ಉಗ್ರಂ ಚಿತ್ರ ವಿಮರ್ಶೆ

ಉಗ್ರಂ ಚಿತ್ರ ವಿಮರ್ಶೆ

ಚಿತ್ರದ ಹೇಸರು ಕೇಳಿದರೆ ಗೊತ್ತಾಗುತ್ತೆ ಇದು ಒಂದು ಪಕ್ಕಾ action ಸಿನಿಮಾ ಅಂತ.

ಇಲ್ಲಿ ಉಗ್ರ ರೂಪನ ತಾಳೋರು ಯಾರು ಅಂದ್ರೆ ಅಗಸ್ತ್ಯ(Sri Muruli).

ವಿಷ್ಣುವಿನ ತಾಳ್ಮೆನು ಇರಲಿ & ನರಸಿಂಹನ ಉಗ್ರ ಕೋಪನು ಇರಲಿ ಅಂತ ಅಗಸ್ತ್ಯನಿಗೆ ಅವರ ತಂದೆ ಹೇಳಿದ ಕೊನೆಯಮಾತು.

ತಾಯಿನಂತು ನೋಡಿಲ್ಲ atleast ತಾಯ್ನಡಲ್ಲಿ ಇರೊ ತನ್ನ ತಾಯಿಯ ಸಮಾಧಿಯನ್ನಾದರು ನೋಡಬೇಕು ಅಂತ ವಿದೇಶದಿಂದ ತಾಯ್ನಾಡಿಗೆ ಬಂದ ನಾಯಕಿಗೆ(Hari Priya) ಅಷ್ಟು ಸುಲಭದಲ್ಲಿ ಈ ಭಾಗ್ಯ ಸಿಗೋಲ್ಲ.ಯಾಕೆ ಅಂದ್ರೆ ಅವಳನ್ನ ಸಾಯಿಸಬೇಕು ಅಂತ ಅವಳ ಬರುವಿಕೆಯನ್ನೆ ಕಾಯ್ತ ಇರುತ್ತಾನೆ ಶಿರಾದ ರಾಜಕೀಯ ಮುಖಂಡ ಅವಿನಾಶ್.ಸಂಕಷ್ಟದಲ್ಲಿ ಇರುವ ನಾಯಕಿನ ಕಾಪಡುವುದರ ಮೂಲಕನೇ ನಾಯಕ ಅಗಸ್ತ್ಯನ ಎಂಟ್ರಿ ಹಾಗುತ್ತೆ.

ಇಂಡಿಯಾದ ಭಾವುಟದಲ್ಲಿರೊ ಬಣ್ಣಗಳನ್ನು ನೋಡಿ ಇಂಡಿಯಾನು ಅಷ್ಟೇ ಕಲರ ಫುಲ್ ಆಗಿರುತ್ತೆ ಅಂದುಕೊಂಡು ತನ್ನ ಅಪ್ಪ ಜೈ ಜಗದೀಶ್ ಗೆ ಸ್ಪೇನ್ ಗೇ ಹೋಗ್ತಿನಿ ಅಂತ ಸುಳ್ಳು ಹೇಳಿ ಇಂಡಿಯಾಗೆ ಬಂದ ನಾಯಕಿಗೆ ಇಲ್ಲಿ ಯಾವುದು ಸರಿ ಇಲ್ಲ ಅಂತ ಬೇಗನೆ ಅರ್ಥ ಮಾಡಿಕೊಂಡು ನಾಯಕ ಅಗಸ್ತ್ಯನ ಮುಂದೆ I hate India ಅಂತಾಳೆ.ನಾಯಕಿ ಬೇರೆ ಎಲ್ಲೆ ಇದ್ರು ಅವಳು ಸುರಕ್ಷಿತವಾಗಿರಲ್ಲ ಅಂತ ಗೊತ್ತಾದಗ ಅವಳನ್ನ ಅಮ್ಮನ ಹತ್ತಿರ ಕೆಲಸ ಕೇಳಿಕೊಂಡು ಬಂದಿದ್ದಾಳೆ ಅಂತ ಸುಳ್ಳು ಹೇಳಿ ತನ್ನ ಮನೆಯಲ್ಲೆ ಇರು ಅಂತ ಹೇಳಿ ಅವಳ ಆಸೇನ ನೆರವೇರಿಸುತ್ತಾನೆ. I hate India ಅಂದ ನಾಯಕಿ ಕ್ರಮೇಣ ನನಗೆ ಈ ಜಾಗ ಬಿಟ್ಟು ಹೋಗೋಕೆ ಇಷ್ಟ ಆಗ್ತಿಲ್ಲ ಅಂದು I Love India ಅಂತ ಹೇಳ್ತಾಳೆ.

ಅಗಸ್ತ್ಯ ತನ್ನ ಉಗ್ರ ರೂಪವನ್ನು ಬಿಟ್ಟು ಕೋಲಾರದಲ್ಲಿ ಸಣ್ಣ ಗ್ಯಾರೇಜ್ ಅಂಗಡಿನ ಇಟ್ಟುಕೊಂಡು ತನ್ನ ತಾಯಿ ಜೋತೆ ಜೀವನ ನಡೆಸುತ್ತ ಇರುತ್ತಾನೆ. ಅಗಸ್ತ್ಯನ ನಿಜವಾದ ಕಥೆ ಇರೋದೆ ಉತ್ತರ ಕರ್ನಾಟಕದ ಮುಗೋರ್ ನಲ್ಲಿ. ಇಂಟರ್ವಲ್ ನಂತರ ಸ್ಟಾರ್ಟ್ ಹಾಗೋ ಅಗಸ್ತ್ಯನ flashback ಕಥೆ ತುಂಬ ವೇಗವಾಗಿ ಸಾಗುತ್ತ ಹೋಗುತ್ತದೆ.

ಸ್ನೇಹಿತ ಬಾಲ(ತಿಲಕ್) ಹತ್ತು ಜನ ಮೀಸೆ ಇರುವ ಹುಡುಗರನ್ನ ಇಟ್ಟುಕೊಂಡು ಗುಂಪು ಕಟ್ಟಿಕೊಳ್ಳದಕ್ಕಿಂತ ಮೀಟರ್ ಇರುವ ಒಬ್ಬನು ಇದ್ರೆ ಸಾಕು ಅಂತ ಅಗಸ್ತ್ಯನ ತನ್ನ ಗುಂಪಿಗೆ ಸೇರಿಸಿಕೊಳ್ಳುತ್ತಾನೆ.

ಹೆಣ್ಣಿನ ಕೋಗಿಗೆ ಮತ್ತು ಮಗುವಿನ ಅಳುಗೆ ಕರಗದೆ ಇರುವ ಮನಸಿಲ್ಲ ಅನ್ನುವ ಹಾಗೆ ಅಪ್ಪನ ಕೊಂದವನನ್ನು ತೋರಿಸಿದರು ಉಗ್ರರೋಪವನ್ನು ತಾಳದವ ಒಂದು ಹೆಣ್ಣಿನ ಕೋಗು ಅಗಸ್ತ್ಯನ ನ್ನು ನರಸಿಂಹನ ಉಗ್ರವಾತರವನ್ನು ತಾಳುವ ಹಾಗೆ ಮಾಡುತ್ತದೆ.ಇಲ್ಲಿ ದಂಡ ಓಡಿದ್ರೆ ಮರಳಲ್ಲಿ ಮನೆನು ಕಟ್ಟೋಕೇ ಹಾಗೋಲ್ಲ ದಂಡಿಸಿದ್ರೆ ಸಾಮ್ರಜ್ಯನೆ ಕಟ್ಟಬಹುದು ಅಂತ ಅಂದು ಈಡಿ ಮುಗೋರ್ ತನ್ನ ವಶಕ್ಕೆ ತಗೋತಾನೆ.

ಇಲ್ಲಿ ಜೈ ಜಗದೀಶ್ಗೆ ಮತ್ತು ಅವಿನಾಶ್ಗೆ ದ್ವೇಷ ಯಾಕೀರುತ್ತೆ? ಅಗಸ್ತ್ಯನ actual flashback ಕಥೆ ಏನು? I Love India ಅಂದ ನಾಯಕಿ I Love You ಅಗಸ್ತ್ಯ ಅಂತ ಹೇಳ್ತಾಳ? ಇದೆಲ್ಲ ಗೋತ್ತಾಗಬೇಕು ಅಂದ್ರೆ ಒಮ್ಮೆ ಮುರಳಿಯ ಉಗ್ರಾವಾತರದ "ಉಗ್ರಂ" ನ ನೋಡಿ.

ಸಿನಿಮಾದಲ್ಲಿ ರವಿ ಅವನ ಹಿನ್ನಲೆ ಸಂಗೀತ, ರವಿವರ್ಮ ಅವರ ಸಹಾಸ ಧ್ರುಶ್ಯಗಳು,ರವಿವರ್ಮನ್ ರವರ ಛಾಯಗ್ರಹಣ ಮತ್ತು ಪ್ರಶಾಂತ್ ನೀಲ್ ನಿರ್ದೇಶನ ಉತ್ತಮವಾಗಿದೆ.

ಶ್ರೀ ಮುರಳಿ ಅವರ ನೋಟದಲ್ಲಿ ಇದ್ದ ಉಗ್ರತೆ ಅವರ ಕಂಠಸಿರಿಯಲ್ಲಿ ಇರಲಿಲ್ಲ ಅನ್ನೋದು ಬಿಟ್ಟರೆ ಶ್ರೀ ಮುರಳಿ ಅವರು ತಮ್ಮ ಪಾತ್ರಕ್ಕೆ ಜೀವ ತುಂಬಿ ಉತ್ತಮವಾಗಿ ಅಭಿನಯಿಸಿದ್ದಾರೆ.ಶ್ರೀ ಮುರಳಿಗೆ ಇದು ಒಂದು comeback ಸಿನಿಮಾ ಅಂತಾನೆ ಹೇಳಬಹುದು. 

ಒಟ್ಟಿನಲ್ಲಿ "ಉಗ್ರಂ" ಒಂದು ಉತ್ತಮ ಸಿನಿಮಾ ಅಂದರು ತಪ್ಪೆನಿಲ್ಲ.

Rating
No votes yet