ಇಪ್ಪತ್ - ಇಪ್ಪತ್ ನಲ್ಲಿ ಕರ್ನಾಟಕ

ಇಪ್ಪತ್ - ಇಪ್ಪತ್ ನಲ್ಲಿ ಕರ್ನಾಟಕ

ನಾಳೆಯಿಂದ ೨೦ನೇ ತಾರೀಕಿನವರೆಗೆ ಮುಂಬೈನಲ್ಲಿ ರಾಷ್ಟ್ರೀಯ ಇಪ್ಪತ್-ಇಪ್ಪತ್ ಕ್ರಿಕೆಟ್ ಪಂದ್ಯಾವಳಿ ಆರಂಭ (ನಾಳೆಯಿಂದ ಆರಂಭ ಎಂದು ನಂಬಿದ್ದೇನೆ. ೨ ಸಲ ಮುಂದೂಡಲಾಗಿತ್ತು). ಎಲ್ಲಾ ರಾಜ್ಯ ತಂಡಗಳೂ ಭಾಗವಹಿಸಲಿವೆಯೋ ಅಥವಾ ಕೆಲವು ಬಲಿಷ್ಟ ತಂಡಗಳು ಮಾತ್ರ ಸೆಣಸಾಡಲಿವೆಯೋ ಎಂಬುದರ ಬಗ್ಗೆ ಯಾವ ಮಾಹಿತಿಯೂ ಇಲ್ಲ.

ರಣಜಿ ಟ್ರೋಫಿ ಮತ್ತು ರಣಜಿ ಏಕದಿನ ಟ್ರೋಫಿ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿ ಕೊನೆಗೆ ನೀರಸ ಆಟ ಆಡಿ ನಿರಾಸೆಗೊಳಿಸಿದ ನಮ್ಮವರು ಈ ೨೦-೨೦ ರಲ್ಲಿ ಹೇಗೆ ಆಡುತ್ತಾರೋ ನೋಡಬೇಕು. ಥ್ಯಾಂಕ್ ಗಾಡ್ ಆ ರೋಲಂಡ್ ಬ್ಯಾರಿಂಗ್ಟನ್ ನನ್ನು ತಂಡದಿಂದ ಕೈಬಿಡಲಾಗಿದೆ. ಭರತ್ ಚಿಪ್ಲಿಯನ್ನು ಕೈಬಿಟ್ಟಿರುವುದು ಆಶ್ಚರ್ಯ. ರಾಹುಲ್ ದ್ರಾವಿಡ್ ಮತ್ತು ರಾಬಿನ್ ಉತ್ತಪ್ಪ ಈಗ ಫ್ರೀಯಾಗಿರುವುದರಿಂದ ಕರ್ನಾಟಕಕ್ಕೆ ಆಡಬಹುದು. ನನ್ನ ಫೇವರಿಟ್ ಕ್ರಿಕೆಟರ್ ಯೆರೆ ಗೌಡರೇ ಮತ್ತೆ ನಾಯಕ. ಇಪ್ಪತ್-ಇಪ್ಪತ್ ರಲ್ಲಿ ಗೌಡರೇ? ರಣಜಿ ಏಕದಿನ ಪಂದ್ಯಗಳಲ್ಲಿ ೨-೩ ಬಾರಿ ತಂಡವನ್ನು ಸಂಕಷ್ಟದಿಂದ ಪಾರುಮಾಡಿದ್ದು ಗೌಡರೇ ಆಗಿದ್ದರಿಂದ ಮತ್ತೆ ಅವರದೇ ನಾಯಕತ್ವ. ಆದರೆ ಇಲ್ಲಿ ನಿಧಾನವಾಗಿ ಆಡಲಿಕ್ಕೆ ಆಸ್ಪದವೇ ಇಲ್ಲ. ಹೊಡಿ ಇಲ್ಲ ಮಡಿ ಪಂದ್ಯಾಟ ಈ ಇಪ್ಪತ್-ಇಪ್ಪತ್. ತಂಡದಲ್ಲಿರುವ ಹೊಸಬರತ್ತ ಒಂದು ನೋಟ:

ಮೊಹಮ್ಮದ್ ಆರೀಫ್ ಮುಕ್ಕ: ಅಂತೂ ಕಡೆಗೆ ಒಬ್ಬ ಮಂಗಳೂರಿನ ಹುಡುಗ! ವೇಗದ ಬೌಲರ್. ಸ್ವಸ್ತಿಕ್ ಯುನಿಯನ್ ಕ್ರಿಕೆಟ್ ಕ್ಲಬ್ (ಎರಡನೇ ತಂಡ) ಪರವಾಗಿ ಆಡುತ್ತಾರೆ.

ಎಸ್.ಅರವಿಂದ್: ೨೨ರ ಹರೆಯದ ಸವ್ಯಸಾಚಿ. ಹೇರೊನ್ಸ್ ಕ್ರಿಕೆಟ್ ಕ್ಲಬ್ ಪರವಾಗಿ ಆಡುತ್ತಾರೆ. ಬೆಂಗಳೂರಿನವರು.

ಮನೀಶ್ ಪಾಂಡೆ: ೧೯ರ ಹರೆಯದ ದಾಂಡಿಗ. ಜವಾನ ಕ್ರಿಕೆಟ್ ಕ್ಲಬ್ ಪರವಾಗಿ ಆಡುತ್ತಾರೆ. ಬೆಂಗಳೂರಿನವರು.

ತಂಡದಿಂದ ಹೆಚ್ಚಿನ ನಿರೀಕ್ಷೆಯಿಲ್ಲ. ಆದರೂ ಶುಭಹಾರೈಕೆಗಳು.

Rating
No votes yet

Comments

Submitted by rajeshnaik111 Thu, 04/19/2007 - 23:03