ಈ ಕಾಲದ್ದೊಂದು ಕಥೆ
ಚಿತ್ರ
ಈ ಕಾಲದೊಂದೂ ಕಥೆಯನ್ನು ಕೇಳೀ
ಬೆಳಗಾಗ ಎದ್ದೂ ಸ್ಟಾರ್ಬಕ್ಸು ಕಾಫೀ
ಬ್ರೇಕ್ಫಾಸ್ಟಿಗಂತಾ ಡಂಕಿಂಗ್ಡೊನಟ್ಟೂ
ಲಂಚೀನ ಹೊತ್ಗೇ ಮೂರ್ಪ್ಯಾಕು ಚಿಪ್ಸೂ
ರಾತ್ರೀಗೆ ನಾಕೇ ಚೀಸ್ಪೀಟ್ಜ಼ ಸ್ಲೈಸೂ
ಹೊಟ್ಟೇಗೆ ಇಳ್ಸೋಕೊಂದಿಷ್ಟು ಕೋಕೂ
ಇಷ್ಟೆಲ್ಲ ತಿಂದೂ ಕೊನೆಗೀತ ಅಂದಾ
ತೂಕಾನೆ ಯಾಕೋ ಇಳ್ಯೋದೆ ಇಲ್ಲಾ
-ಹಂಸಾನಂದಿ
ಕೊ: ಸುಮ್ನೆ ತಮಾಷೆಗಂತ ಬರೆದದ್ದು ಅಷ್ಟೆ! ಈ ಚುಟುಕಗಳು ಉಪಜಾತಿಯೆಂಬ ಸಾಂಪ್ರದಾಯಿಕ ಛಂದಸ್ಸಿನಲ್ಲಿವೆ - ಇಂದ್ರವಜ್ರ ಮತ್ತೆ ಉಪೇಂದ್ರವಜ್ರ ಎಂಬ ಎರಡೂ ವರ್ಣವೃತ್ತಗಳು ಕಲಬೆರಕೆಯಾದರೆ ಅದಕ್ಕೆ ಉಪಜಾತಿ ಅನ್ನುತ್ತಾರೆ.
ಕೊ.ಕೊ: ಹಲವಾರು ಸಂಸ್ಕೃತ ಸ್ತೋತ್ರಗಳೂ ಈ ಉಪಜಾತಿ ವೃತ್ತದಲ್ಲಿರುತ್ತವೆ. ಕಾಯೇನವಾಚಾ ಮನಸೇಂದ್ರಿಯೇರ್ವಾ .. ಇತ್ಯಾದಿ ಪದ್ಯಗಳನ್ನು ನೆನಪಿಸಿಕೊಳ್ಳಬಹುದು.
ಚಿತ್ರ ಕೃಪೆ: Picture from: http://www.chrismadden.co.uk/cartoons/food-cartoons-cookery-cartoons/pag...
Rating
Comments
ಉ: ಈ ಕಾಲದ್ದೊಂದು ಕಥೆ
ನಮ್ಮವರ ಉಪವಾಸ ವ್ರತ, ಏಕಾದಶಿಗಳು, ರಂಜಾನ್ ಉಪವಾಸಗಳು ನೆನಪಿಗೆ ಬಂದವು!
ಉ: ಈ ಕಾಲದ್ದೊಂದು ಕಥೆ
ಚೆನ್ನಾಗಿದೆ :-)
ನಮ್ಮ ಚೆನ್ನಮಲ್ಲಿಕಾರ್ಜುನನಿಗೂ obesity ಆಗ್ ಬರಾಕಿಲ್ಲ."ತನು ಕರಗದವರಲ್ಲಿ " ಅಂತ ಶುರುವಾಗುವ ಈ ವಚನ ನೋಡಿ!
ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯ ನೀನು
ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯ ನೀನು
ಹದುಳಿಗರಲ್ಲದವರಲ್ಲಿ ಗಂಧಾಕ್ಷತಯನೊಲ್ಲೆಯಯ್ಯ ನೀನು
ಅರಿವು ಕಣ್ತೆರೆಯದವರಲ್ಲಿ ಆರತಿಯನೊಲ್ಲೆಯಯ್ಯ ನೀನು
ಭಾವಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯ ನೀನು
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯ ನೀನು
ತ್ರಿಕರಣಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯ ನೀನು
ಹೃದಯಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯ ನೀನು
ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ
ಚೆನ್ನಮಲ್ಲಿಕಾರ್ಜುನಯ್ಯ.