ಆರೊಗ್ಯಕ್ಕೆ ಬೀಡಿ - ಸಿಗರೇಟ್ ನಿಂದಾಗುವ ಹಾನಿ (ಟೊಬ್ಯಾಕೋ) ತಪ್ಪಿಸಬೇಕಾದರೆ ಅದರ ಮಾರುಕಟ್ಟೆಯನ್ನು ಹಿಡಿತಗೊಳಿಸಬೇಕು.
ಟೊಬ್ಯಾಕೊ ಅನ್ನುವುದು ಆರೋಗ್ಯಕ್ಕೆ ತುಂಬಾ ಹಾನಿಕರ. ಮೊದಲು ತಿಳಿದಕ್ಕಿಂತಲೂ ಹೆಚ್ಚಾದ ರೋಗಗಳು ಧೂಮಪಾನದಿಂದ ಬರುವುದು ಸಂಶೋಧನೆಯಿಂದ ತಿಳಿದುಬಂದಿದೆ. ಬರೀ ಶ್ವಾಸಕೋಶಗಳಿಗಷ್ಟೇ ಅಲ್ಲ, ದೇಹದ ಬೇರೆ ಮುಖ್ಯವಾದ ಅಂಗಗಳಿಗೂ ಇದು ಹಾನಿಕರ. ಹೃದಯ, ಮೆದುಳು, ಹೊಟ್ಟೆ ಮತ್ತು ಕರುಳು, ಮೂತ್ರ ಜನಕಾಂಗ (ಕಿಡ್ನಿ), ಪಿತ್ತ ಜನಕಾಂಗ (ಲಿವರ್), ಮತ್ತು ಅನೇಕ ಅಂಗಗಳ ಕ್ಯಾನ್ಸರ್ಗಳಿಗೂ ಇದು ಕಾರಣವಾಗಿದೆ. ಅಮೇರಿಕಾದಲ್ಲಿ ಟೊಬ್ಯಾಕೋ ಕಂಟ್ರೋಲ್ ಕಾರ್ಯಕ್ರಮ ಉತ್ತಮವಾದ ಫಲಿತಾಂಶವನ್ನು ನೀಡಲಿದೆ. ಈಗ ಮೊದಲಿನಂತೆ ಜನ ಎಲ್ಲೆಂದರಲ್ಲಿ ಸ್ಮೋಕ್ ಮಾಡುವ ಹಾಗಿಲ್ಲದಿರುವುದರಿಂದ ಸೆಕೆಂಡ್ ಹ್ಯಾಂಡ್ ಸ್ಮೋಕಿಂಗ್ ಕೂಡಾ ಇಳಿಮುಖದಲ್ಲಿದೆ. ಇದೇರೀತಿ ಜಗದ ಎಲ್ಲಕಡೆಯಲ್ಲೂ ಮಾಡಿದರೆ ಮಕ್ಕಳ ಆರೋಗ್ಯ ಹೆಚ್ಚುವುದರಲ್ಲಿ ಸಂದೇಹವೇ ಇಲ್ಲ.
Rating
Comments
ಉ: ಆರೊಗ್ಯಕ್ಕೆ ಬೀಡಿ - ಸಿಗರೇಟ್ ನಿಂದಾಗುವ ಹಾನಿ (ಟೊಬ್ಯಾಕೋ) ...