ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು
ಬೂಸಾ(ಫೈಬರ್) ೨೮-೧೦-೨೦೦೫
ಬೂಸಾ ತಿನ್ನಿರಿ, ಎಂದೆಂದಿಗೂ ಡಾಕ್ಟರರಿಗೆ ಸುರಿಯದೆ ಆರೋಗ್ಯವಾಗಿರಿ. ಕೆಂಪು ಅಕ್ಕಿಯ ಬೂಸಾ ದೇಹಕ್ಕೆ ಮತ್ತು ಮನಸ್ಸಿಗೆ ತುಂಬಾ ತುಂಬಾ ಒಳ್ಳೆಯದು. ಇದರಲ್ಲಿ ಹೇರಳವಾಗಿ ಜೀವಸತ್ವ(ನ್ಯೂಟ್ರಿಶನ್) ಗಳಿವೆ. ಅತ್ಯಧಿಕ ಪೌಷ್ಟಿಕಾಂಶಗಳು ಇವೆ. ನೀವು ಇದನ್ನು ತಿನ್ನುವುದರಿಂದ ನಿಮಗೆ ಕುದುರೆಗಿರುವಷ್ಟು ಬಲ, ಆನೆಗಿರುವಷ್ಟು ಬಲ ಬರುತ್ತದೆ. ಮೆದುಳು ಚುರುಕಾಗುತ್ತದೆ. ದೇಹದಲ್ಲಿ ಸೇರಿರುವ ಟಾಕ್ಸಿನ್(ವಿಷ) ಒಂದೇ ದಿನದಲ್ಲಿ ಹೊರದೂಡಲ್ಪಡುತ್ತದೆ. ಮನಸ್ಸು ಆನಂದಮಯವಾಗಿರುತ್ತದೆ. ಆ ಅನಂದವನ್ನು ಹೇಳತೀರದಾಗಿದೆ. ದೇಹವು ಅತ್ಯಂತ ಬಲಿಷ್ಟ ವಾಗುತ್ತದೆ. ಒಂದು ಚೂರೂ ಸುಸ್ತಾಗುವುದಿಲ್ಲ. ಇಡೀ ದಿನ ಮನಸ್ಸು ಪ್ರಫುಲ್ಲವಾಗಿರುತ್ತದೆ.
ಎಲ್ಲಾ ಧಾನ್ಯದ ಬೂಸಾಗಳು ಅತ್ಯುತ್ತಮವಾಗಿರುತ್ತದೆ. ಆದರೆ ಕೆಂಪು ಅಕ್ಕಿಯ ಬೂಸಾ ತುಂಬಾ ತುಂಬಾ ತಂಪುಗುಣವನ್ನು ಹೊಂದಿರುತ್ತದೆ.
ಆರೋಗ್ಯಸತ್ಯ ಪ್ರಕೃತಿ ಕೇಂದ್ರ
ಕೊಲೆಸ್ಟರಾಲ್
ಏನಿದು ಕೊಲೆಸ್ಟರಾಲ್? ಈ ಕೊಲೆಸ್ಟರಾಲ್ ಹೇಗೆ ದೇಹದೊಳಕ್ಕೆ ಅದರಲ್ಲೂ ರಕ್ತನಾಳಕ್ಕೆ ಸೇರುತ್ತದೆ? ಜಗತ್ತಿನ ಒಟ್ಟು ಜನಸಂಖ್ಯೆಯ ಶೇಕದ ೯೯ ಜನ ಕೊಲೆಸ್ಟರಾಲ್ ನಿಂದ ಬಳಲುತ್ತಿದ್ದಾರೆ. ಅಂಕಿ-ಅಂಶಗಳ ಪ್ರಕಾರ ಆಫ಼್ರಿಕ ದೇಶದಲ್ಲಿ ಪ್ರತಿಯೊಬ್ಬರೂ ೧೦೦ ರಿಂದ ೧೫೦ ಗ್ರಾಮ್ ನಾರುಯುಕ್ತ ಆಹಾರಗಳನ್ನು ಉಪಯೋಗಿಸುತ್ತಿದ್ದಾರೆ. ಆದ್ದರಿಂದ ಅಲ್ಲಿ ಕೊಲೆಸ್ಟರಾಲ್ ನಿಂದ ಬಳಲುವವರು ತುಂಬ ಕಡಿಮೆ ಸಂಖ್ಯೆಯಲ್ಲಿದ್ದಾರೆ. ನಾವು ಸೇವಿಸುವ ಅಪಥ್ಯದ ಆಹಾರಗಳಿಂದ ರಕ್ತನಾಳಗಳಲ್ಲಿ ಕೊಬ್ಬಿನ ಅಂಶವು ಸೇರುತ್ತದೆ. ಇದು ಹುಟ್ಟಿದಾಗಿನಿಂದ ೧೦ ವರ್ಷಗಳಲ್ಲಿ ೮೦% ಕೊಲೆಸ್ಟರಾಲ್ ಸೇರಿಹೋಗಿರುತ್ತದೆ. ಯಾಕೆಂದರೆ ಅದು ತಿನ್ನುವ ವಯಸ್ಸಾದ್ದರಿಂದ ಹಿಂದೆ ಮುಂದೆ ನೋಡದೇ ಮಾತಾ ಪಿತೃಗಳು ಮುಂದೆ ಬರುವ ಅಪಾಯದ ಸೂಚನೆಗಳ ಅರಿವಿಲ್ಲದೆ ಮಕ್ಕಳಿಗೆ ಕೊಡುತ್ತಾರೆ.
ಚಿಕ್ಕ ವಯಸ್ಸಿನಲ್ಲಿ ಅಭ್ಯಾಸ ಮಾಡಿಕೊಂಡಿರುವವರು ಸುಮಾರು ೨೫ ಅಥವಾ ೩೦ ನೇ ವಯಸ್ಸಿನ ನಂತರ ತುಂಬಾ ತೊಂದರೆಗೆ ಸಿಕ್ಕಿಹಾಕಿಕೊಂಡು ಡಾಕ್ಟರರ ಹತ್ತಿರ ಹೋಗಲು ಶುರು ಮಾಡುತ್ತಾರೆ. ಅವರು ಡೈಜೀನ್, ಜೆಲ್ಯೂಸಿಲ್ ಎಂಬ ಮಾತ್ರೆಗಳನ್ನು ಕೊಡುತ್ತಾರೆ. ಅಲ್ಲಿಂದ ಶುರು ರಾಸಾಯಿನಿಕ ಔಷಧಿಗಳ ಮತ್ತು ಪದಾರ್ಥಗಳ ಸೇವನೆ. ಇದರ ಜೊತೆಗೆ ಆಸಿಡಿಟಿ ಶುರುವಾಗಿ ಎಣ್ಣೆಯಲ್ಲಿ ಕರಿದ ಪದಾರ್ಥಗಳ ಸೇವನೆಯಿಂದ ಮತ್ತಷ್ಟು ಕೊಲೆಸ್ಟರಾಲ್ ಸೇರಿ ತುಂಬಾ ತುಂಬಾ ತೊಂದರೆಗೆ ಸಿಕ್ಕಿಹಾಕಿಕೊಂಡು ನರಳುತ್ತಾರೆ. ಸಂಪಾದನೆ ಮಾಡಿದ್ದನ್ನೆಲ್ಲಾ ಡಾಕ್ಟರುಗಳಿಗೆ ಸುರಿಯುತ್ತಾರೆ. ಒಂದಲ್ಲ ಒಂದು ದಿನ ಹಾರ್ಟ್ ಅಟ್ಯಾಕ್ ಆಗುತ್ತದೆ. ಇದಲ್ಲದೆ ಎಲ್ಲ ತರಹದ ರೋಗಗಳು ದೇಹದಲ್ಲಿ ಕಾಲುಹಾಕಿಕೊಂಡು ತೊಂದರೆಗಳ ಸರಮಾಲೆ ಆರಂಭವಾಗುತ್ತದೆ. ರಕ್ತನಾಳಗಲ್ಲಿ ರಕ್ತ ಹರಿಯಬೇಕೋ ಇಲ್ಲಾ ಕೊಬ್ಬಿನ ಶೇಖರಣೆಯಾಗಬೇಕೋ? ಇದರಿಂದ ದೈನಂದಿನ ಕಾರ್ಯಕ್ರಮಗಳಲ್ಲಿ ಏರು ಪೇರು ಉಂಟಾಗುವುಧು. ನಾವುಗಳು ಎಂದೆಂದಿಗೂ ಆರೋಗ್ಯವಾಗಿರಬೇಕಾದರೆ, ಈ ಜಗತ್ತಿಗೆ ಬಂದು ಏನಾದರೂ ಸಾಧನೆಗಳನ್ನು ಮಾಡಬೇಕಾದರೆ ನಾವುಗಳು ೧೦೦% ಆರೋಗ್ಯವಾಗಿರಬೇಕಾದದ್ದು ಅತಿ ಮುಖ್ಯ.
ಆದ್ದರಿಂದ ನಾವು ಆಹಾರಕ್ಕೆ ಪ್ರಮುಖವಾದ ಆದ್ಯತೆಗಳನ್ನು ಕೊಡಬೇಕು. ಪ್ರತಿಯೊಬ್ಬರೂ ಪ್ರತಿ ದಿನ ಕೆಂಪು ಮುಂಡಗ ಅಕ್ಕಿಯ ಅಥವ ಕಜ್ಜಾಯ ಅಕ್ಕಿಯ(ಎರಡು ಒಂದೇ ಅರ್ಥ ಬರುತ್ತದೆ) ಸೇವನೆ ಮಾಡಿದರೆ ಒಂದು ರೋಗವೂ ಹತ್ತಿರ ಸುಳಿಯುವುದಿಲ್ಲ. ಕೊಲೆಸ್ಟರಾಲಿನ ಭಯವಿರುವುದಿಲ್ಲ. ಕೆಂಪು ಅಕ್ಕಿಯ ಮೇಲಿನ ಹೊಟ್ಟು ದೇಹದಲ್ಲಿರುವ ಆಸಿಡಿಟಿಯನ್ನು ಮೊದಲು ೧೦೦ ಕ್ಕೆ ೧೦೦ ರಷ್ಟು ನಿರ್ಮೂಲನ ಮಾಡಿ ದೇಹಕ್ಕೆ ಅತ್ಯಂತ ಸಂತೋಷವನ್ನುಂಟು ಮಾಡುತ್ತದೆ.
ಇಡೀ ದಿನ ಮನಸ್ಸು ಮತ್ತು ದೇಹವನ್ನು ಉಲ್ಲಾಸಮಯವಾಗಿಸುತ್ತದೆ. ಮಲವಿಸರ್ಜನೆ ಚೆನ್ನಾಗಿ ಆಗಿ ದೊಡ್ಡ ಕರುಳಿನಲ್ಲಿ ಕಟ್ಟಿಕೊಂಡಿರುವ ಅತ್ಯಂತ ಕಟ್ಟಕಡೆಯ ಪಾಚಿಯೂ ಸಹಾ ಕೊಚ್ಚಿಕೊಂಡು ಹೋಗಿ ದೇಹ ಮತ್ತು ಮನಸ್ಸನ್ನು ಹಗುರವಾಗಿಸುತ್ತದೆ. ದೇಹದಲ್ಲಿ ಯಾವ್ಯಾವ ಜಾಗದಲ್ಲಿ ಏನೇನು ರೋಗಗಳಿವೆಯೋ ಆ ರೋಗಗಳನ್ನೆಲ್ಲಾ ಸಂಪೂರ್ಣವಾಗಿ ನಿರ್ನಾಮ ಮಾಡುತ್ತದೆ. ದೇಹವು ಚಟುವಟಿಕೆಯಿಂದ ಕೆಲಸ ಮಾಡಲು ಆರಂಭಿಸುತ್ತದೆ.
ಇಂದೇ ಜಾಗೃತರಾಗಿ ನಿಮ್ಮಗಳ ಆರೋಗ್ಯವನ್ನು ಕಾಪಾಡಿಕೊಳ್ಳಿ ಮತ್ತು ಆನಂದದಿಂದ ಇರಲು ಪ್ರಯತ್ನಿಸಿ. ನಿಮ್ಮ ರೈತ ಬಾಂಧವರಿಗೆ ಕೆಂಪು ಮುಂಡಗ ಅಕ್ಕಿಯನ್ನು ಬೆಳೆಯಲು ಮನವೊಲಿಸಿ.
ಹೆಚ್.ಕೆ. ಸತ್ಯಪ್ರಕಾಶ್
೯೮೮೬೩ ೩೪೬೬೭