ಈ ಕತೆ ಓದಿ ; ನಿಮ್ಮ ಅನಿಸಿಕೆ ತಿಳಿಸಿ.
ಒಬ್ಬ ಕಬ್ಬಿಣವನ್ನು ಬಂಗಾರ ಮಾಡಬಲ್ಲ ಗಿಡ ಮೂಲಿಕೆ ಹುಡುಕುತ್ತಿದ್ದಾನೆ . ಒಂದು ಅಡವಿಯಲ್ಲಿ ಕಬ್ಬಿಣದ ಸರಳನ್ನು ಹಿಡಿದು ಎಲ್ಲ ಗಿಡಮರಗಳಿಗೆ ತಾಗಿಸುತ್ತ ಹಗಲೂ ಇರುಳೂ ನಡೆಯುತ್ತಾನೆ. ಒಂದು ದಿನ ಮುಂಜಾನೆ ನೋಡಿದರೆ ಅದು ಬಂಗಾರವಾಗಿ ಬಿಟ್ಟಿದೆ. ಆದರೆ ಅದು ಯಾವ ಗಿಡ ಎಂದು ತಿಳಿಯದು!
ಅವನ ನಂಬಿಕೆಯ ಪ್ರಕಾರ ಆ ಗಿದ ಬಂಗಾರವನ್ನು ಕಬ್ಬಿಣವಾಗಿ ಮಾಡಬಲ್ಲದು. ಅದನ್ನು ಮತ್ತೆ ಮಾಡಲು ಮತ್ತೆ ಅದೇ ಬಂಗಾರದ ಸರಳನ್ನು ಹಿಡಿದು ಎಲ್ಲ ಗಿದಮರಗಳಿಗೆ ತಾಗಿಸುತ್ತ ಹಗಲೂ ಇರುಳೂ ನಡೆಯುತ್ತಾನೆ. ಒಂದು ದಿನ ಮುಂಜಾನೆ ನೋಡಿದರೆ ಅದು ಕಬ್ಬಿಣವಾಗಿ ಬಿಟ್ಟಿದೆ. ಆದರೆ ಅದು ಯಾವ ಗಿಡ ಎಂದು ಈಗಲೂ ತಿಳಿಯದು!
ಈ ಕತೆ ಆಧರಿಸಿ ಅದಾರೋ ನಾಟಕ ಬರೆಯುವ ಯೋಚನೆ ಮಾಡಿದರಂತೆ . ಈ ಕತೆ ಕೇಳಿದ ತೇಜಸ್ವಿಯವರು - ಅವ ಎಂಥಾ ದಡ್ಡ ಕಣ್ರೀ , ಅದು ಬಂಗಾರವಾದಾಗ ಸುಮ್ಮನೆ ಅಲ್ಲಿಂದ ಹೊರಟು ಬಿಡಬಾರ್ದಾ? ' ಅಂದರಂತೆ.
ಇದು ಈ ಸಲದ ಮಯೂರದಲ್ಲಿ ಬಂದಿದೆ.
Rating
Comments
ಉ: ಈ ಕತೆ ಓದಿ ; ನಿಮ್ಮ ಅನಿಸಿಕೆ ತಿಳಿಸಿ.
ಉ: ಈ ಕತೆ ಓದಿ ; ನಿಮ್ಮ ಅನಿಸಿಕೆ ತಿಳಿಸಿ.