ಇನ್ನೇನ ಬರೆಯಲಿ ನಾ

ಇನ್ನೇನ ಬರೆಯಲಿ ನಾ

ಏನೆಂದು ಬರೆಯಲಿ ನಾ ಯಾವುದರ ಮೇಲೆ ಬರೆಯಲಿ ನಾ ಪದಗಳೇ ಹೊಳೆಯುತ್ತಿಲ್ಲ ಹೊಳೆದರೂ ಎರಡು ಸಾಲಿನ ಮೇಲೆ ಹೋಗುತ್ತಿಲ್ಲ ಚಂದಿರನ ಮೇಲೆ ಬರೆಯಲೋ ಅವನು ನನಗೆ ನಿಲುಕುವುದಿಲ್ಲ! ಹುಡುಗಿಯ ಮೇಲೆ ಬರೆಯಲೋ ಅವಳು ಹೊಡೆಯದೇ ಬಿಡುವುದಿಲ್ಲ! ಮೋಡದ ಮೇಲೆ ಬರೆಯಲೋ ಮೇಲೆ ನೋಡಿದರೆ ಮೋಡವೇ ಚದುರಿಹೋಗಿದೆ ಹೂವಿನ ಮೇಲೆ ಬರೆಯಲೋ ಬರೆಯುವ ಮೊದಲೇ ಮುದುಡಿಹೋಗಿದೆ ನದಿಯ ಮೇಲೆ ಬರೆಯಲೋ ಅವಳೂ ಮಾನವನ ಕೃತ್ಯಗಳಿಂದ ಕಲುಷಿತೆಗೊಂಡಿದ್ದಾಳೆ ಮುಂಗಾರು ಮಳೆಯ ಮೇಲೆ ಬರೆಯಲೋ ಇಲ್ಲೆಲ್ಲೂ ಅದರ ಸದ್ದೇ ಇಲ್ಲ ಪ್ರಕೃತಿಯ ಮೇಲೆ ಬರೆಯಲೋ ಅವಳೋ ಮಾನವನ ಮೇಲೆ ಮುನಿಸಿಕೊಂಡಿದ್ದಾಳೆ ಹುಟ್ಟುವ ಕವಿತೆ ಭ್ರೂಣಹತ್ಯೆಯಾದಂತೆ ಹುಟ್ಟುವಾಗಲೇ ಸತ್ತುಹೋಗಿದೆ ಇನ್ನೇನ ಬರೆಯಲಿ ನಾ
Rating
No votes yet

Comments