ಈಗ ನನ್ನ ಭಾಷೆಯನ್ನೇ ಮತ್ತೊಮ್ಮೆ ಕಲಿಯತೊಡಗಿದ್ದೇನೆ. !

ಈಗ ನನ್ನ ಭಾಷೆಯನ್ನೇ ಮತ್ತೊಮ್ಮೆ ಕಲಿಯತೊಡಗಿದ್ದೇನೆ. !

ಕನ್ನಡದ ಪದಗಳನ್ನು ಗುರುತಿಸುವಲ್ಲಿ ಸಂಗನಗೌಡರು ಕೊಟ್ಟ ವಿಚಾರ ಬಹಳ ಸಹಾಯಕವಾಗಿದೆ.( ಒತ್ತಕ್ಕರ ಕುರಿತಾಗಿ)ಈಗ ಶಬ್ದಕೋಶವೊಂದನ್ನು (ಗುರುನಾಥ ಜೋಷಿಯವರದು)ತಿರುವಿ ಹಾಕುತ್ತಿದ್ದೇನೆ.
ಕನ್ನಡಶಬ್ದಕೋಶದಲ್ಲಿ ಅಗತ್ಯ ಮೀರಿ ಸಂಸ್ಕೃತ ಶಬ್ದಗಳು ಬಹಳ ಸೇರಿಕೊಂಡಿವೆ ಅನಿಸಿತು.

ಕಂಕರೀಟ - (concrete) ಎಂಬ ಪದವೂ ಅಲ್ಲಿ ಸೇರಿಕೊಂಡಿದೆ.

ಈಗೀಗ ನಾನು ಬರೆಯುವಾಗ ನಾನು ಬರೆಯುವ ಪದಗಳ ಕುರಿತಾಗಿ ಗಮನ ಹರಿಸುತ್ತಿದ್ದೇನೆ. ಆಡು ಮಾತಿನಲ್ಲಿರುವ ಅಚ್ಚ ಕನ್ನಡ ಪದಗಳನ್ನೂ ನೆನೆಯುತ್ತಿದ್ದೇನೆ /ನೆನಪಿಸಿಕೊಳ್ಳುತ್ತಿದ್ದೇನೆ .
ಸಾಧ್ಯವಿದ್ದಲ್ಲಿ ( ಸಹಜ, ವ್ಯಾವಹಾರಿಕವೆಂದು ಕಾಣುವಲ್ಲಿ ಮಾತ್ರ ) ಕನ್ನಡ ಪದ ಬಳಸುತ್ತಿದ್ದೇನೆ. ಅದೇ ಉದ್ದೇಶದಿಂದಲೇ ಶಬ್ದಕೋಶವನ್ನು ತಿರುವಿ ಹಾಕುತ್ತಿದ್ದೇನೆ.

ಶೀರ್ಷಿಕೆ - ತಲೆಬರಹ
ಲೇಖನ, ಲೇಖಕ - ಬರಹ , ಬರಹಗಾರ
ಉಪಯೋಗ, ಉಪಯೋಗಿಸು .- ಬಳಕೆ , ಬಳಸು( ಬಳಕೆ ಮಾಡು)
ವ್ಯಾಪಿಸು - ಹರಡು
ನಾಯಕ - ಮುಂದಾಳು
ಸ್ವಾಗತಿಸು - ಇ(ಎ)ದಿರುಗೊಳ್ಳು

ಇತ್ಯಾದಿ .

ಶಬ್ದಕೋಶವನ್ನೋದುವಾಗ , ಅಚ್ಚಕನ್ನಡ ಶಬ್ದಗಳು , ಅದರಿಂದುಂಟಾಗುವ ಶಬ್ದಗಳ ಸಮೂಹ ಇತ್ಯಾದಿ ಗಮನದಲ್ಲಿಡುತ್ತಿದ್ದೇನೆ.

ಅಚ್ಚಕನ್ನಡ ಪದಕೋಶವೆಂಬುದು ಬಿಡುಗಡೆಯಾಗಿದೆಯಂತೆ . ಅದನ್ನು ಕೊಂಡು ಓದಬೇಕು.

Rating
No votes yet

Comments