ಈಗ ಚಾಳುಕ್ಯಸ್ ಎಕ್ಸ್ ಪ್ರೆಸ್ ಚಾಲೂ ಐತ್ರಿ ; ಹೋಗ್ರಿ ಟಿಕಿಟ್ ಬುಕ್ ಮಾಡ್ರಿ ಮತ್ತ !
ಚಾಲುಕ್ಯ ಎಕ್ಸ್ ಪ್ರೆಸ್ ನಲ್ಲಿ ಟಿಕಿಟ್ ಬುಕ್ ಮಾಡ್ಬೇಕಿತ್ತೆನ್ನ್ರಿ ? ಬರ್ರಿ ಮತ್ತೆ ಅದು ಚಾಲೂ ಐತ್ರಿ; ಅಂದ್ರೆ ಪುದುಚೆರಿ ಎಕ್ಸ್ ಪ್ರೆಸ್ ಅಂತಾರ್ರಿ !
ಮಿರಜ್ ಕಡೆಯಿಂದ ಬೆಂಗಳೂರಿನಕಡೆ ಪ್ರಯಾಣಿಸುವವರ ಸುವಿಧತೆಗಾಗಿ (ಇದರ ಬಗ್ಗೆ ನಾನು ವಿಚಾರಣೆ ನಡೆಸಿ) ಈ ಚಿಕ್ಕ ಲೇಖನ; ಉಪಯೋಗಿಯಾಗಲೀ ಎನ್ನುವ ಆತ್ಮ ವಿಶ್ವಾಸದಿಂದ ಬರೆದಿದ್ದೇನೆ.
'ರಿಸರ್ವೇಶನ್ ಶೀಟ್' ನಿಂದಲೂ ಮತ್ತು 'ಇಂಟರ್ನೆಟ್ ನ ತಾಣ'ದಿಂದಲೂ ಮರೆಯಾದ ಈ ಗಾಡಿಯ ವಿಳಾಸ ತಿಳಿಯುವುದು ಒಂದ ಕೆಟ್ಟ ಕನಸಿನ ತರಹವಾಗಿತ್ತು ಎನ್ನುವುದು ಆದಾರಿಯಲ್ಲಿ ಪ್ರಯಾಣಿಸುವ ನನ್ನಂತಹ ದುರದೃಷ್ಟವಂತರಿಗೆ ಮಾತ್ರ ಗೊತ್ತು ! ಸೋತು ಹೋಗಿದ್ದ ನಾನು ಮೊನ್ನೆ ಮುಂಬೈನ ಕನ್ನಡ ದಿನಪತ್ರಿಕೆ, 'ಕರ್ನಾಟಕ ಮಲ್ಲ'ದಲ್ಲಿ ಬಂದ ವರದಿಯನ್ನು ಓದಿದಾಗ ನಿಜಾಂಶ ತಿಳಿಯಿತು. ನನ್ನಂತೆ ಹಲವಾರು ಕನ್ನಡಿಗರು ಹಾಗೂ ಮಿರಜ್ ಲೈನ್ ನಲ್ಲಿ ಪ್ರಯಾಣಿಸುವವರ ಸುವಿಧತೆಯನ್ನು ಗಮನಿಸಿ ಈ ಲೇಖನ ಬರೆದಿದ್ದೇನೆ.
ಈಗಾಗಲೇ ಚಾಲುಕ್ಯ ಎಕ್ಸ್ ಪ್ರೆಸ್ ಎನ್ನುವ ಹೆಸರಿನ ರೈಲು ರೈಲ್ವೆ ವೇಳಾಪಟ್ಟಿಯಿಂದ ಮಾಯವಾಗಿರುವ ಬಗ್ಗೆ ಸಾಷ್ಟು ವಿಶಯಗಳು ಇಂಟರ್ನೆಟ್ ನಲ್ಲಿ ಉಪಲಭ್ದವಿವೆ. ವ್ಯಾಪಕವಾದ ವಿವರಣೆಯಾಗಲೀ ಗ್ರಾಹಕರ ಕಷ್ಟ ಸುಖಗಳನ್ನು ವಿಚಾರಿಸುವ ಕ್ರಮವಾಗಲೀ ಕಂಡಿಲ್ಲ. ಇನ್ನು ನಮ್ಮ ಕರ್ನಾಟಕ ಘನಸರ್ಕಾರಕ್ಕೆ ಕದನ ಗೊಂದಲ, ಮತ್ತು ಅಧಿಕಾರ ದಾಹ ಮತ್ತು ಪಕ್ಷ ಬದಲಾವಣೆಯ ಬಿಡುವಿಲ್ಲದ ಕೆಲಸಗಳ ಮಧ್ಯೆ ಈ ಬಡ ಬೋರೇಗೌಡರ ಕಾರ್ಪಣ್ಯಗಳನ್ನು ಕೇಳುವ ಉತ್ತಮ ಮನಸ್ಸು ಬರಬೇಕಲ್ಲವೇ ?! ಇದನ್ನು ನಾವು ಧೃತರಾಷ್ಟ್ರನ ಅಂಧ ಸರ್ಕಾರಕ್ಕೆ ಹೋಲಿಸಿದರೆ ತಪ್ಪಲ್ಲ !
ಇನ್ನು ಮಿರಜ್ ಕಡೆಯಿಂದ ಇದ್ದ ಒಂದು ರೈಲು ಈಗ ಪುದುಚೆರ್ರಿ ಎಕ್ಸ್ ಪ್ರೆಸ್ ಆಗಿ ಹೊಸ ರೂಪಪಡೆದಿದೆ. ಇದರ ನಂಬರ್ : ೧೧೦೦೫ ಮುಂಬೈನ ಸೆಂಟ್ರೆಲ್ ರೈಲ್ವೆಯ ದಾದರ್ (ಡ್) ನಿಲ್ದಾಣವನ್ನು ಇದು ರಾತ್ರಿ : ಬಿಟ್ಟು ಪುದುಚೆರಿಯನ್ನು ತಲುಪುತ್ತದೆ. (ಭಾನುವಾರ, ಸೋಮವಾರ ಹಾಗೂ ಶುಕ್ರವಾರದಂದು) ಇದು ಮಿರಜ್, ಬೆಳಗಾಂ ದಾರಿಯಲ್ಲೇ ಹೋಗಿ ಬೆಂಗಳೂರು ತಲುಪಿ ಅಲ್ಲಿಂದ (೧೬೪೦.೬=೫ ಕಿ.ಮೀ) ಪುದುಚೆರಿಗೆ ಹೋಗುತ್ತದೆ. ಚಾಲುಕ್ಯ ಎಕ್ಸ್ ಪ್ರೆಸ್ ಎಂದೇ ಇಟ್ಟಿದ್ದಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ. ಕೇರಳೀಯರು ತಮಗೆ ಬೇಕಾದ ಸುದ್ದಿಯನ್ನು ಹೇಗೋ ತಿಳಿದೇ ತಿಳಿಯುವುದರಲ್ಲಿ ನಿಸ್ಸೀಮರು. ಅವರಲ್ಲಿ ಆ ಸಂಘಟನೆ ಇದ್ದೇ ಇದೆ !
೨. ಮೈಸೂರ್ ಬೆಂಗಳೂರ್ ಶರಾವತಿ ಎಕ್ಸ್ ಪ್ರೆಸ್ (೧೧೦೩೫) :
ಇನ್ನು ನಮ್ಮ ಹಳೆಯ ಹೆಸರಿನ ಮೈಸೂರ್ ಶರಾವತಿ ಎಕ್ಸ್ ಪ್ರೆಸ್ (೧೧೦೩೫, ಮಂಗಳವಾರ ಮಾತ್ರ) ಮೊದಲಿನಂತೆಯೇ ಇದೆ.
ದಾದರ್(ಡ್) ಸೆಂಟ್ರೆಲ್ ರೈಲ್ವೆಯಿಂದ ರಾತ್ರಿ ೨೧-೩೦ ಕ್ಕೆ ಹೊರಡುತ್ತದೆ.
* ಹೆಚ್ಚಿನ ವಿವರಗಳನ್ನು ದೂರವಾಣಿ ೧೩೯ ನಲ್ಲಿ ಪಡೆಯಿರಿ.(ಅವರು ಕೊಟ್ಟರೆ !)
Railway Time Table :
Dadar-Puducherry (Chalukya) Express/11005 :
Time-Table Updated.
Nov 06 (10:24PM)
Type: Mail/Express :
Zone: CR/Central
Departs @ 21:30
Platform# 7
Train runs on : S M F
Mumbai Dadar Central/DR
Dadar-Puducherry (Chalukya) Express/11005 :
Link : http://indiarailinfo.com/train/dadar-puducherry-express-11005-dr-to-pdy/18704/712/1232
Dadar-Mysore (Sharavati) Express/11035 :
Dadar-Mysore Sharavati Express/11035
Time-Table has CHANGED since July 1, 2012.
Nov 06 (4:15PM)
Type: Mail/Express
Zone: CR/Central
Departs @ 21:30
Platform# 8
T
Mumbai Dadar Central/DR
Link : http://indiarailinfo.com/train/dadar-mysore-sharavati-express-11035-dr-to-pune/1514/712/76
Rating
Comments
ತಾಜಾಸುದ್ದಿ :
ತಾಜಾಸುದ್ದಿ :
ಚಾಳುಕ್ಯ ಎಕ್ಸ್ ಪ್ರೆಸ್ ಈಗ ಪುದುಚೆರಿ ಎಕ್ಸ್ ಪ್ರೆಸ್ ಆಗಿ ಮುಂದುವರೆಯುತ್ತಿರುವ ಹಿನ್ನೆಲೆಯಲ್ಲಿ
೧೧೦೩೫/೧೧೦೩೬ ದಾದರ್-ಮೈಸೂರ್ ಶರಾವತಿ ಎಕ್ಸ್ ಪ್ರೆಸ್ (ವೀಕ್ಲಿ) ಗಾಡಿಯನ್ನು ಗುರುವಾರ, ೮.೧೧.೨೦೧೨.; ರಿಂದ ಓಡಿಸಲಾಗುತ್ತಿದೆ. ೧೧೦೩೫ ಗೆ ಸ್ಥಳ ಕಾದಿರಿಸಲು ೬.೧೧.೨೦೧೨ ರಂದಿನಿಂದ ಪ್ರಾರಂಭವಾಗುತ್ತದೆ.