ಆಶಾವಾದದ ಬೆನ್ನುಹತ್ತಿ...

ಆಶಾವಾದದ ಬೆನ್ನುಹತ್ತಿ...

ಕೆಲ್ಸ ಸಿಗೋದ್ಕಿಂತ ಮುಂಚೆ ಬರೆದದ್ದು...ಮನದಲ್ಲಿದ್ದ ಅವ್ಯಕ್ತ ಭಾವನೆಗಳಿಗೆ ಈ ರೀತಿ ಪದರೂಪ ಕೊಡಲು ಪ್ರಯತ್ನ ಪಟ್ಟಿದ್ದೀನಿ...

ಹೃದಯದಲಿ ಯಶಸ್ಸಿನ ದಾಹ
ಕಣ್ಣಲ್ಲಿ ಹರಿಯುತಿರುವ ಸೋಲಿನ ನದಿ,
ಮನದಲಿ ನವ್ಯ ಆಲೋಚನೆಗಳ ಸಾಗರ...
ತುಂಬಿಕೊಂಡು ಅಮರಜೀವಿಯಾಗಲು...
ಹೊರಟಿಹ "ಅ-ಮರ"..?!!

-*-
ಬದುಕ ಬಂಡಿಯ ಬದಲಾದ ಬಣ್ಣ
ಬರಡಾಗಿಸುತಿಹ ಸಿಹಿಯ ಬೇರು ಬಾರದ ಬದುಕ,
ಕನಸಲ್ಲಿ ಕಂಡದ್ದು ಕೈಗೂಡದೆ,
ನನಸಾಗದ ನೆನಪಲ್ಲೆ ನೆನೆಯುತಾ...
ಆಕಾಂಕ್ಷೆಗಳ ಆಸರೆಯಲಿ ಅಲೆಯುತಾ...
ಸೋಲನ್ನೇ ಸೋಲಿಸಲು ಸಿದ್ಧವಾಗಿ ಸೋತು,
ಹೃದಯದ ಹಾಹಾಕಾರವು ಹೆಡೆಯೆತ್ತಿ,
ಕನಸಿನ ಕಂಗಳಲಿ ಕಳೆದರೂ ಕಲ್ಪನೆ,
ಬತ್ತಿ ಹೋದರೂ ಉತ್ಸಾಹದ ಚಿಲುಮೆ,
ಮುಳುಗುತಿಹ ಸುಳಿಯಿಂದ ಹೊರಬರುವ
ಸಣ್ಣ ಆಶಾವಾದದ ಬೆನ್ನುಹತ್ತಿರುವವ...!

---ಅಮರ್

Rating
No votes yet