ಇದುವೆ ಜೀವ ಇದು ಜೀವನ-ಹೀಗೊಂದು ಘಟನೆ
ಇವತ್ತು ಬಸ್-ನಿಲ್ದಾಣದಲ್ಲಿ ೧೦೦-೧೫೦ ಜನರ ಕ್ಯೂ ಇತ್ತು . ನಿಂತು ಹೋಗಲು ತಯಾರು ಇದ್ದವರದೊಂದು ಎರಡನೇ ಕ್ಯೂ ಇರುತ್ತದೆ ಇಲ್ಲಿ. ಅದರಲ್ಲಿ ಸೇರಿಕೊಂಡೆ. ಸೀಟುಗಳು ಭರ್ತಿಯಾಗುತ್ತಿದ್ದಂತೆ ಮುಖ್ಯ ಕ್ಯೂನಲ್ಲಿನ ಜನ ಹತ್ತುವುದನ್ನು ನಿಲ್ಲಿಸಿದರು . ನಾನು ಬಸ್ ಹತ್ತಿದೆ. ನನಗೇನೂ ಸೀಟು ಸಿಗಲಿಲ್ಲ. ಹಾಗಾಗಿ ಮುಂದಕ್ಕೆ ಹೋಗಿ ಡ್ರೈವರ್ ಹತ್ತಿರ ನಿಂತುಕೊಂಡೆ. ಈ ಮುಂಬೈನಲ್ಲಿ ಸಾಮಾನ್ಯವಾಗಿ ಹತ್ತುವುದು ಹಿಂದಿನ ಬಾಗಿಲಿನಿಂದ, ಇಳಿಯುವುದು ಮುಂದಿನ ಬಾಗಿಲಿನಿಂದ. ಇದಕ್ಕೆ ಅಪವಾದ - ಅಂಗವಿಕಲರು , ವಯಸ್ಸಾದವರು ಇತ್ಯಾದಿ. ಮುಂದಿನ ಬಾಗಿಲಿನ ಹತ್ತಿರ ಒಬ್ಬಳು ಹುಡುಗಿ - ಹದಿನೆಂಟೋ ಇಪ್ಪತ್ತ್ತೋ ವರ್ಷದವಳು. ಹಿಂದೆ ನಾನು. ಬಸ್ಸು ಭರ್ತಿಯಾಗಿ ಹೊರಟಿತು. ಜನನಿಬಿಡ ರಸ್ತೆ ಆದರೂ , ಸಿಕ್ಕಾಪಟ್ಟೇ ಜನ, ವಾಹನಗಳು ಅಡ್ಡಡ್ಡ ರಸ್ತೆ ತುಂಬ ಇದ್ದರೂ , ಸಾಕಷ್ಟು ವೇಗವಾಗಿಯೇ , ಆಗಾಗ್ಗೆ ಬ್ರೇಕ್ ಹಾಕುತ್ತ , ರಸ್ತೆಯ ತಗ್ಗು ದಿನ್ನೆಗಳಿಂದಾಗಿ ಓಲಾಡುತ್ತಲೂ ಹೊರಟಿತು.ಮೊದಲ ಸ್ಟಾಪ್ ನಲ್ಲಿ ಬಸ್ಸು ನಿಂತು ಹೊರಡುವ ಹೊತ್ತಿಗೆ, ( ಇಲ್ಲಿ ಬಸ್ಸು ಅಗತ್ಯಕ್ಕಿಂತ ಒಂದು ಮಿಲಿಸೆಕಂಡ್ ಕೂಡ ಹೆಚ್ಚು ನಿಲ್ಲುವುದಿಲ್ಲ ಬೇರೆ- ಮೂರ್ನಾಲ್ಕು ದಿನದ ಹಿಂದೆ ತಾನೇ ಒಂದು ಕ್ಷಣ ಹೆಚ್ಚು ನಿಲ್ಲಿಸಬೇಕು ಅಂತ ಇಲ್ಲಿಯ ಬಸ್ಸಿನವರು ಆದೇಶ ಹೊರಡಿಸಿದ್ದಾರೆ!) ಒಬ್ಬ ದುರ್ಬಲ ಹೆಂಗಸು , ಸುಮಾರು ೫೫-೬೦ ವರ್ಷದವಳು ಬಸ್ಸಿನ ಮುಂದಿನ ಬಾಗಿಲಿನ ಮೊದಲ ಮೆಟ್ಟಿಲು ಹತ್ತಿದಳು. ಅವಳು ಒಳಗೆ ಬರುವುದನ್ನೇ ಬಸ್ಸಿನ ಚಾಲಕ ಕಾಯುತ್ತಿದ್ದ. ಅವಳಿಗೆ ಮುಂದಿನ ಮೆಟ್ಟಲು ಹತ್ತುವುದಕ್ಕೆ ಆಧಾರಕ್ಕಾಗಿ ಸರಳಿಗಾಗಿ ತಡಕಾಡಿದಳು. ಅದು ಮಾಮೂಲು ಸ್ಥಳದಲ್ಲಿ ಮಾಮೂಲು ಆಕಾರದಲ್ಲಿ ಇದ್ದಿರಲಿಲ್ಲ. ಆ ಕ್ಷಣಕ್ಕೆ , ನನ್ನ ಮುಂದಿದ್ದ ಹುಡುಗಿ ಅವಳ ನೆರವಿಗಾಗಿ ಕೈ ಚಾಚಿ ಮೇಲಕ್ಕೆ ಇನ್ನೊಂದೆರಡು ಮೆಟ್ಟಲು ಹತ್ತಿಸಿಕೊಂಡಳು . ಆ ವೃದ್ಧೆಯ ಕಣ್ಣಲ್ಲಿ ಕೃತಜ್ಞತೆ ಇಣುಕಿತು. ಬಸ್ಸು ಹೊರಟಿತು, ಓಲಾಡುತ್ತ, ಕುಲುಕುತ್ತ. ಬಾಗಿಲ ಹತ್ತಿರ ಇದ್ದರೆ ಅಪಾಯ ಅಲ್ಲವೇ ? ಅಂದರ್ ಆ ಜಾಯಿಯೆ ಅನ್ನುತ್ತ ಆ ಹೆಂಗಸನ್ನು ಈ ಹುಡುಗಿ ಇನ್ನಷ್ಟು ಒಳಕ್ಕೆ ಅಂದರೆ ತನ್ನ ಹಿಂದೆ, ಅವಳ ಹಿಂದೆ ಇರುವ ನನ್ನ ಹಿಂದೆ ಕಳಿಸಿದಳು.ಒಂದೆರಡು ಕ್ಷಣಗಳ ನಂತರ , ನನ್ನ ಹಿಂದಿನಿಂದ , ಸಂದಿಯಿಂದ ಒಂದು ಕೈ ಮುಂದಕ್ಕೆ ಚಾಚಿತು! ಆ ಕೈಯಲ್ಲಿ ಒಂದು ಸಾಧಾರಣ ಚಾಕಲೇಟು. ಅದು ಆ ವಯಸ್ಸಾದಾಕೆಯ ಕೈ! ಈ ಹುಡುಗಿಯ ಕೈ ತಟ್ಟಿ ಅವಳ ಕೈಗೆ ಈ ಚಾಕಲೇಟು ಹಾಕಿತು. ಆಗ ಈ ಹುಡುಕಿಯ ಮುಖದಲ್ಲಿ ಪ್ಲೆಸಂಟ್ ಸರ್ ಪ್ರೈಸ್ ... ಅಚ್ಚರಿ! , ವಿಸ್ಮಯ, ಒಂದು ಬಗೆಯ ಸಂತೋಷವನ್ನು ಅಲ್ಲಿ ಕಂಡೆ!. ಮುಂದೆ ಒಂದೆರಡು ಕ್ಷಣಕ್ಕೆ ಒಂದು ಸ್ಟಾ ಪ್ ಬಂದಿತು. ಆಗ ಈ ಹುಡುಗಿ ಅಲ್ಲಿ ಇಳಿದಳು. ಬಸ್ ಮುಂದಕ್ಕೆ ಹೊರಡುತ್ತಿದ್ದಂತೆ , ಅವಳು ಮತ್ತೆ ಈ ಬಸ್ ಕಡೆಗೆ , ಈ ಹೆಂಗಸಿನ ಕಡೆಗೆ ನೋಟ ಹರಿಸಲು ಪ್ರಯತ್ನಿಸಿದಳು! ಹಿಂದೆ ನೋಡಿದ ಪ್ಲೆಸಂಟ್ ಸರ್ ಪ್ರೈಸ್ , ಅಚ್ಚರಿ , ವಿಸ್ಮಯ, ಒಂದು ಬಗೆಯ ಸಂತೋಷದ ನೆರಳು ಅಲ್ಲಿ ಇನ್ನೂ ಇತ್ತು.ಈ ಘಟನೆಯನ್ನು ನೆನೆಯುತ್ತ , ಅದರ ಬಗೆಗೇ ಯೋಚಿಸುತ್ತ ನಾನು ಉಳಿದೆ. ಈ ಬಗ್ಗೆ ನನ್ನ ಅನಿಸಿಕೆ , ವಿಚಾರಗಳನ್ನು ಇಲ್ಲಿ ಬರೆಯಬೇಕೇ , ಅದು ಅಗತ್ಯವೇ ಅಂತ ಯೋಚಿಸುತ್ತ ಇಲ್ಲಿಗೇ ನಿಲ್ಲಿಸುತ್ತಿದ್ದೇನೆ.
Comments
ಪ್ಲೆಸೆಂಟ್ ಸರ್ಪ್ರೈಸ್.
ಪ್ಲೆಸೆಂಟ್ ಸರ್ಪ್ರೈಸ್..ಚೆನ್ನಾಗಿದೆ.
ಇದೇ 'ಕೊಟ್ಟು ಪಡೆಯುವವರ' ಲಕ್ಷಣ!
ಇದೇ 'ಕೊಟ್ಟು ಪಡೆಯುವವರ' ಲಕ್ಷಣ! ಮನ ತುಂಬಿತು. ಧನ್ಯವಾದಗಳು.
ಕೆಲವೊಮ್ಮೆ ಘಟನೆ ಹೇಳಿದರೆ ಸಾಕು
ಕೆಲವೊಮ್ಮೆ ಘಟನೆ ಹೇಳಿದರೆ ಸಾಕು ವಿವರಣೆ ಅಗತ್ಯವಿರುವದಿಲ್ಲ ! ನಿಮ್ಮ ಬರಹ ಹಾಗಿದೆ ! ಚೆನ್ನಾಗಿದೆ !
ಇಂದಿನ ಗಡಿಬಿಡಿ -ಹಡಾವುಡಿ -
ಇಂದಿನ ಗಡಿಬಿಡಿ -ಹಡಾವುಡಿ - ಜೀವನದಲ್ಲಿ ಸುಖ- ಶಾಂತಿ -ನೆಮ್ಮದಿ -ಖುಷಿ ಕೊಡುವ ಹಲವು ಸಣ್ಣ ಪುಟ್ಟ ದೊಡ್ಡ ಸಂಗತಿಗಳನ್ನು ನಾವ್ ನೋಡು ಆಗುತ್ತಿಲ್ಲ :((
ಬಸ್ಸೊಂದು ಬರುವಾಗ ಅದಿನ್ನು ಕಿಲೋ ಮೀಟರು ಇರುವಾಗಲೇ ಎಲ್ರನ್ನು -ವಯಸ್ಸಾದವರು-ಮಕ್ಕಳು-ಹೆಂಗಸರು ಎಂದೂ ಸಹಾ ನೋಡದೆ ತಳ್ಳಿ ಬಸ್ಸೊಳು ನುಗ್ಗುವ ಜನ ನಾವು..
ಹಿರಿಯ ನಾಗರೀಕರ ಸಂರಕ್ಷಿತ ಸೀಟುಗಳನ್ನು ಆಕ್ರಮ್ಸಿ ಅವರು ಬಂದು ನಿಂತು ದೈನ್ಯತೆಯಿಂದ ನೋಡುತ ಎಲ್ಲೋ ಕೆಲವರು ಧೈರ್ಯ ವಹ್ಸಿ ನಮ್ಮನ್ನು ಎಬ್ಬಿಸಬೇಕಾಗುವ್ದು..!!
ದಿನ ನಿತ್ಯದ ಬಸ್ಸು ಪ್ರಯಾಣದಲ್ಲಿ ನನಗೆ ಇದು ಪ್ರತಿ ನಿತ್ಯ ಕಾಣ ಸಿಗುವ ದೃಶ್ಯ..
ಈ ತರಹದ ಒಂದು ಸನ್ನಿವೇಶದಲ್ಲಿಯ ದೃಶ್ಯವನ್ನು ನಮ್ ಕಣ್ಣಿಗೆ ಕಟ್ಟುವ ಹಾಗೆ ನೀವು ಇಲ್ಲಿ ದಾಖಲಿಸಿರುವಿರಿ...
ಪ್ಲೆಸಂಟ್ ಸರ್ಫ್ರೈಜ್ ....!!
ಸಖತ್..
ಆ ಹುಡುಗಿಯ ಮನೋಭಾವನೆ -ಸಹಕಾರ-ಸಹಾಯದ - ಗೌರವ ಆದರದ ಭಾವ ನಮ್ಮಲ್ಲೆರಲಿ ಮೂಡಲಿ..
>>ಕೆಲವು ಬರಹಗಳನ್ನು ಬರೆದು -ಅವುಗಳನ್ನು ಬರೆವ ಅವಶ್ಯಕತೆ-ಉಪಯುಕ್ತತೆ ಇದೆಯೇ?
ಎಂದು ನಮಗೆ ಅನ್ನಿಸುವದು ನಿಜ...
ನಿಮಗೂ ಹಾಗೆ ಅನ್ಸಿದ್ದರಲ್ಲಿ ತಪ್ಪಿಲ್ಲ..!!
ನನಗನ್ನಿಸಿದ ಹಾಗೆ ಈ ತರಹದ ಸನ್ನಿವೇಶಗಳ- ಸಂಗತಿಗಳ ಬಗೆಗಿನ ಬರಹಗಳು ದಾಖಲಾಗಬೇಕಿದೆ.....
ಶುಭವಾಗಲಿ..
\|