ಇಂತಿ, ನೀ ಅಗಲಿರುವ ಗೆಳೆಯ

ಇಂತಿ, ನೀ ಅಗಲಿರುವ ಗೆಳೆಯ

ನೀ ಪ್ರೀತಿಸಿದೆ,
ನಿನ್ನ ಪ್ರೀತಿಗೆ ಸೋತು,
ನಾನು ನಿನ್ನ ಪ್ರೀತಿಸಿದೆ,
ನಮ್ಮಿಬ್ಬರ ಹೃದಯಗಳು ಒಂದಾದವು.

ನಾ ಮಾತನಾಡಿದಾಗಲೆಲ್ಲ,
ನೀ ಮೂಖಿಯಾಗುತ್ತಿದ್ದೆ.
ನೀ ಮಾತನಾಡಿದಾಗಲೆಲ್ಲ,
ನಾ ಮುಗ್ದನಂತೆ, ನಿನ್ನ ತುಟಿಗಳನ್ನೇ ದೃಷ್ಟಿಸಿ ನೋಡುತ್ತಿದ್ದೆ,
ನಿನ್ನ ತುಟಿಗಳ ನರ್ತನ ನೋಡುವುದೆಂದರೆ,
ನನಗೆ ಅದೇನೋ ಒಂತರ ಕುತೂಹಲ.

ನಮ್ಮಿಬ್ಬರ ಪ್ರೀತಿ,
ಹಕ್ಕಿಯಂತೆ ಹಾರಡುತಿರಲು,
ಬಿರುಗಾಳಿಯೊಂದು ಬೀಸಿತು,
ನಾವು ತಡೆದುಕೊಳ್ಳಲಾಗದೆ ದೂರವಾದೆವು.
ಇಬ್ಬರ ನಡುವೆ ಪ್ರೀತಿಯಿತ್ತು,
ಆದರೂ ಸೇರಲಾಗಲಿಲ್ಲ. 

ನೀ ಅಗಲಿದ ಬಳಿಕ,
ದಿನಗಳು ಕಹಿಯಾದವು,
ಕ್ಷಣಗಳು ಯುಗವಾದವು,
ಅಂದು ನೀ ಹುಟ್ಟಿಸಿದ ಪ್ರೀತಿ,
ಇಂದು ಸಂಕಟವಾಗಿದೆ.

ತಿಂಗಳುಗಳು ಸರಿದವು,
ಅದೊಂದು ದಿನ,
ಆಕಸ್ಮಿಕವಾಗಿ ನೀ ಸಿಕ್ಕಿ,
ಮಾತನಾಡಿಸುತ್ತ ನನ್ನ ಕೇಳಿದೆ,
"ನಿಜವಾಗಿಯೂ ನೀ ನನ್ನ ಮರೆತಿದ್ದೀಯಾ....?"
ಅಂದು, ನನಗಾದ ಪ್ರಾಣಸಂಕಟ,
ನಾ ಹೇಗೆ ಹೇಳಲಿ...?.
 
ನೀ ನನ್ನ ಉಸಿರಾಗಿ ಬೇರೆತುಹೋಗಿರುವಾಗ,
ಮರೆತುಹೋಗುವ ಮಾತೆಲ್ಲಿ...?,
ಒಂದುವೇಳೆ ನಾ ಮರೆತರೆ,
ನನ್ನ ಉಸಿರು ನಿಂತಂತೆ.

ನೀ ಎಲ್ಲೇ ಇರು,
ಹೇಗೆ ಇರು,
ನನ್ನ ಆಶಯ ಇಷ್ಟೇ,
ನೀ ಸಂತೋಷದಿಂದಿರು.

ನನ್ನದೊಂದು ಪ್ರಾರ್ಥನೆ,
ದಯಮಾಡಿ ಇನ್ನೆಂದೂ,
ನನ್ನ ನೆನಪಿನ ಪುಟದಲಿ ಸುಳಿಯದಿರು,
ಈಗಿರುವ ನೋವೆ ತಡೆದುಕೊಳ್ಳಲಾಗುತ್ತಿಲ್ಲ,
ಪುನಃ ನೀ ಕಂಡರೆ,
ಹುಚ್ಚನಾಗಿ ಹೋಗುತ್ತೇನೆ.

ಇಂತಿ, ನೀ ಅಗಲಿರುವ ಗೆಳೆಯ,
ಶಿವಪ್ರಕಾಶ್...

Rating
No votes yet

Comments