ಇನ್ನೂ ಹೊಗೆಯಾಡುತ್ತಲೇ ಇದೆ!!

ಇನ್ನೂ ಹೊಗೆಯಾಡುತ್ತಲೇ ಇದೆ!!

ನಿಮಗೆ ನೆನಪಿದೆಯಾ? ಅಂದು ಗಾಂಧೀಜಿಯವರ ಹುಟ್ಟಿದ ಹಬ್ಬದ ದಿನ ಎಲ್ಲ ಪತ್ರಿಕೆಗಳಲ್ಲಿ,ಚಾನೆಲ್ಗಳಲ್ಲಿ ಒಂದೇ ಸುದ್ದಿ ಗಿರಕಿ ಹೊಡೆಯುತ್ತಿತ್ತು.ಅದೇ 'ಸಾರ್ವಜನಿಕ ಹಾಗು ಖಾಸಗಿ ಜನನಿಬಿಡ ಪ್ರದೇಶಗಳಲ್ಲಿ ಧೂಮಪಾನ ನಿಷೇದ' ಮಾಡಿರುವ ಬಗ್ಗೆ.

ಹಾಗೆ ಸುದ್ದಿ ಬಂದ ಸ್ವಲ್ಪ ದಿನ ಹೊಗೆಯಾಡುವುದು ಕಡಿಮೆಯೂ ಆಗಿತ್ತು, ಸ್ವಲ್ಪ ದಿನ ಮಾದ್ಯಮದವರು ಹೊಗೆ ಬಿಡುವವರ ಹಿಂದೆ ಬಿದ್ದಿದ್ದರು. ಆದರೆ ದಿನ ಕಳೆದಂತೆ ಮತ್ತೆ ಎಲ್ಲೆಂದರಲ್ಲಿ ಹೊಗೆ ಬಿಡುವ ಕಾರ್ಯಕ್ರಮ ಯಾವುದೇ ಅದೇ ತಡೆಯಿಲ್ಲದೆ ನಡೆಯುತ್ತಿದೆ.ನಮ್ಮ ಸರ್ಕಾರಗಳು ಕಾರ್ಯಕ್ರಮ ಘೋಷಣೆಯಲ್ಲಿ ತೋರುವ ಆಸಕ್ತಿಯನ್ನು, ಕಾರ್ಯರೂಪಕ್ಕೆ ತರುವಲ್ಲಿ ತೋರುವುದಿಲ್ಲ, ತಂದರೆ ಪಾಪ ಅದೆಷ್ಟು ಜನ ಮಂತ್ರಿಗಳು,ಅಧಿಕಾರಿಗಳು ಅದನ್ನು ಪಾಲಿಸಬೇಕಾಗುತ್ತದೋ ಎಂಬ ಭಯವಿರಬೇಕು.ಈ ಹೊಗೆ ಬಿಡುವವರು ತಾವು ಹಾಳಗುವುದಲ್ಲದೆ, ಹೊಗೆ ಬಿಡದವರಿಗೂ ಹೊಗೆ ಕುಡಿಸಿ, ಬೇಗ ಹೊಗೆ ಹಾಕಿಸಿ ಕೊಳ್ಳುವಂತೆ ಮಾಡುತ್ತಾರೆ :(
ಸಹೃದಯಿ ಮಂತ್ರಿ ರಾಮದಾಸ್ ಅವರು ಕಷ್ಟಪಟ್ಟಿದ್ದೆ ಬಂತು, ಉಪಯೋಗ ಮಾತ್ರ ಏನು ಇಲ್ಲ ಅನ್ನಿಸ್ತ ಇದೆ.ಇಂದು ಬಂದ ಮಿಂಚೆಯಲ್ಲಿ ಸಿಗರೆಟ್ ಅಂದ್ರೆ ಏನು ಅಂತ ಸೊಗಸಾಗಿ ಹೇಳಿದ್ದಾರೆ.

ಸಿಗರೆಟ್ ಅಂದರೆ, ತಂಬಾಕು ತುಂಬಿರುವ
ಒಂದು ಕಾಗದದ ಸುರುಳಿ
ಅದರ ಒಂದು ತುದಿಯಲ್ಲಿ ಬೆಂಕಿಯಿದ್ದರೆ
ಇನ್ನೊಂದು ತುದಿಯಲ್ಲಿ ಮೂರ್ಖನಿರುತ್ತಾನೆ!! (ಮೂರ್ಖಿಯು ಆಗಬಹುದು ;) )

(ಹೊಗೆ ಬಿಡುವವರು ಇದನ್ನು ಓದಿದ್ದರೆ ಸಿಟ್ಟು ಮಾಡಿಕೊಳ್ಳಬೇಡಿ, ಅದರ ಬದಲು ಬೇರೆಯವರಿಗೆ ಹೊಗೆ ಕುಡಿಸುವ ಬದಲು ತಾವೇ ಏಕಾಂಗಿಯಾಗಿ ಎಲ್ಲಾದರೂ ಹೊಗೆ ಬಿಟ್ಟು ಬನ್ನಿ;) )

ಚಿತ್ರ ಕೃಪೆ: ಗ್ಯಾಲರಿ.ವಿಎಲ್ಯುವಿಶಾರುಖ್.ಕಾಂ

- ರಾಕೇಶ್ ಶೆಟ್ಟಿ :)

Rating
No votes yet

Comments