ಆಸೆಯೆಂಬ ಮಾಯಾ ಪಾತ್ರೆ (ಶ್ರೀ ನರಸಿಂಹ-4)

ಆಸೆಯೆಂಬ ಮಾಯಾ ಪಾತ್ರೆ (ಶ್ರೀ ನರಸಿಂಹ-4)

ಆಸೆಯೆಂದಿಗೂ  ತುಂಬದಿಹ ಮಾಯಾ ಪಾತ್ರೆ

ಅದರ ಹಿಂದೆಯೆ ಸಾಗಿದೆ ಜೀವನದ ಯಾತ್ರೆ

ಇಷ್ಟು ದೊರೆತರೆ ಇನ್ನಷ್ಟರ ಆಸೆ, ಇನ್ನಷ್ಟು

ದೊರೆತರೆ ಮತ್ತಷ್ಠ ಸೇರಿಸಿ ಕೂಡಿಡುವ ಆಸೆ

 

ಸಾಕಷ್ಟು ದೊರೆತರೂ ಅಂತಸ್ತು ಪಡೆವಾಸೆ

ಅಧಿಕಾರ ಪಡೆದು ಗದ್ದುಗೆಯ ಏರುವಾಸೆ

ಮಡದಿ ಮಕ್ಕಳ ಮೇಲೆ ಮೋಹದ ಆಸೆ

ಬಂದುಬಳಗದವರೊಡಗೂಡಿ ಬಾಳುವಾಸೆ

 

ತುಂಬಿಹುದು ಮನದಲ್ಲಿ ನೂರಾರು ಆಸೆಗಳು

ಆದರೂ ಬರಲಿಲ್ಲವೇಕೆ ಶ್ರೀ ನರಸಿಂಹನನು ಕಾಣುವಾಸೆ
Rating
No votes yet

Comments