ಆನೆ ನಡೆದದ್ದೇ ದಾರಿ .. ಆದರೆ ಜನಗಳು??

ಆನೆ ನಡೆದದ್ದೇ ದಾರಿ .. ಆದರೆ ಜನಗಳು??

ಚಿತ್ರ
 
ಆನೆ ನಡೆದದ್ದೇ ದಾರಿ .. 
 
ಆದರೆ ಜನಗಳು ಅದರ ದಾರಿಗೆ ಅಡ್ಡ  -ಬಂದು ಬಿದ್ದು  ತಮ್ಮ ಜೀವ  ಕಳೆದುಕೊಳ್ಳೋದು ಯಾಕೆ ?
ಒಂದು ವರ್ಷದ ಹಿಂದೆ  ಮೈಸೂರಲ್ಲಿ ಆನೆಗೆ ಬಲಿಯಾದ  ಕುತೂಹಲಿ ನೋಡುಗನೊಬ್ಬನ ನಡೆಯನ್ನ ಟೀವಿಯಲ್ಲಿ ಲೈವ್ ಆಗಿ ನೋಡಿ ಇನ್ನೂ ಮರೆತಿಲ್ಲ , ಈಗ ಬೆಂಗಳೂರು ಸುತ್ತ ಮುತ್ತ ಮತ್ತು ಬೆಂಗಳೂರಿಗೆ ಅತಿ  ಹತ್ತಿರದಲ್ಲಿಯೇ ಬೀಡು ಬಿಟ್ಟಿರುವ  ಕಾಡಾನೆಗಳ ಓಡಿಸಲು  ಅರಣ್ಯ ಸಿಬ್ಬಂಧಿ ಮತ್ತು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಆದರೆ ಅವರಿಗೆ ಅಡ್ಡಿಯಾಗಿರೋದು  ಈ ಹಾಳು  ಕೆಟ್ಟ ಕುತೂಹಲಿ  ಜನರೇ .. ;(೯ 
ಆನೆ ಧಾಳಿ ಬಗ್ಗೆ ಗೊತ್ತಿದ್ದೂ ಅದರ ಹತ್ತಿರ ಹೋಗಿ ನೋಡುವ ಇವರ ಕುತೂಹಲಕ್ಕೆ ಏನು ಅನ್ನಬೇಕೋ ತಿಳಿಯದಾಗಿದೆ .. . 
ಹಿಂದೆ ಒಮ್ಮೆ ಬೆಂಗಳೂರಲ್ಲಿ ಬಾಂಬ್ ಪತ್ತೆ ಆದಾಗ  ಅದು ನಿಷ್ಕ್ರಿಯ ಮಾಡುವಾಗಲೂ ಜನ ಅದು ನೋಡಲು ಫೋಟೋ ತೆಗೆಯಲು ಮುಗಿ ಬಿದ್ದದ್ದು ನೋಡಿದಾಗ ಇವರಿಗೆ ಪ್ರಾಣದ ಮೇಲೆ ಆಶೆ ಇಲ್ಲವೇ ಅನ್ನಿಸಿದ್ದು ಸುಳ್ಳಲ್ಲ .. !!
 
ಜನರ ಕೂಗಾಟ ಹಾರಾಟ ಚೀರಾಟ  ಈ ಪ್ರಾಣಿಗಳನ್ನು ಗಲಿಬಿಲಿಗೊಳಿಸಿ ಅವು ಸಿಕ್ಕಲ್ಲೆಲ್ಲ ನುಗ್ಗಿ ಅನಾಹುತ ಮಾಡೋದು ಖಾತ್ರಿ . . 
 
ಆನೆಗಳು ಮರಳಿ ಕಾಡು ಸೇರಲಿ - ನಾಡ ಜನ  ಕಾಡು ಆಕ್ರಮಿಸೋದು ನಿಲ್ಲಿಸಲಿ . 
ನಾವೂ ಬಾಳೋಣ -ಅವುಗಳನ್ನೂ ಬದುಕಲು ಬಿಡೋಣ 
 
 
 
ಚಿತ್ರ ಸುದ್ಧಿ ಮೂಲ : 
ವಿಜಯ ಕರ್ನಾಟಕ 
(೨೫ /೦೬/ ೨೦೧೩-ಮಂಗಳವಾರ  )
 
 
Rating
No votes yet

Comments

Submitted by partha1059 Tue, 06/25/2013 - 19:26

ಸಪ್ತಗಿರಿಯವರೆ , ತನಗೆ ಬೇಕಾದುದ್ದಕ್ಕೆ ಹೊರತಾಗಿ ಯಾವುದಕ್ಕು ಗಮನ ಕೊಡದ ಈಗಿನ ಜನರ ದುರಂಕಾರವೆ ಇಂತಹುದಕ್ಕೆಲ್ಲ ಕಾರಣ ಅನ್ನಿಸುತ್ತೆ.

Submitted by venkatb83 Tue, 06/25/2013 - 20:02

In reply to by partha1059

ಗುರುಗಳೆ ಮತ್ತು ನಾಗೇಶ್ ಅವರೇ ಆನೆ ಭಾರವಾಗಿದ್ದು ನೋಡಿದರೆ ದೂರದಲ್ಲಿ ಬರುವಂತಿದ್ದರೂ ಅತಿ ಶೀಘ್ರದಲ್ಲಿಯೇ ಹತ್ತಿರ ಬಂದು ಸೊಂಡ್ಲಿಂದ ಕಾಲಿಂದ ತುಳಿದು ಅಪ್ಪಚ್ಚ್ಹಿ ಮಾಡಬಲ್ಲುದು , ಇಂದಿನ ಪೇಪರ್ ನೋಡಿದಾಗ ಅದರ ಸೊಂಡಿಲಿಂದ ಬಚಾವ್ ಆಗಿ ಮೂರ್ಚೆ ಹೋದ ಆ ಹೈದ ಇನ್ನು ಮುಂದೆ ತನ್ನ ಬದುಕುಳಿದ ಕಥೆ ಹೇಳಿ ಜಾಗೃತಿ ಮೂಡಿಸಲಿ ... !!
ಕುತೂಹಲ ಓಕೆ - ಕೆಟ್ಟ ಕುತೂಹಲ ಯಾಕೆ ? ..!!
ಪ್ರತಿಕ್ರಿಯೆಗೆ ನನ್ನಿ

ಶುಭವಾಗಲಿ

\।

Submitted by makara Tue, 06/25/2013 - 23:11

ಆನೆ ನಡೆದಿದ್ದೇ ದಾರಿ; ಹಾಗಾದರೆ ಜನ ತುಳಿದದ್ದು ಅಡ್ಡಹಾದಿ :(( ಪೂರಕ ಮಾಹಿತಿಗೆ ಉತ್ತಮ ವಿಷಯವಿರುವ ಕೊಂಡಿಯನ್ನು ಕೊಟ್ಟಿದ್ದೀರ, ಸಪ್ತಗಿರಿಗಳೇ!
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by venkatb83 Wed, 06/26/2013 - 18:44

ಈ ಬರಹದ ಜೊತೆ ಇರುವ ಚಿತ್ರ ನೋಡಿರುವಿರಲ್ಲ - ಅದನ್ನು ಕ್ಲಿಕ್ಕಿಸಿದ ಫೋಟೋ ಗ್ರಾಫರ್ ಅನುಭವ ಇಲ್ಲಿದೆ ನೋಡಿ

http://www.vijaykarnatakaepaper.com/Details.aspx?id=5165&boxid=33359453

ಸೌಜನ್ಯ :ವಿಜಯ ಕರ್ನಾಟಕ
೨೬/೦೬/೨೦೧೩