನಡೆದಿದ್ದೇ ದಾರಿ; ಹಾಗಾದರೆ ಜನ ತುಳಿದದ್ದು ಅಡ್ಡಹಾದಿ :(( ಪೂರಕ ಮಾಹಿತಿಗೆ ಉತ್ತಮ ವಿಷಯವಿರುವ ಕೊಂಡಿಯನ್ನು ಕೊಟ್ಟಿದ್ದೀರ, ಸಪ್ತಗಿರಿಗಳೇ!
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
In reply to ಆನೆ ನಡೆದಿದ್ದೇ ದಾರಿ; ಹಾಗಾದರೆ by makara
:( ಕಾಡಿಂದ ಬಂದ ಆನೆಗಳಿಗೆ, ನಾವು
:( ಕಾಡಿಂದ ಬಂದ ಆನೆಗಳಿಗೆ, ನಾವು "ನಾಗರಿಕರು" ಕಾಡುಪ್ರಾಣಿಗಳಲ್ಲ ಎಂದು ತೋರಿಸುವ ಅವಕಾಶವನ್ನು ಕಳಕೊಂಡೆವು. :(
ಈ ಬರಹದ ಜೊತೆ ಇರುವ ಚಿತ್ರ
ಈ ಬರಹದ ಜೊತೆ ಇರುವ ಚಿತ್ರ ನೋಡಿರುವಿರಲ್ಲ - ಅದನ್ನು ಕ್ಲಿಕ್ಕಿಸಿದ ಫೋಟೋ ಗ್ರಾಫರ್ ಅನುಭವ ಇಲ್ಲಿದೆ ನೋಡಿ
http://www.vijaykarnatakaepaper.com/Details.aspx?id=5165&boxid=33359453
ಸೌಜನ್ಯ :ವಿಜಯ ಕರ್ನಾಟಕ
೨೬/೦೬/೨೦೧೩