ಉತ್ತರ ದ್ರುವದಿಂ ದಕ್ಷಿಣ ದ್ರುವಕೂ
ದಕ್ಷಿಣದ ಪದ-ಉತ್ತರದ ಪದ, ಇಲ್ಲಿ ನನ್ನ ಅಳತೆಗೆ ಸಿಕ್ಕ ಕೆಲವೇ ಕೆಲವು ಪದಗಳನ್ನು ಪಟ್ಟಿ ಮಾಡಿದ್ದೇನೆ, ಇದು ವ್ಯತ್ಯಾಸವನ್ನು ಎತ್ತಿ ತೋರಲಿಕ್ಕೆ ಅಲ್ಲ, ಎರಡೂ ಪದಗಳು ಕನ್ನಡದ್ದೇ ಆಗಿರಬಹುದು, ಅಥವ ಅಲ್ಲದಿರಬಹುದು, ಆದರೆ ಉತ್ತರದ ಹೆಚ್ಚಿನ ಪದಗಳು ಕನ್ನಡ ಮೂಲದವು. ಮೊದಲ ಪದ ದಕ್ಷಿಣದಲ್ಲಿ ಬಳಸುವ ಪದ, ಎರಡನೆಯದು ಉತ್ತರದಲ್ಲಿ ಬಳಸುವ ಪದ.
ದೇವಸ್ಠಾನ-ಗುಡಿ
ನದಿ-ಹೊಳೆ
ಆಹಾರ-ಖೂಳು(ಸಿಟ್ಟಿನಿಂದ ಊಟಕ್ಕೆ ಕರೆವಾಗ)
ಭೂತ-ದೆವ್ವ
ಬೆಟ್ಟ-ಗುಡ್ಡ
ಪೆನ್ಚಿಲ್-ಸೀಸ
ರೀಫಿಲ್-ಕಡ್ಡಿ
ಇಂಕ್-ಮಸಿ
ಮಗು-ಕೂಸು
ತಿಂಡಿ-ತಿನಿಸು(ತಿಂಡಿಗೆ ಕೆರೆತ ಎಂಬ ಅರ್ಥವಿದೆ)
ಕೆಸರು-ರಾಡಿ
ದಾರಿ-ಹಾದಿ
ರಾಷ್ಟ್ರಕವಿ ಕುವೆಂಪು ಮೊದಲು ಬರೆಯ ಹೊರಟಿದ್ದು ಇಂಗ್ಲೀಷ್ನಲ್ಲಿ, ಕಾರಣ ದಕ್ಷಿಣದಲ್ಲಿರುವ ಇಂಗ್ಲೀಷ್ನ ದಟ್ಟ ಪ್ರಭಾವ. ಇತ್ತೀಚೆಗೆ ಇದು ಎಲ್ಲ ಕಡೆಗೂ ಹಬ್ಬಿರುವುದು ನಮ್ಮ ನಾಡಿನ ವಿಪರ್ಯಾಸ.
Rating
Comments
ನಿಮಗೆ ತಿಳಿದ ಪದಗಳ ಪಟ್ಟಿ ಮಾಡಿ
ಸಾಂಸ್ಕೃತಿಕ ಕೊಡುಕೊಳ್ಳುವಿಕೆ ಬೇರೆ,ಬೌದ್ಧಿಕ ದಾಸ್ಯ ಬೇರೆ