ಉಪದೇಶ-ಪಾಲನೆ
ಉಪದೇಶಗಳನು ಹೇಳುವವರೆ,ಕೇಳುವವರೆ ಎಲ್ಲ
ಅದ ಪಾಲಿಸುವವವರಿಂದು ಮರೆಯಾಗುತಿಹರಲ್ಲ
ತುಟಿಗಳಂಚಲಿ ಮಾತ್ರ ಜಪಿಸುತಲಿ ರಾಮ ನಾಮ
ಒಳಗೆ ಮನಸಲಿ ತುಂಬಿಹುದು ನೂರೆಂಟು ಕಾಮ
ದಾಸರಂದರು ಅಂದು ಸತ್ಯವಂತರಿಗಿದು ಕಾಲವಲ್ಲ
ಸೋಜಿಗವು ಸತ್ಯವಂತ ನಾನೆಂದುಕೊಳ್ಳುವೆವು ಎಲ್ಲ
ನಮ್ಮೊಳು ತುಂಬಿಹ ದೃಷ್ಟತನವ ಅರಿಯಬೇಕಿಹುದು
ಅದನಳಿಸಿ ಸಾತ್ವಿಕತೆಯ ಮನದಿ ಬೆಳಸಬೇಕಿಹುದು
ಉಪದೇಶಿಸುವ ಮುನ್ನ ನೀ ಅಳವಡಿಸಿಕೋ ಉಪದೇಶವನು
ಮೆಚ್ಚುವನು ಶ್ರೀ ನರಸಿಂಹ ವಿನಯ ತುಂಬಿರುವ ಮನಸನು
Rating
Comments
ಚೆನ್ನಾಗಿದೆ ಸತೀಶವ್ರೆ.
ಚೆನ್ನಾಗಿದೆ ಸತೀಶವ್ರೆ.
ನಾವು ಸರಿಯಾಗಿದ್ದೇವಾ ಅಂಥಾ ನಮ್ಮನ್ನ ನಾವು ಪ್ರಶ್ನಿಸಿ ತಪ್ಪಾಗಿದ್ದಲ್ಲಿ ಸರಿಪಡಿಸಿಕೊಂಡರೆ ಉಪದೇಶ ಹೇಳುವವರ ಅವಶ್ಯಕತೆಯೇ ಇರುವುದಿಲ್ಲ
In reply to ಚೆನ್ನಾಗಿದೆ ಸತೀಶವ್ರೆ. by Chikku123
" ನಾವು ಸರಿಯಾಗಿದ್ದೇವಾ ಅಂಥಾ
" ನಾವು ಸರಿಯಾಗಿದ್ದೇವಾ ಅಂಥಾ ನಮ್ಮನ್ನ ನಾವು ಪ್ರಶ್ನಿಸಿ ತಪ್ಪಾಗಿದ್ದಲ್ಲಿ ಸರಿಪಡಿಸಿಕೊಂಡರೆ ಉಪದೇಶ ಹೇಳುವವರ ಅವಶ್ಯಕತೆಯೇ ಇರುವುದಿಲ್ಲ " ಸತ್ಯವಾದ ಮಾತು ಚೇತನ್ ರವರೇ ಧನ್ಯವಾದಗಳೊಂದಿಗೆ......ಸತೀಶ್